ಕರ್ನಾಟಕ

karnataka

ETV Bharat / science-and-technology

ಇನ್ಮುಂದೆ ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಫಿಕ್ಸ್​ ಮಾಡಬಹುದು ಎಕ್ಸ್​ಪೈರಿ ಡೇಟ್​; ಏನಿದು ಹೊಸ ವೈಶಿಷ್ಟ್ಯ? - ಫಿಕ್ಸ್​ ಮಾಡಬಹುದು ಎಕ್ಸ್​ಪೈರಿ ಡೇಟ್

ಗ್ರೂಪ್​ನಲ್ಲಿ ಎಕ್ಸ್​​ಪೈರಿ ಡೇಟ್​ ಅನ್ನು ಸೆಟ್​ ಮಾಡುವ ಮೂಲಕ ಬಳಕೆದಾರರ ಸ್ನೇಹಿಯಾಗಿ ಮತ್ತೊಂದು ಹೊಸ ಹೆಜ್ಜೆ ಮುಂದಿಟ್ಟಿದೆ ವಾಟ್ಸ್​ಆ್ಯಪ್.

group-expiry-date-can-now-be-fixed-on-whatsapp-what-is-the-new-feature
group-expiry-date-can-now-be-fixed-on-whatsapp-what-is-the-new-feature

By

Published : Mar 7, 2023, 5:21 PM IST

ಸ್ಯಾನ್​ ಫ್ರಾನ್ಸಿಸ್ಕೋ( ಅಮೆರಿಕ):ಜಗತ್ತಿನಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಜನಪ್ರಿಯ ಮೆಸೇಜಿಂಗ್​​​​ ಫ್ಲಾಟ್​​ಫಾರ್ಮ್​ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಸಿಹಿ ಸುದ್ದಿ ನೀಡುತ್ತಲೇ ಇದೆ. ಇತ್ತೀಚೆಗಷ್ಟೇ ಮೆಟಾ ಮಾಲೀಕತ್ವದ ವಾಟ್ಸ್​ಆ್ಯಪ್​ ​, ಸ್ಪ್ಲಿಟ್​ ವಿಂಡೋ ಜೊತೆಗೆ ಅಪರಿಚಿತರ ಕಿರಿಕಿರಿ ತಪ್ಪಿಸಲು ಪರಿಹಾರ ಸೂಚಿಸಿತ್ತು. ಇದೀಗ ಬಳಕೆದಾರರ ಸುರಕ್ಷತೆ ಮತ್ತು ಸ್ನೇಹಿಯಾಗಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಏನಿದು ಹೊಸ ವೈಶಿಷ್ಟ್ಯ?: ಏಕಕಾಲದಲ್ಲಿ ಹಲವು ಮಂದಿಯೊಂದಿಗೆ ಗ್ರೂಪ್​ ಚಾಟ್​ ಅನ್ನು ಮಾಡುವ ಸೌಕರ್ಯವನ್ನು ವಾಟ್ಸ್​ಆ್ಯಪ್​​ ​ ಹೊಂದಿದೆ. ಈ ವಾಟ್ಸ್​ಆ್ಯಪ್​​ ​ ಐಒಎಸ್​ ಬೆಟಾಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದು ಗ್ರೂಪ್​ಗಳಿಗೆ ಎಕ್ಸ್​ಪೈರಿ ಡೇಟ್​ ಕೂಡ ಸೆಟ್​ ಮಾಡುವ ಅವಕಾಶ ನೀಡಲಾಗಿದೆ.

ಕೆಲವೊಂದು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಕೆದಾರರು ಕೆಲವು ಕಾಲಕ್ಕಾಗಿ ಗ್ರೂಪ್​ಗಳನ್ನು ಸೃಷ್ಟಿಸಿರುತ್ತಾರೆ. ಈ ಉದ್ದೇಶ ಈಡೇರಿದ ಬಳಿಕ ಈ ಗ್ರೂಪ್​ ಡೆಡ್​ ಆಗಿ ಉಳಿದು ಬಿಡುತ್ತದೆ. ಇದರಿಂದ ಸ್ಟೋರೆಜ್​ ಸಮಸ್ಯೆಗಳನ್ನು ಕೆಲವು ಬಾರಿ ಎದುರಿಸುವ ಸಾಧ್ಯತೆ ಇದೆ. ಈ ರೀತಿ ಡೆಡ್​ ಆಗಿ ಗ್ರೂಪ್​​ ಉಳಿದು ಬಿಡುವ ಬದಲಿ ಇದಕ್ಕೆ ಒಂದು ಎಕ್ಸ್​ಪೈರಿ ಡೇಟ್​ ನಿಗದಿ ಪಡಿಸಬಹುದು. ಈ ಗ್ರೂಪ್​ಗೆ ನೀವು ನಿರ್ದಿಷ್ಟ ದಿನಾಂಕ ದಾಖಲಿಸಬಹುದು. ಈ ದಿನದ ಮುಗಿದ ಬಳಿಕ ಈ ಗ್ರೂಪ್​ ಕಣ್ಮರೆಯಾಗಲಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಹೊರ ಬೀಳಲಿದೆ ಈ ವೈಶಿಷ್ಟ್ಯ: ಸದ್ಯ ಈ ಹೊಸ ಆಯ್ಕೆಯನ್ನು ಗ್ರೂಪ್​ ಮಾಹಿತಿಯಲ್ಲಿ ಲಭ್ಯವಾಗಲಿದೆ ಎಂದು ವಾಬೆಟಾಇನ್ಫೊ ವರದಿ ಮಾಡಿದೆ. ಈ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಬಳಕೆದಾರರು ಆಗ ಒಂದು ದಿನ, ವಾರ ಅಥವಾ ತಿಂಗಳಿಗೆ ಒಂದು ಗ್ರೂಪ್​ ಅವಧಿ ಮುಗಿಯುವ ದಿನಾಂಕವನ್ನು ಸೆಟ್​ ಮಾಡಬಹುದಾಗಿದೆ. ಈ ದಿನಾಂಕದ ಬಳಿಕ ಈ ಗ್ರೂಪ್​ ನಿಮ್ಮ ವಾಟ್ಸ್​ಆ್ಯಪ್​​ನಲ್ಲಿ ಸಿಗುವುದಿಲ್ಲ ಎನ್ನಲಾಗಿದೆ.

ಸ್ಟೋರೆಜ್​ ಸಮಸ್ಯೆಗೆ ಮುಕ್ತಿ: ಈ ವೈಶಿಷ್ಟ್ಯದ ಮತ್ತೊಂದು ವಿಶೇಷ ಎಂದರೆ, ಬಳಕೆದಾರರು ಈ ಎಕ್ಸ್​​ಪೈರ್​ ಡೇಟ್​ ಮುಗಿಯುವ ಮುನ್ನವೇ ಅದರ ದಿನಾಂಕ ಅಥವಾ ಈ ದಿನಾಂಕವನ್ನು ತೆಗೆದು ಹಾಕಬಹುದು. ಆದಾಗ್ಯೂ, ಈ ಆಯ್ಕೆ ಬಳಕೆದಾರರಿಗೆ ಬಿಟ್ಟಿದೆ. ಇತರ ಗುಂಪುಗಳ ಭಾಗಿದಾರರಿಗೆ ಇದು ಅನ್ವಯವಾಗುವುದಿಲ್ಲ.

ಈ ವೈಶಿಷ್ಟ್ಯವು ಮೊಬೈಲ್​ನಲ್ಲಿ ಉತ್ತಮ ಸ್ಟೋರೆಜ್​ ಟೂಲ್​ ಆಗಿ ಕಾರ್ಯ ನಿರ್ವಹಿಸಲಿದ್ದು, ಸ್ಪೇಸ್​ ಅನ್ನು ಉಳಿಸಲಿದೆ. ಇದರ ಜೊತೆಗೆ ಸರಿಯಾದ ಸಮಯಕ್ಕೆ ತಕ್ಕಂತೆ ಈ ಗ್ರೂಪ್​ಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಈ ವೈಶಿಷ್ಟ್ಯ ಸಾಮರ್ಥ್ಯದ ಕುರಿತು ಪರಿಶೀಲನೆ ಅಭಿವೃದ್ಧಿ ಹಂತದಲ್ಲಿದೆ. ಈ ಸಂಬಂಧ ಶೀಘ್ರದಲ್ಲೇ ಅಪ್​ಡೇಟ್​ ಕುರಿತು ಸಂಸ್ಥೆ ತಿಳಿಸಲಾಗಿದೆ.

ಕಳೆದವಾರವಷ್ಟೇ, ವಾಟ್ಸ್​ಆ್ಯಪ್​​ ಸ್ಟೀಕರ್​ ಮೇಕರ್​ ಟೋಲ್​ ಅನ್ನು ಐಒಎಸ್​ ಬಳಕೆದಾರರಿಗೆ ಬಿಡುಗಡೆ ಮಾಡಿತ್ತು. ಈ ಮೂಲಕ ಬಳಕೆದಾರರು, ಇಮೇಜ್​ಗಳನ್ನು ಸ್ಟೀಕರ್​ ಆಗಿ ರೂಪಾಂತರಿಸಬಹುದು. ಇದರಿಂದಾಗಿ ಸ್ಟೀಕರ್​ ಸೃಷ್ಟಿಸಲು ಬಳಕೆ ಮಾಡುತ್ತಿದ್ದ ಧರ್ಟ್​ ಪಾರ್ಟಿ ಅಪ್ಲಿಕೇಶನ್​ ಅನ್ನು ಡೌನ್​ಲೋಡ್​ ಮಾಡುವ ಅಗತ್ಯ ಇರುವುದಿಲ್ಲ.

ಇದನ್ನೂ ಓದಿ: ವಾಟ್ಸ್​​ಆ್ಯಪ್​​ನಿಂದ ಶೆಡ್ಯೂಲ್​ ಗ್ರೂಪ್​ ಕಾಲ್​​ ತಂತ್ರಜ್ಞಾನ ಅಭಿವೃದ್ದಿ.. ತಪ್ಪು ಸಂದೇಶ ಕಳುಹಿಸಿದ್ದರೆ ಅದನ್ನ ನವೀಕರಿಸ ಬಹುದಂತೆ!

ABOUT THE AUTHOR

...view details