ನವದೆಹಲಿ:ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ ಪ್ರಗತಿಯು ರಿಮೋಟ್ ಅಥವಾ ದೂರದಿಂದ ಕೆಲಸ ಮಾಡುವ ವಿಧಾನವನ್ನು ಹಿಂದೆಂದಿಗಿಂತಲೂ ಹೆಚ್ಚು ಕಾರ್ಯಸಾಧ್ಯ ಮತ್ತು ತಡೆರಹಿತವಾಗಿಸಿದೆ ಎಂದು ಗುರುವಾರ ವರದಿಯೊಂದು ತಿಳಿಸಿದೆ. ಉದ್ಯೋಗಿಗಳೊಂದಿಗೆ ಆಂತರಿಕವಾಗಿ ಮತ್ತು ಗ್ರಾಹಕರೊಂದಿಗೆ ಬಾಹ್ಯವಾಗಿ ಡಿಜಿಟಲ್ ಮತ್ತು ಭೌತಿಕ ಕೆಲಸದ ಸ್ಥಳದ ಹೊಂದಾಣಿಕೆಗೆ ಸಹಯೋಗ ಸಾಧನಗಳು ಅತ್ಯಗತ್ಯವಾಗಿವೆ.
2023 ರಲ್ಲಿಯೂ ಸಹ, ಕಂಪನಿಗಳು ಹೈಬ್ರಿಡ್ ಮಾದರಿಯ ಉದ್ಯೋಗದ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿವೆ ಎಂದು ಪ್ರಮುಖ ಡೇಟಾ ಮತ್ತು ವಿಶ್ಲೇಷಣಾ ಕಂಪನಿ ಗ್ಲೋಬಲ್ ಡಾಟಾ ವರದಿ ಬಹಿರಂಗಪಡಿಸಿದೆ. ನಿರ್ಮಾಣ, ವಿಮೆ, ಬ್ಯಾಂಕಿಂಗ್ ಮತ್ತು ಪಾವತಿಗಳು, ತಂತ್ರಜ್ಞಾನ ಮತ್ತು ಸಂವಹನ ಮತ್ತು ಔಷಧಿಗಳಂತಹ ಕ್ಷೇತ್ರಗಳು 2023 ರ ಮೂರನೇ ತ್ರೈಮಾಸಿಕದಲ್ಲಿ (ಕ್ಯೂ 3) ಗಮನಾರ್ಹ ಹೈಬ್ರಿಡ್ ಉದ್ಯೋಗ ನೇಮಕಾತಿಗಳನ್ನು ಪ್ರಕಟಿಸಿವೆ ಎಂದು ವರದಿ ಬಹಿರಂಗಪಡಿಸಿದೆ.
"ಕೋವಿಡ್ -19 ನಂತರದ ನೌಕರಿಯ ವಿಧಾನಗಳು ಹೈಬ್ರಿಡ್ ಮತ್ತು ಹೊಂದಿಕೊಳ್ಳುವ ಕೆಲಸದ ಮಾದರಿಗಳತ್ತ ಬದಲಾವಣೆಯಾಗಿವೆ. ಉದ್ಯಮದ ಹೆಚ್ಚಿನ ವಲಯಗಳು ಹೊಂದಿಕೊಳ್ಳುವ ಕೆಲಸದ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ 'ಇನ್-ಆಫೀಸ್' ಉದ್ಯೋಗಗಳ ಜೊತೆಗೆ ಇವು ಕೂಡ ಸಹಜವಾಗಬಹುದು" ಎಂದು ಗ್ಲೋಬಲ್ ಡಾಟಾದ ಬಿಸಿನೆಸ್ ಫಂಡಮೆಂಟಲ್ಸ್ ಅನಾಲಿಸ್ಟ್ ಶೆರ್ಲಾ ಶ್ರೀಪ್ರದಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.