ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಟೆಕ್ ದೈತ್ಯ ಮೈಕ್ರೋಸಾಫ್ಟ್ ತನ್ನ ಬಿಂಗ್ ಮತ್ತು ಎಡ್ಜ್‌ನಲ್ಲಿ ಹೊಸ ಕೃತಕ ಬುದ್ಧಿಮತ್ತೆ (AI) ಆಧಾರಿತ ಶಾಪಿಂಗ್ ಟೂಲ್ಗಳನ್ನು ಅಳವಡಿಸುವುದಾಗಿ ಘೋಷಿಸಿದೆ. ಅದು ಬಳಕೆದಾರರಿಗೆ ವಿಶ್ವಾಸದಿಂದ ಶಾಪಿಂಗ್ ಮಾಡಲು ಮತ್ತು ಹಣ ಉಳಿಸಲು ಸಹಾಯ ಮಾಡುತ್ತದೆ. ಹೊಸ ಪರಿಕರಗಳು ಬಳಕೆದಾರರಿಗೆ AI ಯ ಶಕ್ತಿಯನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತವೆ. ನೀವು ಖರೀದಿಸಲು ಬಯಸಿದ ವಸ್ತುಗಳನ್ನು ಸುಲಭವಾಗಿ ಹುಡುಕಲು, ಸಂಶೋಧಿಸಲು ಮತ್ತು ಖರೀದಿಯನ್ನು ಪೂರ್ಣಗೊಳಿಸಲು ಪರಿಣಿತ ಮೂಲಗಳಿಂದ ನಿಮಗೆ ಅಗತ್ಯವಿರುವ ಮಾಹಿತಿಯು ಈಗ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ ಎಂದು ಮೈಕ್ರೊಸಾಫ್ಟ್ ಗುರುವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ಖರೀದಿ ಮಾರ್ಗದರ್ಶಿ ಅಥವಾ Buying Guide ಪ್ರತಿ ವರ್ಗದಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ಬಳಕೆದಾರರಿಗೆ ತಿಳಿಸುತ್ತದೆ, ಉತ್ಪನ್ನಗಳ ಬಗ್ಗೆ ಸಲಹೆ ನೀಡುತ್ತದೆ ಮತ್ತು ಸ್ಮಾರ್ಟ್ ಹೋಲಿಕೆ ಕೋಷ್ಟಕದಲ್ಲಿ ಒಂದಕ್ಕೊಂದು ಸಮಾನವಾದ ಐಟಂಗಳ ವಿಶೇಷಣಗಳನ್ನು ತೋರಿಸುತ್ತದೆ. ಇದರಿಂದಾಗಿ ಬಳಕೆದಾರರು ವಿವಿಧ ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡದೆಯೇ ಆಯ್ಕೆಗಳನ್ನು ತ್ವರಿತವಾಗಿ ಹೋಲಿಕೆ ಮಾಡಬಹುದು. ಬಿಂಗ್ನಲ್ಲಿನ ಈ ಟೂಲ್ ಈಗ ಯುಎಸ್ನಲ್ಲಿ ಲಭ್ಯವಿದೆ ಮತ್ತು ಕಾಲಾನಂತರದಲ್ಲಿ ಇತರ ಮಾರುಕಟ್ಟೆಗಳಿಗೆ ಬರಲಿದೆ.
ಎಡ್ಜ್‌ನಲ್ಲಿನ ಬೈಯಿಂಗ್ ಗೈಡ್ ಜಾಗತಿಕವಾಗಿ ಲಭ್ಯವಾಗಲಾರಂಭಿಸಿದೆ. ಯಾವುದೇ ಉತ್ಪನ್ನವನ್ನು ಶಾಪಿಂಗ್ ಮಾಡುವಾಗ ಯಾವೆಲ್ಲ ಅಂಶಗಳನ್ನು ಪರಿಗಣಿಸಬೇಕು ಎಂಬುದನ್ನು 'Review Summaries' ಟೂಲ್ ಸೂಚಿಸುತ್ತದೆ. ಬಳಕೆದಾರರು ತಾವು ಇಷ್ಟಪಡುವ ನಿರ್ದಿಷ್ಟ ಉತ್ಪನ್ನವನ್ನು ಒಮ್ಮೆ ಕಂಡುಕೊಂಡರೆ, ಆನ್‌ಲೈನ್‌ನಲ್ಲಿ ಜನರು ಅದರ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ಸಂಕ್ಷಿಪ್ತವಾಗಿ ಸಾರಾಂಶ ಮಾಡಿ ತೋರಿಸುವಂತೆ ಗ್ರಾಹಕರು ಎಡ್ಜ್‌ನಲ್ಲಿನ ಬಿಂಗ್ ಚಾಟ್ಗೆ ಸೂಚಿಸಬಹುದು.