ಕರ್ನಾಟಕ

karnataka

ETV Bharat / science-and-technology

ಭಾರತ ಸರ್ಕಾರದ ಹೊಸ ಫೇಸ್ ರಿಕಗ್ನಿಶನ್ ಸಿಸ್ಟಮ್.. ಮಾಸ್ಕ್​ ಹಾಕಿದ್ರೂ ಗುರುತಿಸುತ್ತೆ - etv bharat kannada

ಫೇಸ್ ಮಾಸ್ಕ್, ಗಡ್ಡ ಬಿಡುವುದು, ಮೀಸೆ ಬೆಳೆಸುವುದು, ವಿಗ್ ಧರಿಸುವುದು, ಕನ್ನಡಕ ಧರಿಸುವುದು, ತಲೆಗೆ ಬಟ್ಟೆ ಕಟ್ಟುವುದು, ಮಂಕಿ ಕ್ಯಾಪ್ ಧರಿಸುವುದು, ಟೋಪಿ ಧರಿಸುವುದು ಮುಂತಾದ ಮಾರುವೇಷಗಳಲ್ಲಿರುವಾಗಲೂ ವ್ಯಕ್ತಿಯ ಮುಖ ಪತ್ತೆ ಮಾಡುವಂತೆ FRSD ಅಲ್ಗೋರಿದಮ್ ಅನ್ನು ತಯಾರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ವರದಿಯಲ್ಲಿ ಹೇಳಲಾಗಿದೆ.

ಫೇಸ್ ರಿಕಗ್ನಿಶನ್ ಸಿಸ್ಟಮ್
face recognition system

By

Published : Aug 19, 2022, 12:26 PM IST

ನವದೆಹಲಿ: ಸಮಾಜಘಾತುಕ ವ್ಯಕ್ತಿಗಳನ್ನು ಪತ್ತೆ ಮಾಡಲು ಭಾರತ ಸರ್ಕಾರವು ಅತ್ಯಾಧುನಿಕ ಫೇಸ್ ರಿಕಗ್ನಿಶನ್ ಸಿಸ್ಟಮ್ (ಮುಖ ಗುರುತಿಸುವಿಕೆ ವ್ಯವಸ್ಥೆ) ಒಂದನ್ನು ತಯಾರಿಸಿದೆ. ಮುಖ ಕಾಣಿಸುವ ಅಥವಾ ಮುಚ್ಚಿಕೊಂಡಿರುವ ಅಥವಾ ಮಾಸ್ಕ್ ಹಾಕಿರುವ ಅಥವಾ ಮಂಕಿ ಕ್ಯಾಪ್ ಹಾಕಿರುವ, ಕಡಿಮೆ ಬೆಳಕಿರುವ ನಿರ್ಬಂಧಿತ ಪ್ರದೇಶಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸಮಾಜಗಾತುಕ ವ್ಯಕ್ತಿಗಳ ಮುಖವನ್ನು ಈ ತಂತ್ರಜ್ಞಾನ ಪತ್ತೆ ಮಾಡಲಿದೆ.

ರಕ್ಷಣಾ ಸಚಿವಾಲಯವು ತನ್ನ ಇತ್ತೀಚಿನ AI in Defence ಶೀರ್ಷಿಕೆಯ ವರದಿಯಲ್ಲಿ ಮಾರುವೇಷದಲ್ಲಿರುವವರ ಮುಖ ಗುರುತಿಸುವಿಕೆ ವ್ಯವಸ್ಥೆ (Face Recognition System under Disguise -FRSD) ತಂತ್ರಜ್ಞಾನದ ಬಗ್ಗೆ ತಿಳಿಸಿದೆ. ಇದನ್ನು ಮುಖ್ಯವಾಗಿ ಭಾರತೀಯ ಸೇನೆಗಾಗಿ ತಯಾರಿಸಲಾಗಿದೆ. AI in Defence ವರದಿಯಲ್ಲಿ ಇನ್ನೂ ಹಲವಾರು AI ಆಧರಿತ ವ್ಯವಸ್ಥೆಗಳ ಬಗ್ಗೆಯೂ ಹೇಳಲಾಗಿದೆ.

ಸರ್ವೇಲನ್ಸ್​ ಕ್ಯಾಮೆರಾಗಳ ಮೂಲಕ ಕಾಡಿನಲ್ಲಿ ಮುಖ ಗುರುತಿಸುವಿಕೆ ಬಹಳ ಕಷ್ಟಕರ. ಕಾಡಿನಲ್ಲಿ ಸೆರೆಹಿಡಿಯಲಾದ ಚಿತ್ರಗಳು ಕಡಿಮೆ ಬೆಳಕಿನ ಕಾರಣದಿಂದ ಕಡಿಮೆ ರೆಲ್ಯೂಶನ್ ಹೊಂದಿರುತ್ತವೆ. ಅಲ್ಲದೇ ವ್ಯಕ್ತಿಗಳು ಮಾರುವೇಷದಲ್ಲಿದ್ದಾಗ, ಜನಜಂಗುಳಿಯಲ್ಲಿದ್ದಾಗ ಹಾಗೂ ಹಲವಾರು ಕಡೆಗಳಿಂದ ಬೆಳಕು ಬರುತ್ತಿರುವಾಗ ಸೆರೆಹಿಡಿದ ಚಿತ್ರಗಳಲ್ಲಿನ ವ್ಯಕ್ತಿಗಳ ಮುಖ ಗುರುತಿಸುವಾಗ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ.

ನೀವು ಏನೇ ಮಾಡಿದರೂ ಸಿಕ್ಕಿ ಬೀಳ್ತೀರಿ:ಫೇಸ್ ಮಾಸ್ಕ್, ಗಡ್ಡ ಬಿಡುವುದು, ಮೀಸೆ ಬೆಳೆಸುವುದು, ವಿಗ್ ಧರಿಸುವುದು, ಕನ್ನಡಕ ಧರಿಸುವುದು, ತಲೆಗೆ ಬಟ್ಟೆ ಕಟ್ಟುವುದು, ಮಂಕಿ ಕ್ಯಾಪ್ ಧರಿಸುವುದು, ಟೋಪಿ ಧರಿಸುವುದು ಮುಂತಾದ ಮಾರುವೇಷಗಳಲ್ಲಿರುವಾಗಲೂ ವ್ಯಕ್ತಿಯ ಮುಖ ಪತ್ತೆ ಮಾಡುವಂತೆ FRSD ಅಲ್ಗೋರಿದಮ್ ಅನ್ನು ತಯಾರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ವರದಿಯಲ್ಲಿ ಹೇಳಲಾಗಿದೆ.

ಮಾರುವೇಷಗಳು ಮಾತ್ರವಲ್ಲದೇ ಹಲವಾರು ಬೆಳಕಿನ ಸಂಯೋಜನೆಗಳು, ಮುಖದ ಮೇಲೆ ಬಿದ್ದ ನೆರಳು, ಜನಜಂಗುಳಿಯ ಗೊಂದಲ ಮುಂತಾದುವುಗಳನ್ನು ಸಹ ಹೊಸ ಫೇಸ್ ರಿಕಗ್ನಿಶನ್ ತಂತ್ರಜ್ಞಾನ ಪರಿಹರಿಸಬಲ್ಲದು. ಈ ವ್ಯವಸ್ಥೆಯನ್ನು ನಿರ್ಬಂಧಿತ ಮತ್ತು ಸುರಕ್ಷತಾ ವಲಯಗಳಲ್ಲಿ ವಿಡಿಯೋ ಸರ್ವೇಲನ್ಸ್​ಗಾಗಿ ಅಳವಡಿಸಬಹುದಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವ ಸಮಾಜಘಾತುಕ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹ ಇದನ್ನು ಬಳಸಬಹುದಾಗಿದೆ. ಅಲ್ಲದೆ ಬೃಹತ್ ಪ್ರಮಾಣದ ದತ್ತಾಂಶದಿಂದ ಮುಖ ಪತ್ತೆ ಮಾಡಲು ಕೂಡ ಈ ಅಲ್ಗೋರಿದಮ್ ಅನ್ನು ಸುರಕ್ಷತಾ ಏಜೆನ್ಸಿಗಳು ಬಳಸಿಕೊಳ್ಳಬಹುದು.

AI ಆಧಾರಿತ ವ್ಯವಸ್ಥೆ:ಸೀಕರ್ ಸಿಸ್ಟಮ್ ಎಂದು ಕರೆಯಲ್ಪಡುವ ಮತ್ತೊಂದು AI ಆಧಾರಿತ ವ್ಯವಸ್ಥೆಯನ್ನು ತಯಾರಿಸಲಾಗಿದೆ. ಸ್ವಯಂ ಒಳಗೊಂಡಿರುವ, ಮುಖದ ಗುರುತಿಸುವಿಕೆ, ಕಣ್ಗಾವಲು, ಮೇಲ್ವಿಚಾರಣೆ ಮತ್ತು ವಿಶ್ಲೇಷಣಾ ವ್ಯವಸ್ಥೆಯು ಭಯೋತ್ಪಾದನೆಯನ್ನು ಎದುರಿಸಲು ಬೆದರಿಕೆಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು, ನಿರಂತರ ಕಣ್ಗಾವಲು ಮತ್ತು ತೊಂದರೆಗೊಳಗಾದ ಪ್ರದೇಶಗಳ ಮೇಲ್ವಿಚಾರಣೆ ಮಾಡಲು ಇದನ್ನು ಬಳಸಬಹುದಾಗಿದೆ.

ಹೆಚ್ಚುವರಿಯಾಗಿ, ನಿರ್ಣಾಯಕ ಮಿಲಿಟರಿ ಮತ್ತು ನಾಗರಿಕ ಸಂಸ್ಥೆಗಳ ಅತ್ಯಾಧುನಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗಡಿ ದಾಟುವ ಸ್ಥಳಗಳಲ್ಲಿ ಮೇಲ್ವಿಚಾರಣೆ ಮಾಡಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು.

ABOUT THE AUTHOR

...view details