ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಶೀಘ್ರದಲ್ಲೇ ಬಳಕೆದಾರರಿಗೆ ಇತರ ಬಳಕೆದಾರರ ಪೋಸ್ಟ್‌ಗಳನ್ನು ಮರುಪೋಸ್ಟ್ ಮಾಡಿಕೊಳ್ಳುವ ಅವಕಾಶವನ್ನು ನಿಟ್ಟಿನಲ್ಲಿ ಹೊಸ ಪ್ರಯೋಗ ನಡೆಸುತ್ತಿದೆ.
ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಸ್ಟಾಗ್ರಾಮ್ ಕೂಡ ಒಂದಾಗಿದೆ. ನೆಟ್ಟಿಜನ್ಗಳ ಫೋಟೋ ಮತ್ತು ವಿಡಿಯೋ ಹಂಚಿಕೆಯ ಮೆಚ್ಚಿನ ಆನ್ಲೈನ್ ಪ್ಲಾಟ್‌ಫಾರ್ಮ್ ಸಹ ಇನ್‌ಸ್ಟಾಗ್ರಾಮ್ ಆಗಿದೆ. ಇದೀಗ ರಿಪೋಸ್ಟ್ ವೈಶಿಷ್ಟ್ಯದ ಬಗ್ಗೆ ಕಂಪನಿಯು ಇನ್ನೂ ಸಾರ್ವಜನಿಕವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲವಾದರೂ, ಶೀಘ್ರದಲ್ಲೇ ಆಯ್ದ ಬಳಕೆದಾರರೊಂದಿಗೆ ಅದನ್ನು ಪರೀಕ್ಷಿಸಲು ಪ್ರಾರಂಭಿಸಲು ಯೋಜಿಸಿದೆ ಎಂದು ವರದಿಯಾಗಿದೆ.
ನಾವು ಫೀಡ್‌ನಲ್ಲಿರುವ ಪೋಸ್ಟ್‌ಗಳನ್ನು ಮರುಹಂಚಿಕೊಳ್ಳುವ ಫೀಚರ್ ಅನ್ವೇಷಿಸುತ್ತಿದ್ದೇವೆ. ಇದನ್ನು ಶೀಘ್ರದಲ್ಲೇ ಕಡಿಮೆ ಸಂಖ್ಯೆಯ ಜನರೊಂದಿಗೆ ಪರೀಕ್ಷಿಸಲು ಯೋಜಿಸುತ್ತೇವೆ ಎಂದು ಮೆಟಾ ವಕ್ತಾರರು ಇಮೇಲ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ಈ ಹೊಸ ವೈಶಿಷ್ಟ್ಯವನ್ನು ಮೊದಲಿಗೆ ಸಾಮಾಜಿಕ ಜಾಲತಾಣದ ಕನ್ಸಲ್ಟಂಟ್ ಆಗಿರುವ ಮ್ಯಾಟ್ ನವರ್ರಾ ಎಂಬುವವರು ಗುರುತಿಸಿದ್ದು, ರಿಪೋಸ್ಟ್ ಟ್ಯಾಬ್ ಅನ್ನು ಪ್ರದರ್ಶಿಸುವ ಸ್ಕ್ರೀನ್‌ಶಾಟ್ ಅನ್ನು ಸಹ ಪೋಸ್ಟ್ ಮಾಡಿದ್ದಾರೆ. ಈ ಸ್ಕ್ರೀನ್‌ಶಾಟ್‌ನ ಪ್ರಕಾರ, ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, ರೀಲ್‌ಗಳು ಮತ್ತು ಟ್ಯಾಗ್ ಮಾಡಲಾದ ಫೋಟೋಗಳ ಟ್ಯಾಬ್‌ಗಳ ಜೊತೆಗೆ ಬಳಕೆದಾರರ ಪ್ರೊಫೈಲ್‌ಗಳಲ್ಲಿ ರಿಪೋಸ್ಟ್ ಟ್ಯಾಬ್ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ:ನಿಯರ್ಬೈ ಶೇರ್, ಹೊಸ ಎಮೋಜಿಗಳು ಸೇರಿ ಹೊಸ ಫೀಚರ್ಸ್ ಪರಿಚಯಿಸಲು ಮುಂದಾದ ಗೂಗಲ್