ಬೆಂಗಳೂರು:ಕೋವಿಡ್ ಸಾಂಕ್ರಾಮಿಕದಂತಹ ವೈರಸ್ಗಳು ಸ್ಮಾರ್ಟ್‌ಫೋನ್‌ಗಳಂತಹ ಟಚ್ ಸ್ಕ್ರೀನ್ ಸಾಧನಗಳ ಬಳಕೆಯ ಮೂಲಕ ಹರಡುವ ಸಂಭಾವ್ಯತೆ ಇರುವ ಸಮಯದಲ್ಲಿ, ಭಾರತೀಯ ವಿಜ್ಞಾನಿಗಳು ಕಡಿಮೆ ವೆಚ್ಚದ 'ಸ್ಪರ್ಶರಹಿತ ಸಂವೇದಕ'ವನ್ನು ಅಭಿವೃದ್ಧಿಪಡಿಸಿದ್ದಾರೆ. ರೋಗಕಾರಕಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವ ಪ್ರಮುಖ ವೈಜ್ಞಾನಿಕ ಪ್ರಗತಿಯಲ್ಲಿ, ಭಾರತೀಯ ವಿಜ್ಞಾನಿಗಳು ಕಡಿಮೆ ಬೆಲೆಯ ಟಚ್ - ಕಮ್ - ಪ್ರಾಕ್ಸಿಮಿಟಿ ಸಂವೇದಕ(touch cum proximity sensor)ವನ್ನು ಕೈಗೆಟುಕುವ ದರದಲ್ಲಿ ಅಭಿವೃದ್ಧಿಪಡಿಸಿದ್ದಾರೆ.
ಈ ಸಂವೇದಕವು ಎಷ್ಟು ದಕ್ಷವಾಗಿದೆ ಎಂದರೆ, ಅದು ಪರದೆಯಿಂದ 9 ಸೇ.ಮೀಗಳಷ್ಟು ದೂರದಿಂದ ಹೋವರ್ ಅಥವಾ ಸಾಮೀಪ್ಯ ಚಲನೆಯನ್ನು ಪತ್ತೆ ಮಾಡುತ್ತದೆ. ಸಾಮಾನ್ಯವಾಗಿ ಸ್ಪರ್ಶರಹಿತ ಸ್ಪರ್ಶ ಸಂವೇದಕ ಎಂದು ಕರೆಯಲ್ಪಡುವ ಈ ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ವಿಶಿಷ್ಟ ಮುದ್ರಣ ತಂತ್ರದ ಮೂಲಕ, ಮುದ್ರಿಸಬಹುದು ಮತ್ತು ಸಂಪರ್ಕದ ಮೂಲಕ ಹೆಚ್ಚು ಸಾಂಕ್ರಾಮಿಕ ವೈರಸ್ ಹರಡುವುದನ್ನು ತಡೆಯಬಹುದು.
ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ:ಈ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿರುವ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ (ಸಿಇಎನ್‌ಎಸ್), ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಅಂಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‌ಸಿಎಎಸ್‌ಆರ್) ಮತ್ತು ಇತ್ತೀಚೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) ಸ್ವಾಯತ್ತ ಸಂಸ್ಥೆಗಳ ಬೆಂಗಳೂರು ಮೂಲದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಅವರು ಇತ್ತೀಚೆಗೆ ಅರೆ - ಸ್ವಯಂಚಾಲಿತ ಉತ್ಪಾದನಾ ಘಟಕವನ್ನು ಪ್ರಿಂಟಿಂಗ್ ನೆರವಿನ ಮಾದರಿಯ (ಸುಮಾರು 300 Aum ರೆಸಲ್ಯೂಶನ್) ಪಾರದರ್ಶಕ ವಿದ್ಯುದ್ವಾರಗಳ ಉತ್ಪಾದನೆಗೆ ಸ್ಥಾಪಿಸಿದ್ದಾರೆ.