ಕರ್ನಾಟಕ

karnataka

ETV Bharat / science-and-technology

ನಿಮ್ಮ ಸಾಮಾಜಿಕ ಜಾಲತಾಣದ  ಖಾತೆಗಳ ಪಾಸ್‌ವರ್ಡ್ ಹ್ಯಾಕ್‌ ಆಗಿವೆಯಾ? : ಇಲ್ಲಿದೆ ಸಂಪೂರ್ಣ ಮಾಹಿತಿ - ಟ್ವಿಟ್ಟರ್‌

password hack: ಗೂಗಲ್‌, ಫೇಸ್‌ಬುಕ್‌, ಟ್ವಿಟ್ಟರ್‌ ಅಥವಾ ಇತರ ಯಾವುದೇ ನಿಮ್ಮ ಖಾತೆಗಳ ಪಾಸ್‌ವರ್ಡ್‌ಗಳನ್ನು ಹ್ಯಾಕ್ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಹೇಗೆ? ಹ್ಯಾಕ್‌ ಮಾಡಲು ಆಗದಂತೆ ಬಲವಾದ ಪಾಸ್‌ವರ್ಡ್‌ ಇಡೋದು ಹೇಗೆ ಎನ್ನುವ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

How to know if password was hacked? Know via Google Chrome Password Checker
ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳ ಪಾಸ್‌ವರ್ಡ್ ಹ್ಯಾಕ್‌ ಆಗಿರೋದನ್ನ ತಿಳಿಯೋದು ಹೇಗೆ?

By

Published : Nov 24, 2021, 11:28 PM IST

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿತ ಜಾಲತಾಣಗಳಲ್ಲಿ ತಮ್ಮ ಖಾತೆಗಳ ಸುರಕ್ಷತೆಯ ಬಗ್ಗೆಯೇ ಹೆಚ್ಚು ಮಂದಿ ಚಿಂತಿಸುತ್ತಾರೆ. ಪಾಸ್‌ವರ್ಡ್‌ಗಳ ಹ್ಯಾಕ್ ಮಾಡುವ ಹಾವಳಿ ಹೆಚ್ಚಾಗಿರುವುದರ ಹಿನ್ನೆಲೆ ಈ ಚಿಂತೆಗೆ ಕಾರಣವಾಗಿದೆ.

password hack: ಹಾಗಾದರೆ ತಮ್ಮ ಪಾಸ್‌ವರ್ಡ್‌ ಹ್ಯಾಕ್‌ ಮಾಡಲಾಗಿದೆಯೇ ಅಥವಾ ಸ್ಟ್ರಾಂಗ್ ಪಾಸ್‌ವರ್ಡ್ ಇಟ್ಟುಕೊಳ್ಳುವುದು ಹೇಗೆ ಎಂದು ನಿಮ್ಮನ್ನ ನೀವೇ ಕೇಳಿಕೊಳ್ಳುತ್ತಿದ್ದೀರಾ? ಹೆಚ್ಚಿನ ಜನರಿಗೆ ತಮ್ಮ ಗೂಗಲ್‌, ಫೇಸ್‌ಬುಕ್‌, ಟ್ವಿಟ್ಟರ್‌ ಅಥವಾ ಇತರ ಖಾತೆಗಳ ಪಾಸ್‌ವರ್ಡ್‌ಗಳನ್ನು ಹ್ಯಾಕ್ ಮಾಡಿದಾಗ ಗೊತ್ತಾಗುವುದಿಲ್ಲ. ವಾಸ್ತವವಾಗಿ ಪಾಸ್ವರ್ಡ್ ನಿಮ್ಮ ಡೇಟಾಗೆ ಪ್ರಮುಖ ರಕ್ಷಣೆಯಾಗಿರುವುದರಿಂದ ಪಾಸ್‌ವರ್ಡ್ ಸೋರಿಕೆಯಾಗುವುದನ್ನು ತಡೆಯುವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.

