ಕರ್ನಾಟಕ

karnataka

ETV Bharat / science-and-technology

ಇನ್​ಸ್ಟಾಗ್ರಾಮ್ ರೀಲ್ಸ್ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ - ರೀಲ್ ಡೌನ್ಲೋಡ್

ಇನ್​ಸ್ಟಾಗ್ರಾಮ್​ನಲ್ಲಿನ ರೀಲ್​ಗಳನ್ನು ಹೇಗೆ ಡೌನ್ಲೋಡ್ ಮಾಡುವುದು ಎಂಬ ಮಾಹಿತಿ ಇಲ್ಲಿದೆ.

How to download Instagram Reels, the official way
How to download Instagram Reels, the official way

By ETV Bharat Karnataka Team

Published : Nov 24, 2023, 5:07 PM IST

ಜಾಗತಿಕವಾಗಿ ಇನ್​ಸ್ಟಾಗ್ರಾಮ್ ತನ್ನ ಪಬ್ಲಿಕ್​ ಅಕೌಂಟ್​ಗಳಲ್ಲಿನ ವಿಡಿಯೋಗಳನ್ನು ಡೌನ್ಲೋಡ್​ ಮಾಡಲು ಅವಕಾಶ ನೀಡಿದೆ. ಈ ವೈಶಿಷ್ಟ್ಯವನ್ನು ಮೊದಲು ಜುಲೈನಲ್ಲಿ ಅಮೆರಿಕದ​ಲ್ಲಿ ಆರಂಭಿಸಲಾಗಿತ್ತು ಮತ್ತು ಈಗ ಜಗತ್ತಿನ ಎಲ್ಲೆಡೆಯ ಬಳಕೆದಾರರಿಗೆ ಲಭ್ಯವಿದೆ.

ಆದರೆ, ತಮ್ಮ ಅಕೌಂಟ್​ಗಳಲ್ಲಿನ ವಿಡಿಯೋಗಳನ್ನು ಯಾರೆಲ್ಲ ಡೌನ್ಲೋಡ್ ಮಾಡಿಕೊಳ್ಳಬಹುದು ಎಂಬುದನ್ನು ಬಳಕೆದಾರರು ನಿರ್ಧರಿಸಬಹುದು. ಇನ್ನು ನಿರ್ದಿಷ್ಟ ಕ್ರಿಯೇಟರ್ ತನ್ನ ವಿಡಿಯೋಗಳನ್ನು ಬೇರೆಯವರು ಡೌನ್ಲೋಡ್ ಮಾಡುವ ಆಯ್ಕೆಯನ್ನು ಆನ್ ಮಾಡಿದ್ದರೆ ಮಾತ್ರ ಅಂಥ ಅಕೌಂಟಿನ ವಿಡಿಯೋಗಳನ್ನು ಡೌನ್ಲೋಡ್ ಮಾಡಲು ಸಾಧ್ಯ.

ನೀವು ಇನ್​ಸ್ಟಾಗ್ರಾಮ್​ನ ಯಾವುದಾದರೂ ಪಬ್ಲಿಕ್ ಅಕೌಂಟಿನಿಂದ ರೀಲ್​ಗಳನ್ನು ಡೌನ್ಲೋಡ್ ಮಾಡಲು ಯೋಜಿಸುತ್ತಿದ್ದರೆ, ಅದನ್ನು ಹೇಗೆ ಮಾಡಬೇಕೆಂಬ ಬಗ್ಗೆ ಇಲ್ಲಿದೆ ಮಾಹಿತಿ.

ರೀಲ್ ಡೌನ್ಲೋಡ್ ಮಾಡುವ ಮುನ್ನ ತಿಳಿದುಕೊಳ್ಳಬೇಕಾದ ವಿಷಯಗಳು:

  • ಮೊದಲನೆಯದಾಗಿ, ರೀಲ್​ಗಳನ್ನು ಪಬ್ಲಿಕ್ ಇನ್​ಸ್ಟಾಗ್ರಾಮ್ ಖಾತೆಗಳಿಂದ ಮಾತ್ರ ಡೌನ್ಲೋಡ್ ಮಾಡಬಹುದು
  • ಕಂಟೆಂಟ್​ ಕ್ರಿಯೇಟರ್​ಗಳು ಅಕೌಂಟ್ ಸೆಟ್ಟಿಂಗ್ ಮೂಲಕ ತಮ್ಮ ರೀಲ್​ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅನುಮತಿಸುವ ಅಥವಾ ತಡೆಗಟ್ಟುವ ಆಯ್ಕೆಯನ್ನು ಹೊಂದಿದ್ದಾರೆ.
  • ಡೌನ್ಲೋಡ್ ಮಾಡಿದ ರೀಲ್​ಗಳು ಇನ್​ಸ್ಟಾಗ್ರಾಮ್ ವಾಟರ್​ ಮಾರ್ಕ್, ಬಳಕೆದಾರರ ಹೆಸರು ಮತ್ತು ಆಡಿಯೊ ಅಂಶಗಳನ್ನು ಹೊಂದಿರುತ್ತವೆ.
  • ರೀಲ್ಸ್ ಡೌನ್ಲೋಡ್​ಗಳು ವೈಯಕ್ತಿಕ ಬಳಕೆಗಾಗಿ ಮಾತ್ರ ಇದ್ದು, ವಾಣಿಜ್ಯ ಬಳಕೆಗಾಗಿ ಅಲ್ಲ.
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇನ್​​ಸ್ಟಾಗ್ರಾಮ್ ಬಳಕೆದಾರರ ಡೌನ್ಲೋಡ್ ಆಯ್ಕೆಯು ಪೂರ್ವನಿಯೋಜಿತವಾಗಿ ಆಫ್ ಆಗಿರುತ್ತದೆ.

