ಸೆಪ್ಟೆಂಬರ್ 7 ರಂದು ಐಫೋನ್ 14 ಸರಣಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ಸಮೀಕ್ಷೆಯ ಪ್ರಕಾರ ಸುಮಾರು 14 ಪ್ರತಿಶತದಷ್ಟು ಐಫೋನ್ ಬಳಕೆದಾರರು ಬೆಲೆ ಏರಿಕೆಯ ವರದಿಗಳ ಹೊರತಾಗಿಯೂ ಹೊಸ ಐಫೋನ್‌ಗಳಿಗೆ ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. savings.com ನ ಸಮೀಕ್ಷೆಯು ಈ ಸಂಖ್ಯೆಯು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿದೆ.
ಅಸ್ತಿತ್ವದಲ್ಲಿರುವ ಐಫೋನ್ ಬಳಕೆದಾರರಲ್ಲಿ ಕೇವಲ 10 ಪ್ರತಿಶತ ಮಾತ್ರ iPhone 13 ಸರಣಿಗೆ ಅಪ್‌ಗ್ರೇಡ್ ಮಾಡಲು ಈ ಹಿಂದೆ ಯೋಜಿಸಿದ್ದರಂತೆ. ಹಣದುಬ್ಬರದ ಆರ್ಥಿಕ ಪ್ರಭಾವ ಮತ್ತು ಐಫೋನ್ ಬಳಕೆದಾರರು ತಮ್ಮ ಸಾಧನಗಳಿಗೆ ದೀರ್ಘಕಾಲದವರೆಗೆ ಅಂಟಿಕೊಳ್ಳುವ ವಿಶಿಷ್ಟ ಪ್ರವೃತ್ತಿಯನ್ನು ಗಮನಿಸಿಯೂ ಈ ನಿರ್ಧಾರಕ್ಕೆ ಬಂದಿರುವುದನ್ನು ಗಮನಿಸಿದರೆ ಆಶ್ಚರ್ಯವಾಗಬಹುದು.
savings.com ನ ಸಮೀಕ್ಷೆಯು ಸುಮಾರು 1,500 ಐಫೋನ್ ಬಳಕೆದಾರರ ಬಳಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಮೂಲಕ ಅಸ್ತಿತ್ವದಲ್ಲಿರುವ ಐಫೋನ್ ಬಳಕೆದಾರರಲ್ಲಿ iPhone 14ನ್ನು ಮೊದಲಿಗಿಂತ ಹೆಚ್ಚು ಜನರು ತೆಗೆದುಕೊಳ್ಳುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅದಾಗ್ಯೂ 9to5Mac ಸೂಚಿಸಿದಂತೆ, ಮಾದರಿ ಗಾತ್ರವು ತುಂಬಾ ಚಿಕ್ಕದಾಗಿದ್ದು, ಸಮೀಕ್ಷೆಯು ಸ್ವತಃ ಹೇಳಿಕೊಳ್ಳುವಂತೆ ಯಾವುದೇ ನಿಖರ ಮಾಹಿತಿ ಸೂಚಿಸಿಲ್ಲ.
ಭಾರತದಲ್ಲಿ ಹೆಚ್ಚಾದ ಆಪಲ್ ಪ್ರಿಯರು: ಇನ್ನು ಭಾರತದಂತಹ ಮಾರುಕಟ್ಟೆಗಳಲ್ಲಿ ಇದು ವಿಶೇಷವಾಗಿ ಗಮನಾರ್ಹವಾಗಿದೆ. ಐಫೋನ್‌ನ ಗಣನೀಯ ಬಳಕೆ ಹಾಗೂ ಖರೀದಿ ಉತ್ತರ ಅಮೆರಿಕ ಮತ್ತು ಯುರೋಪ್‌ನಂತಹ ಮಾರುಕಟ್ಟೆಗಳಿಗಿಂತ ಇಲ್ಲಿ ಹೆಚ್ಚಾಗಿದೆ. ಹೆಚ್ಚು ಕಾಲ ಸಾಧನಕ್ಕೆ ಅಂಟಿಕೊಳ್ಳಲು ಖರೀದಿದಾರರನ್ನು ಇಲ್ಲಿ ಹೆಚ್ಚೆಚ್ಚಾಗಿ ಪ್ರೋತ್ಸಾಹಿಸುತ್ತದೆ.