ಚೆನ್ನೈ:ವಿಕ್ರಮ್ ಲ್ಯಾಂಡರ್ ನಿಗದಿತ ಸಮಯದಲ್ಲೇ ಲ್ಯಾಂಡಿಂಗ್ ಆಗಲಿದೆ. ಚಂದ್ರಯಾನ -3 ರ ಯೋಜನೆಯಂತೆಯೇ ಎಲ್ಲವೂ ನಡೆಯಲಿದೆ. ಬುಧವಾರ ನಿಗದಿಯಾದಂತೆ ವಿಕ್ರಮ್ ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಇಸ್ರೋ ಸನ್ನದ್ದವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವುದೇ ಪ್ಲಾನ್ ಬಿ ಹೊಂದಿಲ್ಲ ಎಂದು ಇಸ್ರೋದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ವಿಕ್ರಂ ಸಾಪ್ಟ್ ಲ್ಯಾಂಡಿಂಗ್ನಲ್ಲಿ ಯಾವುದೇ ಮುಂದೂಡಿಕೆ ಅಥವಾ ಪ್ಲಾನ್ ಬಿ ಪ್ಲಾನ್ ಅನ್ನು ಇಸ್ರೋ ಹೊಂದಿಲ್ಲ ಎಂದು ಈ ಅಧಿಕಾರಿ ಹೇಳಿದ್ದಾರೆ. " ಆರಂಭದಲ್ಲಿ ಯೋಜಿಸಿದಂತೆ ಬುಧವಾರ ಸಂಜೆ ಲ್ಯಾಂಡಿಂಗ್ ಆಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರೊಪಲ್ಷನ್ ಮಾಡ್ಯೂಲ್ ನಿಂದ ಹೊರ ಬಂದಿರುವ ವಿಕ್ರಮ ಇಸ್ರೋ ಯೋಜಿಸಿದಂತೆ ಚಂದಪ್ಪನ ಅಂಗಳ ತಲುಪಲು ಹಂತ ಹಂತವಾಗಿ ಬಾಹ್ಯಾಕಾಶ ವಿಜ್ಞಾನಿಗಳ ಆದೇಶದಂತೆ ದಾಪುಗಾಲು ಇಡುತ್ತಿದ್ದಾನೆ. ಇನ್ನು ಲ್ಯಾಂಡರ್ನ ಎಲ್ಲಾ ವ್ಯವಸ್ಥೆಗಳು ಉತ್ತಮ ಸ್ಥಿತಿಯಲ್ಲಿದೆ ಎಂದು ಇಸ್ರೋ ದೃಢಪಡಿಸಿದೆ. ಲ್ಯಾಂಡರ್ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದಲ್ಲಿ ಲ್ಯಾಂಡಿಂಗ್ ಅನ್ನು ಆಗಸ್ಟ್ 27 ಕ್ಕೆ ಮುಂದೂಡಲಾಗುವುದು ಎಂದು ಇಸ್ರೋದ ಹಿರಿಯ ತಂತ್ರಜ್ಞರು ತಿಳಿಸಿದ್ದಾರೆ ಎಂಬ ಮಾಹಿತಿ ಬಗ್ಗೆ ಪ್ರಶ್ನಿಸಿದಾಗ, ಸೋಮನಾಥ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
“ಲಾಂಡರ್ನ ಎಲ್ಲ ಸಿಸ್ಟಮ್‌ಗಳು ನಿಯಮಿತ ತಪಾಸಣೆಗೆ ಒಳಗಾಗುತ್ತಿವೆ. ಚಂದ್ರಯಾನ ಸುಗಮವಾಗಿ ತನ್ನ ಕೆಲಸವನ್ನು ಮುಂದುವರಿಸಿದೆ . ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (MOX) ಶಕ್ತಿ ಮತ್ತು ಉತ್ಸಾಹದಿಂದ ಝೇಂಕರಿಸುತ್ತಿದೆ ಎಂದು ಇಸ್ರೋ ತಿಳಿಸಿದೆ. ಕೊನೆ ಗಳಿಗೆಯಲ್ಲಿ ಯಾವುದೇ ಸಮಸ್ಯೆ ಉಂಟಾದರೆ, ಪ್ಲಾನ್ ಬಿ ಇಸ್ರೋಗೆ ಹೋಗಲಿದೆ. ISRO ಪ್ರಕಾರ, ವಿಕ್ರಂ ಲ್ಯಾಂಡರ್ ತನ್ನ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಯೊಂದಿಗೆ ಲ್ಯಾಂಡಿಂಗ್ ಸೈಟ್‌ನ ಚಿತ್ರಗಳನ್ನು ಸೆರೆಹಿಡಿಯುತ್ತಿದೆ.
LPDC ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ ಅನ್ನು ಆನ್‌ಬೋರ್ಡ್ ಚಂದ್ರನ ನಕ್ಷೆಯೊಂದಿಗೆ ಹೊಂದಿಸುವ ಮೂಲಕ ಅದರ ಸ್ಥಾನವನ್ನು (ಅಕ್ಷಾಂಶ ಮತ್ತು ರೇಖಾಂಶ) ನಿರ್ಧರಿಸಲು ಸಹಾಯ ಮಾಡುತ್ತದೆ. ವಿಕ್ರಮ್ ಲ್ಯಾಂಡರ್, ಹಜಾರ್ಡ್ ಡಿಟೆಕ್ಷನ್ ಅಂಡ್ ಅವಾಯಿಡೆನ್ಸ್ ಕ್ಯಾಮೆರಾ (LHDAC) ಎಂಬ ಮತ್ತೊಂದು ಕ್ಯಾಮೆರಾವನ್ನು ಸಹ ಹೊಂದಿದೆ. ಈ ಕ್ಯಾಮರಾ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಲು ಬೇಕಾದ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಜಾಗ ಹುಡುಕಲು ಈ ಕ್ಯಾಮರಾ ಸಹಾಯ ಮಾಡುತ್ತದೆ.
ಅದೇನೇ ಇರಲಿ, 600 ಕೋಟಿ ರೂ ಮೊತ್ತದ ಚಂದ್ರಯಾನ-3 ಮಿಷನ್‌ನ ಮುಖ್ಯ ಉದ್ದೇಶ ಎಂದರೆ ಅದು, ಚಂದ್ರನ ಮಣ್ಣಿನಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವುದೇ ಆಗಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ (2,148 ಕೆಜಿ ತೂಕ), ಲ್ಯಾಂಡರ್ (1,723.89 ಕೆಜಿ) ಮತ್ತು ರೋವರ್ (26 ಕೆಜಿ) ಅನ್ನು ಒಳಗೊಂಡಿದೆ. ಒಂದೆರಡು ದಿನಗಳ ಹಿಂದೆ, ಲ್ಯಾಂಡರ್ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಟ್ಟಿತು ಮತ್ತು ಎರಡೂ ಈಗ ಚಂದ್ರನನ್ನು ಸುತ್ತುತ್ತಿವೆ. ರೋವರ್ ಲ್ಯಾಂಡರ್ ಒಳಗೆ ಇದೆ. (IANS)
ಇದನ್ನು ಓದಿ:ನಾಳಿನ ಚಂದ್ರಯಾನ-3 ಲ್ಯಾಂಡಿಂಗ್ ಕುತೂಹಲ ಇಡೀ ಮನುಕುಲಕ್ಕಿದೆ: ಬಾಹ್ಯಾಕಾಶ ತಜ್ಞ ರಾಘವೇಂದ್ರ ಕುಲಕರ್ಣಿ