ಸ್ಯಾನ್ಫ್ರಾನ್ಸಿಸ್ಕೋ: ಜಾಗತಿಕ ಟೆಕ್ ದೈತ್ಯ ಕಂಪನಿ ಆ್ಯಪಲ್ ಇದೀಗ ತನ್ನ 16ರ ಸರಣಿಯ ಐಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವರ್ಷಾಂತ್ಯ ಅಥವಾ ಸೆಪ್ಟೆಂಬರ್ ಬಳಿಕ ಮತ್ತಷ್ಟು ಅತ್ಯಾಧುನಿಕ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಕಂಪನಿ ಮುಂದಾಗಿದೆ. ಈ ಮೆಮೋರಿ, ಆರ್ಎಎಂ (RAM) ಮಟ್ಟ ಹೆಚ್ಚಿಸಲಿದ್ದು, ವೇಗದ ವೈ-ಫೈ ಮತ್ತಿತರೆ ಸೌಲಭ್ಯಗಳನ್ನು ಫೋನ್ ಹೊಂದಿರಲಿದೆ ಎಂದು ವರದಿಯಾಗಿದೆ.
ಆ್ಯಪಲ್ ವಿಶ್ಲೇಷಕ ಜೆಫ್ಪಿಯು ಪ್ರಕಾರ, ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಸರಣಿಗಳು ಎ18 ಪ್ರೊಸೆಸರ್ ನಿರ್ದೇಶಿತವಾಗಿದೆ. ಐಫೋನ್ 16 ಮೊದಲ ಬೇಸ್ ಮಾಡೆಲ್ಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, ಮತ್ತಷ್ಟು ಪರಿಣಾಮಕಾರಿ ಮತ್ತು ನ್ಯಾನೋಮೀಟರ್ ಫ್ಯಾಬ್ರಿಕೇಷನ್ನ ಪ್ರೊಸೆಸರ್ ಅನ್ನು ಇದರಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಐಫೋನ್ 15 ಮತ್ತು 15 ಪ್ಲಸ್ 6 ಜಿಬಿ ಆರ್ಎಎಂ ಹೊಂದಿದ್ದರೆ, ಐಫೋನ್-16 8ಜಿಬಿ ಆರ್ಎಎಂ ಹೊಂದಿರಲಿದೆ.
ಐಫೋನ್ 16 ಸರಣಿಯ ಫೋನ್ಗಳು ಹೊಸ ಎ18 ಪ್ರೊ ಚಿಪ್ ಹೊಂದಿರಲಿದೆ. ಐಫೋನ್ 16 ಮತ್ತು ಐಫೋನ್ 16 ಪ್ರೊ ಕ್ಯಾಲ್ಕೊಮ್ ಎಕ್ಸ್75 ಮೊಡೆಮ್ ಬಳಕೆ ಮಾಡಲಿದೆ. ಕ್ವಾಲ್ಕೊಮ್ ಎಕ್ಸ್ 70 ಮೊಡೆಮ್ ಅನ್ನು ಐಫೋನ್ 16 ಮತ್ತು ಐಫೋನ್ 16 ಪ್ಲಸ್ನಲ್ಲಿ ಬಳಕೆ ಮಾಡಲಾಗುವುದು ಎಂದು ವರದಿ ವಿವರ ನೀಡಿದೆ.