ನಿಮ್ಮ ಇನ್​ಸ್ಟಾಗ್ರಾಮ್ ಖಾತೆಗೆ ರೀಲ್ ಡೌನ್ಲೋಡ್ ಆಯ್ಕೆಯನ್ನು ಸಕ್ರಿಯಗೊಳಿಸುವುದು ಹೇಗೆ?:

  • ಮೊದಲಿಗೆ ನಿಮ್ಮರೀಲ್ ಅನ್ನು ರೆಕಾರ್ಡ್ ಮಾಡುವ ಮತ್ತು ಎಡಿಟ್ ಮಾಡುವ ಮೂಲಕ ಪ್ರಾರಂಭಿಸಿ.
  • ಕೆಳಗಿನ ಬಲ ಮೂಲೆಯಲ್ಲಿರುವ "Next"" ಟ್ಯಾಪ್ ಮಾಡಿ.
  • ಕೆಳಭಾಗದಲ್ಲಿ "More options" ಟ್ಯಾಪ್ ಮಾಡಿ.
  • ಕೆಳಗೆ ಸ್ಕ್ರಾಲ್ ಮಾಡಿ ಮತ್ತು "Advanced Settings" ಟ್ಯಾಪ್ ಮಾಡಿ.
  • "Allow people to download your reels" ಹುಡುಕಿ ಮತ್ತು ಸೆಟ್ಟಿಂಗ್ ಅನ್ನು ಆನ್ ಅಥವಾ ಆಫ್ ಮಾಡಿ.
  • ಎಲ್ಲ ರೀಲ್ ಗಳಿಗೆ ಡೌನ್ ಲೋಡ್ ಅನ್ನು ಕ್ರಿಯಾತ್ಮಕಗೊಳಿಸಬೇಕೆ ಅಥವಾ ನಿಷ್ಕ್ರಿಯಗೊಳಿಸಬೇಕೆ ಅಥವಾ ನೀವು ಅಪ್ ಲೋಡ್ ಮಾಡುತ್ತಿರುವುದನ್ನು ಮಾತ್ರ ಆಯ್ಕೆಮಾಡಿ.
  • ಹಿಂತಿರುಗಲು ಮೇಲಿನ ಎಡ ಬಾಣವನ್ನು ಟ್ಯಾಪ್ ಮಾಡಿ.
  • ಅಂತಿಮವಾಗಿ, ಕೆಳಭಾಗದಲ್ಲಿ "Share" ಟ್ಯಾಪ್ ಮಾಡಿ.

ಪಬ್ಲಿಕ್ ಅಕೌಂಟಿನಿಂದ ರೀಲ್ ಡೌನ್ಲೋಡ್ ಮಾಡುವುದು ಹೇಗೆ?

  • ಇನ್​​ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್ಲೋಡ್ ಮಾಡಲು ಬಯಸುವ ರೀಲ್​ಗೆ ನ್ಯಾವಿಗೇಟ್ ಮಾಡಿ.
  • "Share" ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು "Download" ಆಯ್ಕೆಯನ್ನು ಆರಿಸಿ.
  • ಈಗ ರೀಲ್ ಡೌನ್ ಲೋಡ್ ಆಗುತ್ತದೆ ಮತ್ತು ಮೊಬೈಲ್​ನ ಕ್ಯಾಮೆರಾ ರೋಲ್ ನಲ್ಲಿ ಸೇವ್ ಆಗುತ್ತದೆ.

ಇದನ್ನೂ ಓದಿ: ವರ್ಷಕ್ಕೆ ₹6 ಲಕ್ಷ ಗಳಿಸುತ್ತಿದ್ದಾರೆ ಭಾರತದ ವೃತ್ತಿಪರ ಗೇಮರ್ಸ್​: ಅಧ್ಯಯನ ವರದಿ

ABOUT THE AUTHOR

...view details