ತಿರುಪತಿ (ಆಂಧ್ರಪ್ರದೇಶ): ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್ 1 ಮಿಷನ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ವಿಜ್ಞಾನಿಗಳು ತಿರುಮಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಚಂದ್ರಯಾನ -3ರ ಯಶಸ್ಸಿನ ಬೆನ್ನಲ್ಲೆ ಇಸ್ರೋ ಮತ್ತೊಂದು ಮಹತ್ವದ ಬಾಹ್ಯಾಕಾಶ ಅಧ್ಯಯನಕ್ಕೆ ಮುಂದಾಗಿದ್ದು, ನಾಳೆ (ಸೆಪ್ಟೆಂಬರ್ 02) ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್ 1 ಮಿಷನ್ ಹೊತ್ತ PSLV-C57 ರಾಕೆಟ್ ಉಡಾವಣೆಯಾಗಲಿದೆ.
ಇಸ್ರೋದ ವಿಜ್ಞಾನಿಗಳು ನಾಳೆ ನಡೆಯುವ ಉಡಾನಣೆ ಮತ್ತು ಆದಿತ್ಯ ಯೋಜನೆಯ ಯಶಸ್ಸಿಗಾಗಿ ತಿರುಮಲ ಬೆಟ್ಟದ ಮೇಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ. ಆದಿತ್ಯ L1 ಬಾಹ್ಯಾಕಾಶ ನೌಕೆಯು ಸೌರ ಕರೋನದ ದೂರಸ್ಥ ವೀಕ್ಷಣೆಗಳನ್ನು ಒದಗಿಸಲು ಮತ್ತು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಎಲ್1 (ಸೂರ್ಯ-ಭೂಮಿಯ ನಡುವಿನ ಗುರುತ್ವ ರಹಿತ ಪಾಯಿಂಟ್) ನಲ್ಲಿ ಸೌರ ಅಧ್ಯಯನ ಮಾಡಲಾಗುತ್ತದೆ.
ಇಸ್ರೋ ಈ ವರೆಗೆ ಒಂದು ತಿರುಪತಿಗೆ ತೆರಳಿ ಪ್ರಾರ್ಥಿಸುವುದನ್ನು ವಾಡಿಕೆ ಬೆಳೆಸಿಕೊಂಡು ಬಂದಿದೆ. ತನ್ನ ಮಹತ್ವದ ಯೋಜನೆಯ ಮೊದಲು ತಿರುಪತಿಗೆ ತೆರಳಿ ಪೂಜೆ ಸಲ್ಲಿಸುತ್ತಿದೆ. ಚಂದ್ರಯಾನ-3 ಉಡಾವಣೆಗೂ ಮುನ್ನ ಜುಲೈ 13ರಂದು ಇಸ್ರೋ ವಿಜ್ಞಾನಿಗಳು ಚಂದ್ರಯಾನದ ಸಣ್ಣ ಮಾದರಿಯೊಂದಿಗೆ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.