ನವದೆಹಲಿ: ಪಿಸಿ ಮತ್ತು ಪ್ರಿಂಟರ್ಗಳನ್ನು ತಯಾರಿಸುವ ಪ್ರಖ್ಯಾತ ಕಂಪನಿ HP Inc ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ವಿಶೇಷವಾಗಿ ತಯಾರಿಸಲಾಗಿರುವ ಹೊಸ ಶ್ರೇಣಿಯ Envy x360 15 ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳು 15.6-ಇಂಚಿನ OLED ಟಚ್ ಡಿಸ್ಪ್ಲೇ ಮತ್ತು ಬಾಳಿಕೆ ಬರುವ 360 ಡಿಗ್ರಿ ಹಿಂಜ್ ಅನ್ನು ಹೊಂದಿವೆ. ಇವುಗಳ ಆರಂಭಿಕ ಬೆಲೆ 82,999 ರೂಪಾಯಿಗಳಾಗಿದೆ.
ಎಚ್ಪಿ ಯ ಹೊಸ Envy x360 15 ಶ್ರೇಣಿಯ ಲ್ಯಾಪ್‌ಟಾಪ್‌ಗಳು ಕಂಟೆಂಟ್ ರಚನೆಕಾರರಿಗೆ ಉತ್ತಮ ದರ್ಜೆಯ ಡಿಸ್ಪ್ಲೇ ಮತ್ತು ಸ್ಮಾರ್ಟ್, ಉನ್ನತ ಕಾರ್ಯಕ್ಷಮತೆಯ ಉತ್ಪಾದಕತೆಯ ವೈಶಿಷ್ಟ್ಯಗಳ ಮೂಲಕ ತಮ್ಮ ಸೃಜನಶೀಲತೆ ಮತ್ತು ಅಭಿವ್ಯಕ್ತಿಗೆ ಅನುವು ಮಾಡಿಕೊಡುತ್ತದೆ ಎಂದು ಎಚ್ಪಿ ಇಂಡಿಯಾದ ಪರ್ಸನಲ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಹೇಳಿದ್ದಾರೆ.
ಈ ಲ್ಯಾಪ್ಟಾಪ್ನಲ್ಲಿ ಏನೇನೆಲ್ಲ ವಿಶೇಷತೆಗಳಿವೆ?:ಉತ್ತಮ ಡಿಸ್ಪ್ಲೇ ಮತ್ತು ಶಕ್ತಿಯುತ ಕಾರ್ಯಕ್ಷಮತೆಗಾಗಿ ಹೊಸ HP Envy x360 15 ಪೋರ್ಟ್‌ಫೋಲಿಯೊ ಇಂಟೆಲ್ ಐರಿಸ್ Xe ಗ್ರಾಫಿಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟ 12 ನೇ Gen ಇಂಟೆಲ್ ಕೋರ್ EVO i7 ಪ್ರೊಸೆಸರ್ ಅನ್ನು ಹೊಂದಿದೆ. ಕಂಪನಿಯ ಪ್ರಕಾರ ಈ ಲ್ಯಾಪ್ಟಾಪ್ನ ಫ್ಲಿಕ್ಕರ್-ಫ್ರೀ ಮತ್ತು ಆ್ಯಂಟಿ ರಿಫ್ಲೆಕ್ಷನ್ ಸ್ಕ್ರೀನ್ ದೀರ್ಘಾವಧಿ ಬಾಳಿಕೆ ಬರುತ್ತದೆ ಮತ್ತು ಅತ್ಯುತ್ತಮ ಬಣ್ಣಗಳ ಸಂಯೋಜನೆಯನ್ನು ನೀಡುತ್ತದೆ.
ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಐಸೇಫ್ ಡಿಸ್ಪ್ಲೇ ಇದರಲ್ಲಿದೆ. ವೇಗವಾದ ಸಂವಹನಕ್ಕಾಗಿ ಎಮೋಜಿ ಕೀಬೋರ್ಡ್ ಇದ್ದು, 5MP IR ಕ್ಯಾಮೆರಾವನ್ನು ಆಟೋ ಫ್ರೇಮ್ ತಂತ್ರಜ್ಞಾನ ಮತ್ತು ವರ್ಧಿತ ಗೌಪ್ಯತೆಗಾಗಿ AI Noise reduction ನಂಥ ವೈಶಿಷ್ಟ್ಯಗಳನ್ನು ಹೊಂದಿದೆ.