ಕರ್ನಾಟಕ

karnataka

ETV Bharat / science-and-technology

ಜಿಸ್ಯಾಟ್-20 ಉಡಾವಣೆಗೆ ಸ್ಪೇಸ್​ಎಕ್ಸ್​ನ ಫಾಲ್ಕನ್ ರಾಕೆಟ್​ ಬಳಸಲಿದೆ ಇಸ್ರೊ - ಎಲ್​ವಿಎಂ ರಾಕೆಟ್​

ಇಸ್ರೊ ತನ್ನ ಜಿಸ್ಯಾಟ್​ ಉಪಗ್ರಹ ಉಡಾವಣೆಗೆ ಈ ಬಾರಿ ಸ್ಪೇಸ್​ ಎಕ್ಸ್​ನ ಫಾಲ್ಕನ್ ರಾಕೆಟ್​ ಅನ್ನು ಬಳಸಲಿದೆ.

India to use US rocket to launch GSAT-20
India to use US rocket to launch GSAT-20

By ETV Bharat Karnataka Team

Published : Jan 3, 2024, 3:53 PM IST

ಚೆನ್ನೈ :ಅಮೆರಿಕದ ರಾಕೆಟ್ ಬಳಸಿ ಇಸ್ರೊ ತನ್ನ ಜಿಸ್ಯಾಟ್ -20 (GSAT-20) ಉಪಗ್ರಹ ಉಡಾವಣೆ ಮಾಡಲಿದೆ. 4 ಟನ್ ಭಾರವನ್ನು ಹೊತ್ತೊಯ್ಯಬಲ್ಲ ರಾಕೆಟ್​ ಅನ್ನು ತಯಾರಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿರುವುದರಿಂದ ಇಸ್ರೊ ಈ ಬಾರಿ ಅಮೆರಿಕದ ರಾಕೆಟ್ ಮೂಲಕ ಉಪಗ್ರಹ ಉಡಾವಣೆ ಮಾಡಲಿದೆ. ಜಿಸ್ಯಾಟ್ -20 ಉಪಗ್ರಹವನ್ನು ಜಿಸ್ಯಾಟ್​-ಎನ್​2 (GSAT-N2) ಎಂದು ಮರುನಾಮಕರಣ ಮಾಡಲಾಗಿದೆ.

ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಪ್ರಕಾರ, ಇಸ್ರೋ ನಿರ್ಮಿಸಿದ 4,700 ಕೆಜಿ ತೂಕದ ಜಿಸ್ಯಾಟ್ -20 ಅನ್ನು 2024 ರ ಎರಡನೇ ತ್ರೈಮಾಸಿಕದಲ್ಲಿ ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್​ಗೆ ಸೇರಿದ ಫಾಲ್ಕನ್ -9 ರಾಕೆಟ್ ಕಕ್ಷೆಗೆ ಸೇರಿಸಲಿದೆ. ಪ್ರಸ್ತುತ ಇಸ್ರೋ ಗರಿಷ್ಠ 4 ಟನ್ ಭಾರ ಹೊತ್ತೊಯ್ಯಬಲ್ಲ ಎಲ್​ವಿಎಂ ರಾಕೆಟ್​ ಅನ್ನು ಹೊಂದಿದೆ. ಆದರೆ ಜಿಸ್ಯಾಟ್ -20 ನಾಲ್ಕು ಟನ್​ಗಿಂತ ಇನ್ನೂ 700 ಕೆಜಿ ಹೆಚ್ಚು ಭಾರವಾಗಿದೆ.

ಈ ಉಪಗ್ರಹವು ಮುಖ್ಯವಾಗಿ ಬ್ರಾಡ್​ಬ್ಯಾಂಡ್​ ಮತ್ತು ಐಎಫ್ಎಂಸಿ ಮತ್ತು ಸೆಲ್ಯುಲಾರ್ ಬ್ಯಾಕ್​ಹೌಲ್ ಸೇವಾ ಅಗತ್ಯಗಳನ್ನು ಪೂರೈಸಲು ಕಡಿಮೆ ವೆಚ್ಚದ Ka-Ka band ಹೈ ಥ್ರೂಪುಟ್ ಉಪಗ್ರಹ (ಎಚ್​ಟಿಎಸ್​) ಸೇವೆಗಳನ್ನು ನೀಡಲಿದೆ.

