ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ):ಟೆಸ್ಲಾ ಸಾಪ್ಟ್ವೇರ್ ಕಂಪನಿ ಮಸ್ಕ್ ಹೆಸರಿನ ರಹಸ್ಯ ಚಾಲಕ ಮೋಡ್ ಕಂಡು ಹಿಡಿದಿದೆ. ಇದಕ್ಕೆ ಕಂಪನಿ ಸಿಇಒ ಮಸ್ಕ್ ಅವರ ಹೆಸರನ್ನೇ ಇಡಲಾಗಿದೆ. ಇದು ಟೆಸ್ಲಾ ವಾಹನಗಳಲ್ಲಿ ಹ್ಯಾಂಡ್ಸ್-ಫ್ರೀ ಡ್ರೈವಿಂಗ್ಗೆ ಅವಕಾಶ ಕಲ್ಪಿಸುತ್ತದೆ. ದಿ ವರ್ಜ್ ಪ್ರಕಾರ, "ಎಲೋನ್ ಮೋಡ್" ಎಂಬ ಗುಪ್ತ ವೈಶಿಷ್ಟ್ಯವನ್ನು ಟೆಸ್ಲಾ ಸಾಫ್ಟ್‌ವೇರ್ ಹ್ಯಾಕರ್ ಕಂಡು ಹಿಡಿದಿದೆ. ಆನ್‌ಲೈನ್‌ನಲ್ಲಿ ಇದನ್ನು @greentheonly ಎಂದು ಕರೆಯಲಾಗುತ್ತದೆ.
ವರ್ಷಗಳವರೆಗೆ ಈ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸಿ ಈ ವೈಶಿಷ್ಠ್ಯ ಕಂಡು ಹಿಡಿಯಲಾಗಿದೆ. ಅನಾಮಧೇಯ ಹ್ಯಾಕರ್ ವಾಹನದ ಕೋಡ್ ಅನ್ನು ಆಳವಾಗಿ ಅಧ್ಯಯನ ಮಾಡಿ ಅಧಿಕೃತವಾಗಿ ಸಕ್ರಿಯಗೊಳಿಸುವ ಮೊದಲು ನಿಮ್ಮ ಪವರ್ ಸೀಟ್ ಅಥವಾ ಮಾಡೆಲ್ 3 ನ ಸೆಂಟರ್ ಕ್ಯಾಮೆರಾವನ್ನು ಬಳಸದಂತೆ ಹೇಗೆ ತಡೆಯಬಹುದು ಎಂಬ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ, ವಿಶೇಷ ವೈಶಿಷ್ಟ್ಯಗಳನ್ನ ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಲೋನ್ ಮೋಡ್ ಅನ್ನು ಕಂಡುಹಿಡಿದ ಮತ್ತು ಸಕ್ರಿಯಗೊಳಿಸಿದ ನಂತರ, ಹ್ಯಾಕರ್ ಸಿಸ್ಟಮ್ ಅನ್ನು ಪರೀಕ್ಷಿಸಲಾಗಿದೆ. ಈ ಮೋಡ್ನ ಪರೀಕ್ಷೆಯ ಅನುಭವಗಳನ್ನು ಕಂಪನಿ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದೆ.
"ಎಲೋನ್ ಮೋಡ್‌ನೊಂದಿಗೆ ಸುಮಾರು 600 ಮೈಲುಗಳನ್ನು ಸಂಚಾರ ಮಾಡಲಾಯಿತು. ಇದು ಹಿಂದಿನ ಪ್ರಯೋಗಕ್ಕಿಂತ ಹೆಚ್ಚು ಉತ್ತಮವಾಗಿದೆ. ಅನೇಕ ಅಂಶಗಳನ್ನು ಈ ಮೋಡ್ನಲ್ಲಿ ಸೇರಿಸಲಾಗಿದೆ. ಈ ಅಂಶ ಅಳವಡಿಸಲು ತಡೆವೇನು ಆಗಿಲ್ಲ. ಹಾಗಾಗಿಯೇ ಕಾರಿನಲ್ಲಿ ಈ ವೈಶಿಷ್ಟ್ಯವನ್ನು ಸೇರ್ಪಡೆ ಮಾಡಲಾಗಿದೆ. ತಡ ಆಗಿರುವ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅದು ಟ್ವೀಟ್ ಪೋಸ್ಟ್ನಲ್ಲಿ ಹೇಳಲಾಗಿದೆ.