ಸ್ಯಾನ್ ಪ್ರಾನ್ಸಿಸ್ಕೊ: ಟ್ವಿಟರ್ ಖರೀದಿ ಬಳಿಕ ಸಾಮಾಜಿಕ ಜಾಲತಾಣದ ವೈಫಲ್ಯಗಳನ್ನು ಎಲಾನ್ ಮಸ್ಕ್ ಬಹಿರಂಗ ಪಡಿಸುತ್ತಿದ್ದಾರೆ. ಅದರಂತೆ 2020ರಲ್ಲಿ ಅಮೆರಿಕದ ಅಧ್ಯಕ್ಷ ಚುನಾವಣೆಗೂ ಮುನ್ನ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಪ್ ನಿಷೇಧಿಸುವ ಮೊದಲು ಟ್ವಿಟರ್ನ ಉನ್ನತ ಹುದ್ದೆಯಲ್ಲಿದ್ದ ಕಾರ್ಯ ನಿರ್ವಾಹಕರು ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದರು ಎಂದು ತಿಳಿಸಿದ್ದಾರೆ.
ತಮ್ಮದೇ ನಿಯಮಗಳನ್ನು ಮೀರಿ ಉನ್ನತ ಮಟ್ಟದ ಕಾರ್ಯ ನಿರ್ವಹಕರು ನಿರ್ಧಾರ ತೆಗೆದುಕೊಂಡಿದ್ದಾರೆ. ಫೆಡರಲ್ ಎಜೆನ್ಸಿ ಜೊತೆ ದಾಖಲೆಗಳ ವಿನಿಮಯಗಳನ್ನು ನಡೆಸಲಾಗಿದೆ ಎಂದು ಸ್ವತಂತ್ರ ಪತ್ರಕರ್ತ ಮತ್ತು ಲೇಖಕ ಮಟ್ ತೈಬ್ಬು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮಸ್ಕ್, ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳ ಹಸ್ತಕ್ಷೇಪ ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆಗೆ ಘಾಸಿ ಗೊಳಿಸುತ್ತದೆ ಇದು ತಪ್ಪು. ಇದು ನಿಜ ಮತ್ತು ಸಾಕ್ಷ್ಯವು ಸ್ಪಷ್ಟವಾಗಿದೆ ಎಂದಿದ್ದಾರೆ