ನವದೆಹಲಿ:ಜಾಗತಿಕಟೆಕ್ ದೈತ್ಯ ಗೂಗಲ್ ಕಂಪನಿ ನಿಷ್ಕ್ರಿಯವಾಗಿರುವ ಲಕ್ಷಾಂತರ ಖಾತೆಗಳನ್ನು ಸದ್ಯದಲ್ಲಿಯೇ ರದ್ದು (ಡಿಲೀಟ್) ಮಾಡಲಿದೆ. ