ನವದೆಹಲಿ: ನೂತನ ವರ್ಷ 2023ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೊಸ ವಿಜ್ಞಾನ ಪ್ರಯೋಗಗಳತ್ತ ಗಮನ ಹರಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಮೈಲಿಗಲ್ಲು ನೆಡಲು ಯೋಜನೆ ರೂಪಿಸಿದೆ. ಅದರಂತೆ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಮತ್ತು ಚಂದ್ರಯಾನ-3 ಮಿಷನ್ಗೆ ಇಸ್ರೋ ಸಿದ್ಧತೆ ನಡೆಸಿದೆ.
ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶಯಾನ: ಈ ಹೊಸ ವರ್ಷ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶಯಾನ ಪ್ರಯೋಗಗಳ ಸರಣಿಗೆ ಸಾಕ್ಷಿಯಾಗಲಿದೆ. 2023ರ ಕೊನೆಯ ತ್ರೈಮಾಸಿಕದಲ್ಲಿ ಗಗನಯಾನ್ ಯೋಜನೆ ಪ್ರಯೋಗವಾಗಲಿದೆ. ಇದು ಮಾನವ ರಹಿತ ಉಡಾವಣಾ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸುವ ಗುರಿಯನ್ನು ಹೊಂದಿದೆ. ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ರನ್‌ವೇ ಲ್ಯಾಂಡಿಂಗ್ ಪ್ರಯೋಗವನ್ನು (ಆರ್‌ಎಲ್‌ವಿ-ಲೆಕ್ಸ್) ಈ ವರ್ಷದ ಆರಂಭದಲ್ಲಿ ಕರ್ನಾಟಕ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ನಡೆಸಲು ಇಸ್ರೋ ಯೋಜಿಸಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಸಂಸತ್ತಿಗೆ ತಿಳಿಸಿದ್ದಾರೆ.
ನವೆಂಬರ್‌ನಲ್ಲಿ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ಅನ್ನು ಉಡಾವಣೆ ಮಾಡಿದ ಸ್ಕೈರೂಟ್ ಏರೋಸ್ಪೇಸ್ ಉಪಗ್ರಹವನ್ನು ಮುಂದಿನ ವರ್ಷ ಕಕ್ಷೆಗೆ ಸೇರಿಸಲು ಯೋಜಿಸಿದೆ. "ನಾವು ಆರು ವಾಣಿಜ್ಯ ಹೈಪರ್‌ಸ್ಪೆಕ್ಟ್ರಲ್ ಇಮೇಜರಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಅದು ಮುಂದಿನ ವರ್ಷ ಉಡಾವಣೆಗೆ ಸಿದ್ಧವಾಗಲಿದೆ" ಎಂದು ಪಿಕ್ಸೆಲ್ ಸಹ-ಸಂಸ್ಥಾಪಕ ಮತ್ತು ಸಿಇಒ ಅವೈಸ್ ಅಹ್ಮದ್ ತಿಳಿಸಿದ್ದಾರೆ. ಪ್ರಪಂಚದಾದ್ಯಂತ ಇನ್ನು ಅನೇಕ ರಾಕೆಟ್ ಕಂಪೆನಿಗಳು ತಮ್ಮ ಉಪಗ್ರಹ ಉಡಾವಣೆಯನ್ನು ಮಾಡಲಿವೆ. ಅವುಗಳು ನಮ್ಮೊಂದಿಗೆ ಸ್ಫರ್ಧಿಸಲಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಸ್ಮಾರ್ಟ್ ಫೋನ್ನಲ್ಲಿ ಬರಲಿದೆ ಟೆಲಿಫೋಟೋ ಸೆನ್ಸಾರ್