ತನ್ನ ವೈಶಿಷ್ಟ್ಯಗಳಿಂದಲೇ ಗ್ರಾಹಕರನ್ನು ಸೆಳೆದಿರುವ ಸ್ಮಾರ್ಟ್ಫೋನ್ ಎಂದರೆ ಅದು ಐಫೋನ್. ಒಂದಕ್ಕಿಂತ ಒಂದು ವಿಭಿನ್ನ ವಿಶೇಷತೆಯನ್ನು ಈ ಆ್ಯಪಲ್ ಐಫೋನ್ಗಳು ಒಂದಿರುತ್ತದೆ. ಇದೇ ಕಾರಣಕ್ಕೆ ಈ ಐಫೋನ್ ಎಂದರೆ ಜನರಿಗೆ ಇನ್ನಿಲ್ಲದ ಕ್ರೇಜ್. ಹೊಸ ಅಪ್ಡೇಟ್ ವರ್ಷನ್ಗಳನ್ನು ತಮ್ಮ ಪ್ರತಿ ಸೀರಿಸ್ ಐಫೋನ್ಗಳಲ್ಲಿ ನೀಡುವ ಆ್ಯಪಲ್ ಇದೀಗ ಐಫೋನ್ 15 ಪ್ರೊ ಮಾಕ್ಸ್ ಸೀರಿಸ್ನಲ್ಲಿ ಅದರ ಗ್ರಾಹಕರನ್ನು ಮತ್ತಷ್ಟು ಮೋಡಿ ಮಾಡಲು ಸಿದ್ದವಾಗಿದೆ.
ಐಫೋನ್ 15 ಪ್ರೊ ಮಾಕ್ಸ್ ಜಗತ್ತಿನಲ್ಲಿಯೇ ಅತ್ಯಂತ ತೆಳುವಾದ ಡಿಸ್ಪ್ಲೇ ಹೊಂದಿರಲಿದೆ ಎಂದು ವರದಿ ಆಗಿದೆ. ಈ ಸಂಬಂಧ ವರದಿ ಮಾಡಿರುವ ಮಾಶಬ್ಲೆ, ಐಫೋನ್ 15 ಪ್ರೋ ಮಾಕ್ಸ್ ಕೇವಲ 1.55ಎಂಎಂ (0.06 ಇಂಚು) ಬೆಜೆಲ್ ಹೊಂದಿರಲಿದೆ. ಇಷ್ಟು ತೆಳುವಾದ ಬೆಜೆಲ್ ಅನ್ನು ಇದುವರೆಗೂ ಯಾವುದೇ ಸ್ಮಾರ್ಟ್ಫೋನ್ ಹೊಂದಿಲ್ಲ ಎಂದಿದೆ.
ಶಯಮಿ 13 ಸ್ಮಾರ್ಟ್ ಫೋನ್ ಕಡಿದಾದ ಕಪ್ಪು ಬಣ್ಣದ ಬೆಜೆಲ್ ಅನ್ನು ಹೊಂದಿದೆ. ಇದು ಕೇವಲ 1.81 ಎಂಎಂ ಬೆಜೆಲ್ ಹೊಂದಿದೆ. ಇನ್ನು ಐಫೋನ್ 14 ಪ್ರೊ 2.17 ಎಂಎಂಎ ಬೆಜೆಲ್ ಅನ್ನು ಹೊಂದಿದೆ. ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ ಮುಂಭಾಗದ ಗಾಜಿನ (ಫ್ರಾಂಟ್ ಗ್ಲಾಸ್) ಕುರಿತ ಮಾಹಿತಿಗಳು ಕಳೆದವಾರವಷ್ಟೇ ಸೋರಿಕೆ ಆಗಿತ್ತು. ಇದರಲ್ಲಿ ಅಲ್ಟ್ರಾ ಥೀನ್ ಬೆಜೆಲ್ ಅನ್ನು ಈ ಡಿಸ್ಪ್ಲೈ ಹೊಂದಿರಲಿದೆ. ಇದರಿಂದ ಭಾರಿ ತೆಳುವಾದ ಮೊಬೈಲ್ ಎಂಬ ಖ್ಯಾತಿಗೆ ಈ ಐಫೋನ್ 15 ಪ್ರೊ ಮಾಕ್ಸ್ ಪಾತ್ರವಾಗಲಿದೆ.