ಜಿಸ್ಯಾಟ್ -20 ಉಪಗ್ರಹದಲ್ಲಿನ ಎಚ್​ಟಿಎಸ್​ ಸಾಮರ್ಥ್ಯದ ಹೆಚ್ಚಿನ ಭಾಗವನ್ನು ಈಗಾಗಲೇ ಭಾರತೀಯ ಸೇವಾ ಪೂರೈಕೆದಾರರು ಕಾಯ್ದಿರಿಸಿದ್ದಾರೆ ಎಂದು ಎನ್ಎಸ್ಐಎಲ್ ಹೇಳಿದೆ. ಜಿಸ್ಯಾಟ್ -20 ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳು ಸೇರಿದಂತೆ ಪ್ಯಾನ್-ಇಂಡಿಯಾ ವ್ಯಾಪ್ತಿಯನ್ನು ಹೊಂದಿರುವ 32 ಬೀಮ್ ಗಳೊಂದಿಗೆ Ka-Ka ಬ್ಯಾಂಡ್ ಎಚ್ ಟಿಎಸ್ ಸಾಮರ್ಥ್ಯವನ್ನು ನೀಡುತ್ತದೆ.

ಎನ್ಎಸ್ಐಎಲ್ ಪ್ರಕಾರ, ಉಪಗ್ರಹವು ಸುಮಾರು 48 ಜಿಪಿಬಿಎಸ್ ಎಚ್​ಟಿಎಸ್​ ಸಾಮರ್ಥ್ಯವನ್ನು ನೀಡುತ್ತದೆ. ದೂರದ ಅಥವಾ ಸಂಪರ್ಕವಿಲ್ಲದ ಪ್ರದೇಶಗಳ ಬೇಡಿಕೆಯ ಸೇವಾ ಅಗತ್ಯಗಳನ್ನು ಪೂರೈಸಲು ಉಪಗ್ರಹವನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಮೊದಲು ಭಾರತವು ನಾಲ್ಕು ಟನ್ ಅಥವಾ ಅದಕ್ಕೂ ಹೆಚ್ಚಿನ ತೂಕದ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಲು ಏರಿಯನ್ ಸ್ಪೇಸ್ ನ ಏರಿಯನ್ ರಾಕೆಟ್ ಗಳನ್ನು ಬಳಸುತ್ತಿತ್ತು. ಈಗ ಸ್ಪೇಸ್ ಎಕ್ಸ್ ನ ರಾಕೆಟ್​ ಅನ್ನು ಬಳಸಲು ನಿರ್ಧರಿಸಲಾಗಿದೆ. ಭಾರತದ ಕೆಲವು ಖಾಸಗಿ ಉಪಗ್ರಹ ಕಂಪನಿಗಳು ತಮ್ಮ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ಸ್ಪೇಸ್ ಎಕ್ಸ್ ನ ರಾಕೆಟ್ ಗಳನ್ನು ಬಳಸಿವೆ. ಸ್ಪೇಸ್​ ಎಕ್ಸ್​ ರಾಕೆಟ್​ ವೆಚ್ಚ ಇಸ್ರೋಗಿಂತ ಅಗ್ಗವಾಗಿದೆ ಎಂದು ಅವು ಹೇಳಿವೆ.

ಇದನ್ನೂ ಓದಿ : ಎಐ ತಂತ್ರಜ್ಞಾನದಿಂದ ಬದಲಾಗಲಿವೆ ಸ್ಮಾರ್ಟ್​ಫೋನ್​ಗಳು; ತಜ್ಞರ ಅಭಿಮತ

ABOUT THE AUTHOR

...view details