Password Checker: ಗೂಗಲ್‌ ಸಂಸ್ಥೆ ಪಾಸ್‌ವರ್ಡ್‌ ಭದ್ರತೆಗಾಗಿ ಕೆಲ ಪರಿಹಾರಗಳನ್ನು ನೀಡಿದ್ದು, ಒಂದು ವೇಳೆ ನೀವು ಸಾಮಾಜಿಕ ಜಾಲತಾಣಗಳಾದ ಗೂಗಲ್‌, ಫೇಸ್‌ಬುಕ್‌, ಟ್ವಿಟ್ಟರ್‌ ಹಾಗೂ ಬ್ಯಾಂಕ್‌ ಖಾತೆಗಳಿಗೆ ಪಾಸ್ ವಾರ್ಡ್‌ಗಳಲ್ಲಿ ಯಾರಿಗಾದರೂ ಹಂಚಿಕೊಂಡಿದ್ದರೆ(ರಾಜಿ), ಗೂಗಲ್‌ ಇದಕ್ಕಾಗಿ ತನ್ನ ಕ್ರೋಮ್​ ಬ್ರೌಸರ್‌ಗೆ ವಿಶೇಷ ಲೇಯರ್‌ ಭದ್ರತೆಯನ್ನು ಸೇರಿಸಿದೆ. ಇದನ್ನು ಗೂಗಲ್ ಕ್ರೋಮ್ ಪಾಸ್‌ವರ್ಡ್ ಪರೀಕ್ಷಕ ಎಂದು ಕರೆಯಲಾಗುತ್ತದೆ. ಇದು ಬ್ರೌಸರ್‌ನಲ್ಲಿ ಉಳಿಸಿದ ಮತ್ತು ಸಿಂಕ್ ಮಾಡಿದ ಎಲ್ಲಾ ಪಾಸ್‌ವರ್ಡ್‌ಗಳ ಸ್ಥಿತಿಯನ್ನು ನಿಮಗೆ ತಿಳಿಸುತ್ತದೆ.

ಅಂತರ್ನಿರ್ಮಿತ ಕ್ರೋಮ್​ ಪಾಸ್‌ವರ್ಡ್ ಪರಿಕರವು ಎಲ್ಲಾ ಉಳಿಸಿದ ಮತ್ತು ಸಿಂಕ್ ಮಾಡಿದ ಪಾಸ್‌ವರ್ಡ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಯಾವುದೇ ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ಸಂಭಾವ್ಯ ಮಾಹಿತಿ ಸೋರಿಕೆಗಳನ್ನು ತಡೆಯುವ ಜೊತೆಗೆ ಪಾಸ್‌ವರ್ಡ್‌ನ ಸಾಮರ್ಥ್ಯದ ಬಗ್ಗೆ ಬಳಕೆದಾರರನ್ನು ಎಚ್ಚರಿಸುತ್ತದೆ.

ಪಾಸ್‌ವರ್ಡ್‌ ಹ್ಯಾಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಕ್ರೋಮ್​ನ್ನು ಬಳಸುವುದು ಹೇಗೆ?

- ಪಾಸ್‌ವರ್ಡ್‌ ಚಕ್ಕರ್‌ನಲ್ಲಿ ಹೆಚ್ಚನ ಸೌಲಭ್ಯಗಳಿಗಾಗಿ ಮೊದಲು ಕ್ರೋಮ್​ ಬ್ರೌಸರ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕು. ನಿಮ್ಮ ವೆಬ್‌ ಬ್ರೌಸರ್‌ಅನ್ನು ಕ್ರೋಮ್​ 96 ಅಥವಾ ಹೊಸ ವರ್ಷನ್‌ಗೆ ಅಪ್‌ಡೇಟ್‌ ಮಾಡಿಕೊಳ್ಳಬೇಕು.

- ನಂತರ ಗೂಗಲ್‌ ಕ್ರೋಮ್​ ಬ್ರೌಸರ್ ಓಪನ್ ಮಾಡಿ ನಿಮ್ಮ ಬ್ರೌಸರ್ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಮೇಲಿರುವ ಸೆಟ್ಟಿಂಗ್ಸ್‌ ಕ್ಲಿಕ್ ಮಾಡಿ

- ಆಟೋಫಿಲ್ ಮೇಲೆ ಕ್ಲಿಕ್ ಮಾಡಿದ ನಂತರ ಪಾಸ್‌ವರ್ಡ್‌ ಆಯ್ಕೆಮಾಡಿ

- ಬಳಿಕ ಪಾಸ್‌ವರ್ಡ್‌ಗಳ ಮೇಲೆ ಕ್ಲಿಕ್ ಮಾಡಿ

ಆಗ ಹಿಸ್ಟರಿಯಲ್ಲಿರುವ ಎಲ್ಲಾ ಪಾಸ್‌ವರ್ಡ್‌ಗಳನ್ನು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡುತ್ತದೆ. ಆಗ ರಾಜಿ ಅಥವಾ ದುರ್ಬಲ ಪಾಸ್‌ವರ್ಡ್‌ಗಳ ಆಧಾರದ ಮೇಲೆ ಅವುಗಳನ್ನು ವರ್ಗೀಕರಿಸುತ್ತದೆ. ನಿಮ್ಮ ಪಾಸ್‌ವರ್ಡ್ ರಾಜಿ ಮಾಡಿಕೊಂಡಿದ್ದರೆ, ಸಾಧ್ಯವಾದಷ್ಟು ಬೇಗ ಅದನ್ನು ಬದಲಾಯಿಸಲು ಅದು ನಿಮಗೆ ಸಲಹೆ ನೀಡುತ್ತದೆ.

ಪಾಸ್‌ವರ್ಡ್ ಪ್ರಬಲವಾಗಿ ಇಟ್ಟುಕೊಳ್ಳುವುದು ಹೇಗೆ?

