ಚೀನಾ ಒಡೆತನದ ವಿವೋನ iQOO ಮೊಬೈಲ್ ಅತ್ಯಾಧುನಿಕ ಸೌಕರ್ಯವುಳ್ಳ, ಬಜೆಟ್ ಫ್ರೆಂಡ್ಲಿಯಾಗಿರುವ ಹೊಸ ಸ್ಮಾರ್ಟ್‌ಫೋನ್ iQOO Z7 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಮಾರ್ಚ್ 21ರಂದು ಮಾರತದ ಮಾರುಕಟ್ಟೆಗೆ ಈ ಫೋನ್ ಬರಲಿದ್ದು, ಈ ಫೋನ್ MediaTek Dimensity 920 5G ಪ್ರೊಸೆಸರ್ ಚಿಪ್ನಿಂದ ಚಾಲಿತವಾಗಲಿದೆ ಎಂದು ಕಂಪನಿ ತಿಳಿಸಿದೆ.
ಈ ಸ್ಮಾರ್ಟ್‌ಫೋನ್ ರೆಡ್ಮಿ ನೋಟ್ 12 ಸರಣಿ ಮತ್ತು ರಿಯಲ್ಮಿ 10 ಸರಣಿಗೆ ಸ್ಪರ್ಧೆಯಾಗಲಿದೆ ಎಂಬ ನಿರೀಕ್ಷೆ ಇದೆ.
ಬಜೆಟ್ ಫ್ರೆಂಡ್ಲಿ: ಭಾರತದಲ್ಲಿ ಮೆಟ್ರೋಪಾಲಿಟನ್ ಸೇರಿದಂತೆ ಅನೇಕ ನಗರಗಳಲ್ಲಿ ಈಗಾಗಲೇ 5ಜಿ ಇದ್ದು, ಈ ಬಳಕೆದಾರರಿಗೆ ಸ್ನೇಹಿಯಾಗಿ ಈ ಹೊಸ ಸ್ಮಾರ್ಟ್‌ಫೋನ್ ಇರಲಿದೆ. 17,499 ರಿಂದ ಫೋನ್ ದರ ಪ್ರಾರಂಭವಾಗಲಿದೆ. ಈ ಫೋನ್ಗಳನ್ನು ಬಳಕೆದಾರರು ಅಮೆಜಾನ್ ಅಥವಾ iQOO ಇ-ಸ್ಟೋರ್ ಮೂಲಕ ಖರೀದಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ. ಕಂತಿನ ಆಧಾರದ ಮೇಲೆ ಕೂಡ ಈ ಫೋನ್ ಕೊಳ್ಳುವ ಸೌಲಭ್ಯವನ್ನು ನೀಡಲಾಗಿದೆ.
ಈ ಹೊಸ ಸ್ಮಾರ್ಟ್ ಫೋನ್ ಎರಡು ಬಣ್ಣದಲ್ಲಿ ಲಭ್ಯವಿದೆ. ಆಕಾಶ ನೀಲಿಯ ನಾರ್ವೆ ಬ್ಲೂ ಮತ್ತು ಪೆಸಿಫಿಕ್ ನೈಟ್ ಬಣ್ಣ ಇದರ ಅಂದ ಹೆಚ್ಚಿಸಲಿದೆ.
ಅತ್ಯತ್ತಮ ಕ್ಯಾಮರಾ: ಈ ಮೊಬೈಲ್ನ ಮತ್ತೊಂದು ವಿಶೇಷ ಎಂದರೆ, ಇದೇ ಮೊದಲ ಬಾರಿಗೆ ಈ ಸ್ಮಾರ್ಟ್ ಫೋನ್ನಲ್ಲಿ 64MP OIS ಅಲ್ಟ್ರಾ-ಸ್ಟೇಬಲ್ ಕ್ಯಾಮರಾ. ಈ ವೈಶಿಷ್ಟ್ಯವನ್ನು ಮೊಬೈಲ್ ಹೊಂದಿದ್ದು, ಉತ್ತಮ ಗುಣಮಟ್ಟದ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗಲಿದೆ. ಇದು ಡ್ಯೂಯಲ್ ಕ್ಯಾಮರಾ ಸೆಟ್ ಅಪ್ ಅನ್ನು ಕೂಡ ಇದು ಹೊಂದಿದೆ‘
ಸ್ಮಾರ್ಟ್‌ಫೋನ್ ವೈಶಿಷ್ಟ್ಯ: ಇದು 44W ಫ್ಲ್ಯಾಶ್‌ಚಾರ್ಜ್, ಅಲ್ಟ್ರಾ ಗೇಮ್ ಮೋಡ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಮತ್ತು 1300 ನಿಟ್‌ಗಳ ಸ್ಕ್ರೀನ್ ಬ್ರೈಟ್‌ನೆಸ್‌ನೊಂದಿಗೆ ಅಲ್ಟ್ರಾ ಬ್ರೈಟ್ AMOLED ಡಿಸ್ಪ್ಲೇಯನ್ನು ಸಹ ಒದಗಿಸುತ್ತದೆ. ಹೊಸ ಸ್ಮಾರ್ಟ್‌ಫೋನ್ 4,85,000 ಕ್ಕಿಂತ ಹೆಚ್ಚು ಅತ್ಯುತ್ತಮ AnTuTu ಸ್ಕೋರ್ನ ಬೆಂಚ್‌ಮಾರ್ಕ್‌ಗಳನ್ನು ಮೀರಿಸಿದೆ.
ಫೋನ್ ಆಂಡ್ರಾಯ್ಡ್ 13 ಅನ್ನು ಆಧರಿಸಿದ Funtouch OS 13 ಆಧಾರದ ಮೆಲೆ ಕಾರ್ಯಾಚರಣೆ ನಡೆಸಲಿದೆ. ಮೂರು ವರ್ಷದ ಭದ್ರಕಾ ಅಪ್ಡೇಟ್ ಮತ್ತು ಎರಡು ವರ್ಷಗಳ ಆಂಡ್ರಾಯ್ಡ್ ಅಪರ್ಡೆಟ್ ಸೌಲಭ್ಯವನ್ನು ಇದು ಒದಗಿಸಲಿದೆ. ಇದು 120ವಾಟ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯೊಂದಿಗೆ ಪ್ಯಾಕ್ ಮಾಡಲ್ಪಡುತ್ತದೆ.
ಕಳೆದೆರಡು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಮತ್ತೊಂದು ಸರಣಿ: ಜನವರಿಯಲ್ಲಿ ಕಂಪನಿಯು ಇತ್ತೀಚೆಗೆ iQOO 11 ಸರಣಿ ಮತ್ತು iQOO Neo 7 SE ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. iQOO 11 ಸರಣಿಯು ಭಾರತದಲ್ಲಿ ಜನವರಿಯಲ್ಲಿ ಬಿಡುಗಡೆಗೊಂಡಿತು. iQOO Neo7 SE ಮತ್ತು Neo7 5G ನಡುವಿನ ಪ್ರಮುಖ ವ್ಯತ್ಯಾಸ ಎಂದರೆNeo7 ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ಯನ್ನು ಹೊಂದಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ A54, A34 ಭಾರತದ ಮಾರುಕಟ್ಟೆಗೆ ಬಿಡುಗಡೆ