ಹೈದರಾಬಾದ್:ನೀವು ನಿಮ್ಮ ಫೋನ್ ಲಾಕ್ ಮಾಡುವುದು ಅತ್ಯಂತ ಸುರಕ್ಷಿತ ಮಾರ್ಗ. ನಿಮ್ಮ ವೈಯಕ್ತಿಕ ವಿಷಯ ಹಾಗೂ ಗೌಪ್ಯತೆಯನ್ನು ಕಾಪಾಡಲು ಪಾಸ್ವರ್ಡ್ ಇಡುವುದು ಉತ್ತಮವಾದ ಅಭ್ಯಾಸವಾಗಿದೆ. ಈ ಮೂಲಕ ನಿಮ್ಮ ಫೋನ್ ಬೇರೆಯವರ ಕೈಗೆ ಸಿಕ್ಕಾಗ ಸುರಕ್ಷಿತವಾಗಿಸಿರುವುದಕ್ಕೆ ಈ ಪಿನ್ ಅನುಕೂಲ ಮಾಡಿಕೊಡುತ್ತದೆ.
ಆದರೆ ನೀವು ಪಿನ್ ಮತ್ತು ಪ್ಯಾಟರ್ನ್ ಮರೆತರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ?. ಫೇಸ್ ಐಡಿ ಮತ್ತು ಟಚ್ ಐಡಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೇ? ಅಥವಾ ಫೋನ್ ಅನ್‌ಲಾಕ್ ಮಾಡಲು ಸಾಧ್ಯವಾಗುತ್ತಿಲ್ಲವೇ. ಅದಕ್ಕೊಂದು ಉಪಾಯ ಇದೆ. ನೀವು ನಾವು ಹೇಳಿದಂತೆ ಮಾಡಿ ಸಾಕು. ನಿಮ್ಮ ಫೋನ್ ಸುಲಭವಾಗಿ ಅನ್ಲಾಕ್ ಮಾಡಬಹುದು.
ಆಂಡ್ರಾಯ್ಡ್ ಫೋನ್‌ನಲ್ಲಿ 'ಫೈಂಡ್ ಮೈ ಡಿವೈಸ್' ಮೂಲಕ ಇದನ್ನು ಸರಿಪಡಿಸಬಹುದು. ಇದು ಫೋನ್ ಟ್ರ್ಯಾಕ್ ಮಾಡುತ್ತದೆ. ರಿಮೋಟ್ ಆಗಿ ಲಾಕ್ ಮಾಡಲು ಅಥವಾ ಅನ್ಲಾಕ್ ಮಾಡಲು ಸಹ ಬಳಸಬಹುದು. ನೀವು ಫೋನ್‌ಗೆ Google ಖಾತೆಯನ್ನು ಸೇರಿಸಿದರೆ, ಈ ವೈಶಿಷ್ಟ್ಯವು ಸ್ವಯಂಚಾಲಿತವಾಗಿ ಸ್ವಿಚ್ ಆನ್ ಆಗುತ್ತದೆ.
- ಮೊದಲು ಡೆಸ್ಕ್‌ಟಾಪ್ ಅಥವಾ ಇತರ ಸಾಧನದಿಂದ Google Find My Device ವೆಬ್‌ಸೈಟ್‌ಗೆ ಹೋಗಿ. ಲಾಕ್ ಆಗಿರುವ ಫೋನ್‌ಗೆ ಬಳಸುತ್ತಿರುವ ಅದೇ ಖಾತೆಯೊಂದಿಗೆ ನೀವು ಸೈನ್ ಇನ್ ಮಾಡಬೇಕಾಗುತ್ತದೆ.
- ಲಾಕ್ ಆಗಿರುವ ಫೋನ್‌ನ ಹೆಸರಿನ ಮೇಲೆ ಕ್ಲಿಕ್ ಮಾಡಿ. 'ಲಾಕ್' ಆಯ್ಕೆಯನ್ನು ಟ್ಯಾಪ್ ಮಾಡಿ. ತಾತ್ಕಾಲಿಕ ಪಾಸ್ಕೋಡ್ ಅನ್ನು ನಮೂದಿಸಿ ಮತ್ತು 'ಲಾಕ್' ಬಟನ್ ಒತ್ತಿರಿ.
- ನಂತರ Ring, Lock, Erase ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ. ಇವುಗಳಲ್ಲಿ ಲಾಕ್ ಅನ್ನು ಆಯ್ಕೆಮಾಡಿ. ಕೆಳಗೆ ಕಾಣಿಸುವ ಹುಡುಕಾಟ ಬಾಕ್ಸ್‌ನಲ್ಲಿ ತಾತ್ಕಾಲಿಕ ಪಾಸ್ಕೋಡ್ ಅನ್ನು ನಮೂದಿಸಿ.
- ಆ ಬಳಿಕ ಲಾಕ್ ಆಗಿರುವ ಆಂಡ್ರಾಯ್ಡ್ ಫೋನ್‌ನಲ್ಲಿ ತಾತ್ಕಾಲಿಕ ಪಾಸ್ಕೋಡ್ ಅನ್ನು ನಮೂದಿಸಿ. ಫೋನ್ ಅನ್‌ಲಾಕ್ ಆಗುತ್ತದೆ.