ಶೆನ್ಜೆನ್ (ಚೀನಾ):ಅಮೆರಿಕನ್ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಉದ್ದೇಶದಿಂದ, ಹುವಾಯಿ ಸಂಸ್ಥೆಯು ಹಾರ್ಮನಿ ಓಎಸ್ 2.0 ಎಂಬ ಸ್ವಯಂ-ಅಭಿವೃದ್ಧಿ ಹೊಂದಿದ ಆಪರೇಟಿಂಗ್ ಸಿಸ್ಟಮ್ ಅನ್ನು ಪ್ರಾರಂಭಿಸಿದೆ. ಇದು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಸುಮಾರು 100 ಸಾಧನಗಳಿಗೆ ಪವರ್ ನೀಡುತ್ತದೆ.
ಯುಎಸ್ ನಿರ್ಬಂಧಗಳಿಂದ ಬೇಸರಗೊಂಡ ಹುವಾಯಿ 2019ರಲ್ಲಿ ಮಾರುಕಟ್ಟೆ ನಾಯಕ ಗೂಗಲ್‌ನ ಆಂಡ್ರಾಯ್ಡ್ ಓಎಸ್ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಹಾರ್ಮನಿಓಎಸ್ ಎಂಬ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್ (ಓಎಸ್) ಅನ್ನು ನಿರ್ಮಿಸುವುದಾಗಿ ಘೋಷಿಸಿತ್ತು.