ಸ್ಯಾನ್ ಫ್ರಾನ್ಸಿಸ್ಕೋ : Android ಮತ್ತು WearOS ಸಾಧನಗಳಿಗೆ ಗೂಗಲ್ ಸೋಮವಾರ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಆ್ಯಂಡ್ರಾಯ್ಡ್ ಕ್ರೋಮ್ನಲ್ಲಿ ಕಂಟೆಂಟ್ ಗಾತ್ರವನ್ನು ಶೇಕಡಾ 300 ರಷ್ಟು ಹೆಚ್ಚಿಸುವ ಸೌಲಭ್ಯ ನೀಡಿರುವುದು ಬಹಳ ಮುಖ್ಯವಾಗಿದೆ. ಕಂಪನಿಯ ಪ್ರಕಾರ, ಹೊಸ ಅಪ್ಡೇಟ್ಗಳು ಸಾಧನಗಳಾದ್ಯಂತ ಸಂಪರ್ಕ, ಉತ್ಪಾದಕತೆ, ಬಳಕೆ ಮತ್ತು ಆರಾಮದಾಯಕತೆಯನ್ನು ಮತ್ತಷ್ಟು ಸುಧಾರಿಸುತ್ತವೆ.
ಬಳಕೆದಾರರು ತಮ್ಮ ನೋಟ್ಸ್ಗಳನ್ನು ತ್ವರಿತವಾಗಿ ನಿರ್ವಹಿಸಲು ಮತ್ತು ಟು ಡೂ ಲಿಸ್ಟ್ಗಳನ್ನು ತಮ್ಮ ಹೋಮ್ ಸ್ಕ್ರೀನ್ನಿಂದಲೇ ಪರಿಶೀಲಿಸಲು ಶೀಘ್ರದಲ್ಲೇ ಗೂಗಲ್ ಕೀಪ್ ಸಿಂಗಲ್ ನೋಟ್ ವಿಜೆಟ್ ಸಹಾಯ ಮಾಡಲಿದೆ ಎಂದು ಗೂಗಲ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ. ಒಂದೊಮ್ಮೆ ನೀವು ನಿಮ್ಮ Wear OS by Google ಸ್ಮಾರ್ಟ್‌ವಾಚ್ ಅನ್ನು ಹೊಂದಿದ್ದರೆ, ಗೂಗಲ್ ಕೀಪ್ ಎರಡು ಹೊಸ ಶಾರ್ಟ್‌ಕಟ್‌ಗಳನ್ನು ಪರಿಚಯಿಸುತ್ತಿದೆ. ಇದರಿಂದ ನಿಮ್ಮ ವಾಚ್ ಮೇಲೆ ಸರಳವಾಗಿ ಒಂದು ಟ್ಯಾಪ್ ಮಾಡುವ ಮೂಲಕ ನೋಟ್ಸ್ ಮತ್ತು ಟು ಡೂ ಲಿಸ್ಟ್ಗಳನ್ನು ರಚಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ಗೂಗಲ್ ಹೇಳಿದೆ.
ಇದಲ್ಲದೆ, ಬಳಕೆದಾರರು ಈಗ ಸ್ಟೈಲಸ್ ಅನ್ನು ಬಳಸಬಹುದು ಅಥವಾ ಆ್ಯಂಡ್ರಾಯ್ಡ್ನ ಗೂಗಲ್ ಡ್ರೈವ್ ಅಪ್ಲಿಕೇಶನ್‌ನಲ್ಲಿ PDF ಗಳನ್ನು ಟಿಪ್ಪಣಿ ಮಾಡಲು ಸ್ಕ್ರೀನ್ ಅನ್ನು ಸ್ಪರ್ಶಿಸಬಹುದು. ಗೂಗಲ್ ಮೀಟ್ ಈಗ ಹೆಚ್ಚಿನ ಆಂಡ್ರಾಯ್ಡ್ ಮೊಬೈಲ್ ಸಾಧನಗಳಲ್ಲಿ ಕರೆಗಳ ಸಮಯದಲ್ಲಿ ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯತೆ ನೀಡುತ್ತದೆ ಎಂದು ಕಂಪನಿಯು ಉಲ್ಲೇಖಿಸಿದೆ. ಶೀಘ್ರದಲ್ಲೇ, ಫಾಸ್ಟ್ ಪೇರ್ ಹೊಸ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ನಿಮ್ಮ ಕ್ರೋಮ್ಗುಕ್ಗೆ ಕೇವಲ ಒಂದು ಟ್ಯಾಪ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.