ನವದೆಹಲಿ:ಪ್ರಸ್ತುತ 12 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಭಾರತದ ಡಿಜಿಟಲ್ ಮಾಧ್ಯಮ ಮತ್ತು ಮನರಂಜನಾ ಉದ್ಯಮವು 2030ರ ವೇಳೆಗೆ ಗಾತ್ರದಲ್ಲಿ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ. ರೆಡ್ ಸೀರ್ ರಿಸರ್ಚ್ ಪ್ರಕಾರ, ಇಂಟರ್ನೆಟ್ ಬಳಕೆದಾರರ ಹೆಚ್ಚುತ್ತಿರುವ ಪ್ರಬುದ್ಧತೆ ಮತ್ತು ಡಿಜಿಟಲ್ ಮಾಧ್ಯಮದ ಮೇಲೆ ಜನ ಹೆಚ್ಚುವರಿ ಖರ್ಚು ಮಾಡಲು ಮುಂದಾಗಿರುವುದರಿಂದ ಈ ವಲಯ ಬಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ, ನಾನ್-ರಿಯಲ್ ಮನಿ ಗೇಮಿಂಗ್ (ಆರ್ ಎಂಜಿ) ಮತ್ತು ಒಟಿಟಿ ವೀಡಿಯೊದ ಹೆಚ್ಚಿದ ಬಳಕೆಯು ಡಿಜಿಟಲ್ ಜಾಹೀರಾತು ವೆಚ್ಚದ ಮಂದಗತಿಯ ಹೊರತಾಗಿಯೂ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿದೆ. ಹಣಕಾಸು ವರ್ಷ 22-23 ರ ನಡುವೆ, ಡಿಜಿಟಲ್ ಮಾಧ್ಯಮ ಮತ್ತು ಮನರಂಜನೆಯ ಎಲ್ಲ ವಿಭಾಗಗಳಲ್ಲಿ ಪೇಡ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆ. ಒಟಿಟಿ ಆಡಿಯೊ ಅತ್ಯಧಿಕ ಪೇಡ್ ಬಳಕೆದಾರರನ್ನು ಪಡೆದುಕೊಂಡಿದೆ.
ಹೆಚ್ಚಿನ ಸಿಎಸಿ ಮತ್ತು ಬಳಕೆದಾರರು ದೂರ ಹೋಗದಂತೆ ಕಾಪಾಡಿಕೊಳ್ಳುವ ಮೂಲಕ ಒಟಿಟಿ ವಿಡಿಯೋ ವಲಯವು ಮುಂದಿನ 3-5 ವರ್ಷಗಳಲ್ಲಿ ಲಾಭದಾಯಕತೆಯನ್ನು ಸಾಧಿಸುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. 2030 ರ ವೇಳೆಗೆ ಭಾರತದ ಪ್ರಬುದ್ಧ ಇಂಟರ್ನೆಟ್ ಬಳಕೆದಾರರ ಪ್ರಮಾಣವು ಅಮೆರಿಕವನ್ನೂ ಅನ್ನು ಮೀರಿಸುತ್ತದೆ ಎಂದು ಸಂಶೋಧನೆ ಅಂದಾಜಿಸಿದೆ. ಭಾರತವು ಪ್ರಸ್ತುತ 2023 ರಲ್ಲಿ 150 ಮಿಲಿಯನ್ ನಷ್ಟು ಮಧ್ಯಮ-ಕೋರ್ ಅಥವಾ ಕೋರ್ ಗೇಮರ್ಗಳನ್ನು ಹೊಂದಿದೆ.