ಕರ್ನಾಟಕ

karnataka

ETV Bharat / science-and-technology

ಇಂದು ಸಂಜೆ 4 ಗಂಟೆಗೆ ಎಲ್​-1 ಪಾಯಿಂಟ್​ನಲ್ಲಿ ಆದಿತ್ಯ ನೌಕೆ ಕೂರಿಸುವ ಪ್ರಕ್ರಿಯೆ: ಇಸ್ರೋ - ISRO

ಚಂದ್ರನ ಮೇಲೆ ವಿಕ್ರಮ ಸಾಧಿಸಿದ್ದ ಇಸ್ರೋ, ಈಗ ಸೂರ್ಯನ ಅಧ್ಯಯನ ನಡೆಸುವ ಮಹತ್ವದ ಹೆಜ್ಜೆಯತ್ತ ದಾಪುಗಾಲಿಟ್ಟಿದೆ.

ಇಸ್ರೋ
ಇಸ್ರೋ

By PTI

Published : Jan 6, 2024, 11:35 AM IST

ಬೆಂಗಳೂರು:ಸೂರ್ಯನ ಕೌತುಕಗಳನ್ನು ಅಧ್ಯಯನ ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ಆದಿತ್ಯ ಎಲ್​-1 ನೌಕೆಯು ಇಂದು ತನ್ನ ಗಮ್ಯಸ್ಥಾನವನ್ನು ತಲುಪಲಿದೆ. ಭೂಮಿಯಿಂದ 1.5 ಮಿಲಿಯನ್​ ಕಿಮೀ ದೂರದಲ್ಲಿರುವ ಲ್ಯಾಂಗ್ರೇಜಿಯನ್​ ಪಾಯಿಂಟ್​ನಲ್ಲಿ ನೌಕೆಯನ್ನು ಸ್ಥಿರಗೊಳಿಸುವ ಪ್ರಯತ್ನವನ್ನು ಇಸ್ರೋ ಶನಿವಾರ ಸಂಜೆ ಮಾಡಲಿದೆ.

ಇಸ್ರೋ ಪ್ರಕಾರ, ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯ-ಭೂಮಿಯ ನಡುವಿನ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ. L1 ಬಿಂದುವಿನ ಸುತ್ತಲಿನ ಹಾಲೋ ಕಕ್ಷೆಯಲ್ಲಿ ಉಪಗ್ರಹವು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಜೊತೆಗೆ ಸೌರ ಚಟುವಟಿಕೆಗಳು ಮತ್ತು ಅಲ್ಲಿನ ಹವಾಮಾನದ ಮೇಲೂ ನಿಗಾ ವಹಿಸಲಿದೆ.

ಇಂದು ಸಂಜೆ 4 ಗಂಟೆಗೆ ಆದಿತ್ಯ ನೌಕೆಯನ್ನು ಎಲ್​-1 ಪಾಯಿಂಟ್​ನಲ್ಲಿ ಸ್ಥಿರಗೊಳಿಸಲಾಗುತ್ತದೆ. ಇಲ್ಲವಾದಲ್ಲಿ ಅದು ಸೂರ್ಯನ ಕಡೆಗೆ ಪ್ರಯಾಣ ಮುಂದುವರೆಸಲಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್​ವಿ-ಸಿ 57) ಮೂಲಕ ಕಳೆದ ವರ್ಷ ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (ಎಸ್​ಡಿಎಸ್​ಸಿ) ಎರಡನೇ ಉಡಾವಣಾ ಪ್ಯಾಡ್​ನಿಂದ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿದೆ.

63 ನಿಮಿಷ 20 ಸೆಕೆಂಡುಗಳ ಹಾರಾಟದ ಅವಧಿಯ ನಂತರ ಇದನ್ನು ಭೂಮಿಯ ಸುತ್ತಲೂ 235 x 19500 ಕಿ.ಮೀ ಅಂಡಾಕಾರದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು. ನಂತರ ಬಾಹ್ಯಾಕಾಶ ನೌಕೆಯು ಸರಣಿ ಕುಶಲತೆಗಳಿಗೆ ಒಳಗಾಯಿತು ಮತ್ತು ಭೂಮಿಯ ಪ್ರಭಾವದ ವಲಯದಿಂದ ತಪ್ಪಿಸಿಕೊಂಡು ಸೂರ್ಯ-ಭೂಮಿಯ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಕಡೆಗೆ ಸಾಗಿತ್ತು.

