ಬೀಜಿಂಗ್: ಕೋವಿಡ್-19 ಸೋಂಕು ಟೆಸ್ಟ್ಗಾಗಿ ಸ್ವ್ಯಾಬ್ ಸ್ಯಾಂಪಲ್ ತೆಗೆದುಕೊಳ್ಳುವ ರೋಬೋಟ್ ಒಂದನ್ನು ಚೀನಾದಲ್ಲಿ ಆವಿಷ್ಕರಿಸಲಾಗಿದೆ. ಸ್ವ್ಯಾಬ್ ಸ್ಯಾಂಪಲ್ ತೆಗೆದುಕೊಳ್ಳುವ ಬರಿಸ್ತಾ ಎಂಬ ಹೆಸರಿನ ರೋಬೋಟ್ ಸೇರಿದಂತೆ ಡಾನ್ಸ್ ಮಾಡುವ ಸೈಬರ್ ಡಾಗ್ ರೋಬೋಟ್ಗಳನ್ನು ವಾರ್ಷಿಕ ವಿಶ್ವ ರೋಬೋಟ್ ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರದರ್ಶಿಸಲಾಯಿತು.
ಚೀನಾದಲ್ಲಿ ಕೊರೊನಾವೈರಸ್ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕೋವಿಡ್ ಟೆಸ್ಟ್ ನಡೆಸಲು ಚೀನಾ ಮುಂದಾಗಿದೆ. ಹೀಗಾಗಿ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಈಗ ಚೀನಾ ರೋಬೋಟ್ಗಳನ್ನು ತಯಾರಿಸಿದೆ. ದೇಶದ ಉತ್ತರ ಭಾಗದ ನಗರ ಶೆನ್ಯಾಂಗ್ನಲ್ಲಿ ಈ ರೋಬೋಟಿಕ್ ಆರ್ಮ್ ತಯಾರಿಸಲಾಗಿದೆ.