ನಾರ್ಡ್‌ ಪಾಸ್‌ನ ಇತ್ತೀಚಿನ ಅಧ್ಯಯನವು ಭಾರತದಲ್ಲಿನ ಅತ್ಯಂತ ಸಾಮಾನ್ಯವಾದ ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿನ ಪಾಸ್‌ಪರ್ಡ್‌ಗಳು '12345', '123456', '123456789', '12345678', '1234567890', '1234567', 'qwerty'ಎಂಬುದನ್ನು ಬಹಿರಂಗಪಡಿಸಿದೆ. abc123 ಹೀಗಿರುವ ಎಲ್ಲಾ ಪಾಸ್‌ವರ್ಡ್‌ಗಳನ್ನು ಸೆಕೆಂಡ್‌ನಲ್ಲಿ ಹ್ಯಾಕ್‌ ಮಾಡಬಹುದು ಎಂದು ವರದಿಗಳು ಹೇಳುತ್ತವೆ.

ಎಲ್ಲಾ ಖಾತೆಗಳಿಗೆ ಒಂದೇ ರೀತಿಯ ಪಾಸ್‌ವರ್ಡ್‌ ಬೇಡ

ನಿಮ್ಮ ಖಾತೆಗಳಿಗೂ ಒಂದೇ ರೀತಿಯ ಪಾಸ್‌ವರ್ಡ್‌ ಇಡುವುದು ಅತ್ಯಂತ ಅಪಾಯಕಾರಿ. ಹೀಗಾಗಿ ಮೊದಲು ಅದನ್ನು ಬದಲಾಯಿಸಿ. ಗೂಗಲ್‌, ಫೇಸ್‌ಬುಕ್‌, ಟ್ಟಿಟ್ಟರ್‌ ಯಾವುದೇ ಇರಲಿ ಎಲ್ಲದಕ್ಕೂ ಬೇರೆ ಬೇರೆ ಪಾಸ್‌ವರ್ಡ್‌ಗಳನ್ನು ಇಡಬೇಕು.

ಅತಿ ಚಿಕ್ಕದಾಗಿ ಇಡುವುದಕ್ಕಿಂತ ಕನಿಷ್ಠ 12 ಅಕ್ಷರಗಳನ್ನು ಒಳಗೊಂಡ ಪಾಸ್‌ವರ್ಡ್ ಇಡುವುದು ಒಳ್ಳೆಯದು. ಚಿಕ್ಕದಾಗಿ ಪಾಸ್‌ವರ್ಡ್‌ ಇಟ್ಟರೆ ಸುಲಭವಾಗಿ ಹ್ಯಾಕ್‌ ಮಾಡಲಾಗುತ್ತದೆ. ಹಾಡಿನ ಯಾವುದೇ ಸಾಹಿತ್ಯವಾಗಿರಬಹುದು, ನಿಮಗೆ ಅರ್ಥವನ್ನು ಹೊಂದಿರುವ ನಿಮ್ಮ ಮೆಚ್ಚಿನ ಪದಗಳ ಸರಣಿಯಾಗಿರಬಹುದು ಅಥವಾ ಪುಸ್ತಕದಿಂದ ಒಂದು ನುಡಿಗಟ್ಟು ಉತ್ತಮ ಆಯ್ಕೆಯಾಗಿರಬಹುದು. ಅಂತಹ ಉದ್ದವಾದ ಪಾಸ್‌ವರ್ಡ್‌ಗಳಿಗೆ ಸಂಖ್ಯೆಗಳು ಮತ್ತು ಹ್ಯಾಶ್‌ಟ್ಯಾಗ್ (#) ನಂತಹ ನಿರ್ದಿಷ್ಟ ಅಕ್ಷರಗಳನ್ನು ಸೇರಿಸುವುದರಿಂದ ಅದು ಇನ್ನಷ್ಟು ಬಲಗೊಳ್ಳುತ್ತದೆ.

ನಿಮ್ಮ ಸಾಮಾನ್ಯ ಅಡ್ಡಹೆಸರು,ಇಲ್ಲ ನಿಮ್ಮ ಕುಟುಂಬದ ಸದಸ್ಯರ ಹೆಸರು, ವಿಳಾಸ ಮತ್ತು ಸಾಮಾನ್ಯವಾಗಿ ಲಭ್ಯವಿರುವ ಮಾಹಿತಿಯನ್ನು ಪಾಸ್‌ವರ್ಡ್‌ ಆಗಿ ಇಡಬಾರದು. ಹೀಗೆ ಮಾಡಿದರೆ ಖಾತೆಗಳು ಹ್ಯಾಕ್‌ ಆಗುವುದನ್ನ ತಡೆಯಬಹುದಾಗಿದೆ.

ABOUT THE AUTHOR

...view details