ಆದಿತ್ಯ-L1 ಮಿಷನ್‌ನ ಪ್ರಮುಖ ಉದ್ದೇಶಗಳು:

  • ಸೌರ ಮೇಲಿನ ವಾತಾವರಣದ (ಕ್ರೋಮೋಸ್ಫಿಯರ್ ಮತ್ತು ಕರೋನಾ) ಡೈನಾಮಿಕ್ಸ್ ಅಧ್ಯಯನ.
  • ಕ್ರೋಮೋಸ್ಪಿರಿಕ್ ಮತ್ತು ಕರೋನಾದ ಹೀಟಿಂಗ್, ಅಯಾನೀಕರಿಸಿದ ಪ್ಲಾಸ್ಮಾದ ಭೌತಶಾಸ್ತ್ರ, ಕರೋನಲ್ ಮಾಸ್ ಎಜೆಕ್ಷನ್‌ಗಳ ಪ್ರಾರಂಭ ಮತ್ತು ಜ್ವಾಲೆಗಳ ಅಧ್ಯಯನ.
  • ಪ್ಲಾಸ್ಮಾ ಪರಿಸರ, ಸೂರ್ಯನಿಂದ ಬಿಡುಗಡೆಯಾಗುವ ಕಣಗಳ ಡೈನಾಮಿಕ್ಸ್ ಅಧ್ಯಯನ.
  • ಸೌರ ಕರೋನಾದ ತಾಪದ ಅಧ್ಯಯನ.
  • ಕರೋನಲ್ ಮತ್ತು ಅದರ ಲೂಪ್‌ಗಳಲ್ಲಿನ ತಾಪಮಾನ, ವೇಗ ಮತ್ತು ಸಾಂದ್ರತೆಯ ಬಗ್ಗೆ ಸಂಶೋಧನೆ.
  • ಕ್ರೋಮೋಸ್ಪಿಯರ್, ಬೇಸ್ ಮತ್ತು ಕರೋನಾದಲ್ಲಿ ಸಂಭವಿಸುವ ಸೌರ ಸ್ಫೋಟದ ಬಗ್ಗೆ ಮಾಹಿತಿ.
  • ಸೌರ ಕರೋನಾದಲ್ಲಿ ಮ್ಯಾಗ್ನೆಟಿಕ್ ಫೀಲ್ಡ್ ಟೋಪೋಲಜಿ ಮತ್ತು ಮ್ಯಾಗ್ನೆಟಿಕ್ ಫೀಲ್ಡ್​ಗಳ ಬಗ್ಗೆ ಮಾಪನ.

ವಿದ್ಯುತ್ ​ಕಾಂತೀಯ, ಕಣ ಮತ್ತು ಕಾಂತಕ್ಷೇತ್ರ ಶೋಧಕಗಳನ್ನು ಬಳಸಿಕೊಂಡು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರ ಪದರಗಳನ್ನು (ಕರೋನಾ) ಅಧ್ಯಯನ ಮಾಡುವ ಈ ನೌಕೆಯು ಏಳು ಪೇಲೋಡ್​ಗಳನ್ನು ಹೊತ್ತೊಯ್ದಿದೆ.

ಇದನ್ನೂ ಓದಿ:ಜಿಸ್ಯಾಟ್-20 ಉಡಾವಣೆಗೆ ಸ್ಪೇಸ್​ಎಕ್ಸ್​ನ ಫಾಲ್ಕನ್ ರಾಕೆಟ್​ ಬಳಸಲಿದೆ ಇಸ್ರೊ

ABOUT THE AUTHOR

...view details