ಸ್ಯಾನ್ ಫ್ರಾನ್ಸಿಸ್ಕೋ:ಕೊರೊನಾ ನಿಯಂತ್ರಣಕ್ಕಾಗಿ ಹಲವಾರು ಲಸಿಕೆಗಳನ್ನ ಕಂಡು ಹಿಡಿಯಲಾಗಿದೆ. ಲಸಿಕೆಯ 2 ಡೋಸ್ಗಳಲ್ಲದೇ, ಬೂಸ್ಟರ್ ಡೋಸ್ ಕೂಡ ವಿಶ್ವಾದ್ಯಂತ ನೀಡಲಾಗಿದೆ. ಭಾರತದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮೊದಲ ಬಾರಿಗೆ ಇಂಟ್ರಾನಾಸಲ್ ಮೂಲಕ ನೀಡುವ ಲಸಿಕೆಯನ್ನು ಕಂಡುಹಿಡಿದಿತ್ತು. ಇದೀಗ ಅಮೆರಿಕದ ವಿಜ್ಞಾನಿಗಳ ತಂಡವೂ ಕೂಡ ಸಿಂಗಲ್ ಡೋಸ್ ಇಂಟ್ರಾನಾಸಲ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಈ ಲಸಿಕೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತ ಮೂಲದ ವಿಜ್ಞಾನಿ ಸೋನಾಲಿ ಚತುರ್ವೇದಿ ಸೇರಿದಂತೆ ಅವರ ತಂಡ ಸಿಂಗಲ್ ಡೋಸ್ ಇಂಟ್ರಾನಾಸಲ್ ಲಸಿಕೆಯನ್ನು ಕಂಡು ಹಿಡಿದಿದೆ. ಇದು ನೇಕ ಕೋವಿಡ್ ರೂಪಾಂತರಗಳನ್ನು ನಿಯಂತ್ರಿಸಬಲ್ಲ, ಸೋಂಕಿನ ಹರಡುವ ತೀವ್ರತೆಯನ್ನು ಕುಗ್ಗಿಸಬಲ್ಲ ಶಕ್ತಿ ಹೊಂದಿದೆ ಎಂದು ತಂಡ ಹೇಳಿಕೊಂಡಿದೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಗ್ಲಾಡ್‌ಸ್ಟೋನ್ ಸಂಸ್ಥೆಯ ಈ ತಂಡ, ಈ ಇಂಟ್ರಾನಾಸಲ್ ಲಸಿಕೆ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸೋಂಕನ್ನು ತಡೆಯುತ್ತದೆ. ಇದು ಏಕ ಡೋಸ್ ಆಂಟಿವೈರಲ್ ಆಗಿದೆ. ಕೋವಿಡ್ ರೋಗಲಕ್ಷಣಗಳು ಮತ್ತು ತೀವ್ರತೆ ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿ ಚತುರ್ವೇದಿ ಅವರು ತಿಳಿಸಿದ್ದಾರೆ.