ಲೂಧಿಯಾನ:ಲೂಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಸದಾ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಹೆಸರಾಗಿದೆ. ಇದೀಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿರುವ ವಿವಿ, ತರಕಾರಿ ಕೃಷಿ ನಡೆಸುವ ಕುರಿತು ಹೊಸ ಸಂಶೋಧನೆ ನಡೆಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಹೌದು, ಅದೇನೆಂದ್ರೆ ನಿಮ್ಮ ಮನೆಯ ಸಣ್ಣ ರೂಮ್ನಲ್ಲಿ ಕೃತಕ ಬೆಳಕಿನ ಸಹಾಯದಿಂದ ತರಕಾರಿ ಕೃಷಿ ಮಾಡಬಹುದಾಗಿದೆ. ವಿವಿಯ ಇಂಜಿನಿಯರಿಂಗ್ ವಿಭಾಗ ಸಂಶೋಧನೆ ನಡೆಸಿ, ಇದಕ್ಕೆ ಪ್ಲಾಂಟ್ ಫ್ಯಾಕ್ಟರಿ ಎಂದು ಹೆಸರಿಟ್ಟಿದೆ.
ಏನಿದು ತಂತ್ರಜ್ಞಾನ:ಮುಚ್ಚಿದ ಕೋಣೆಯಲ್ಲಿ ಗಿಡಕ್ಕೆ ಬೆಳಕು ಮತ್ತು ನಿಯಂತ್ರಿತ ಕಾರ್ಬೊನ್ ಡೈಆಕ್ಸೈಡ್ ನೀಡುತ್ತೇವೆ. ಹೊರಗಿನ ವಾತಾವರಣದಲ್ಲಿ ಮೋಡ ಅಥವಾ ಮಂಜಿರಲಿ, ರೂಮಿನಲ್ಲಿನ ಸಸ್ಯಗಳಿಗೆ ಒಂದೇ ರೀತಿಯ ಬೆಳಕು ಸಿಗಲಿದೆ. ಜೊತೆಗೆ ಏಕರೂಪವಾಗಿ ಇನ್ನಿತರ ಮೂಲಭೂತ ಅಂಶಗಳನ್ನು ಸಸ್ಯಗಳಿಗೆ ನೀಡಲಾಗುವುದು. ಇದರಿಂದ ಕಡಿಮೆ ಅವಧಿಯಲ್ಲಿ ಅಂದರೆ 60ರಿಂದ 70 ದಿನಗಳಲ್ಲಿ ನಾವು ಸಸಿಗಳನ್ನು ಬೆಳೆಸಬಹುದಾಗಿದೆ ಎನ್ನುತ್ತಾರೆ ಪಂಜಾಬ್ ಕೃಷಿ ವಿವಿ ಪ್ರಧಾನ ವಿಜ್ಞಾನಿಯಾಗಿರುವ ರಾಕೇಶ್.
ಆಫ್ ಸೀಸನ್ ತರಕಾರಿ ಕೃಷಿ: ಈ ತಂತ್ರಜ್ಞಾನದ ಸಹಾಯದಿಂದ ಆಫ್ಸೀಸನ್ ತರಕಾರಿಗಳನ್ನು ಬೆಳೆಯಬಹುದು. ಎಲೆ ತರಕಾರಿಗಳನ್ನು ಕೂಡ ಸುಲಭವಾಗಿ ಈ ತಂತ್ರಜ್ಞಾನ ಬಳಸಿ ಬೆಳೆಯಬಹುದಾಗಿದೆ. ಕೊತ್ತಂಬರಿ, ಮೆಂತೆ, ಪಾಲಕ್, ಸ್ಟ್ರಾಬೆರಿ, ಟೊಮೆಟೋ, ಸೌತೆಕಾಯಿ ಮತ್ತಿತ್ತರ ಎಲೆ ತರಕಾರಿಗಳನ್ನು ಸುಲಭವಾಗಿ ಬೆಳೆಸಬಹುದಾಗಿದೆ. ಬೇಸಿಗೆಯಲ್ಲೂ ಹಸಿರು ತರಾಕಾರಿಗಳನ್ನು ಈ ತಂತ್ರಜ್ಞಾನದ ಮೂಲಕ ಬೆಳೆಸಬಹುದಾಗಿದೆ. ಈ ತರಕಾರಿಗಳನ್ನು ಹೊರಗಿನ ಋತುಮಾನದಲ್ಲಿ ವರ್ಷದ ಎಲ್ಲಾ ಕಾಲ ಬೆಳೆಯಲು ಸಾಧ್ಯವಾಗಲ್ಲ. ಆದರೆ, ಎಲ್ಲಾ ಋತುಮಾನದಲ್ಲಿ ಈ ತಂತ್ರಜ್ಞಾನ ಬೆಳೆಸಿ ಬೆಳೆಯಬಹುದಾಗಿದೆ ಎನ್ನುತ್ತಾರೆ ಡಾ. ಶಾರದಾ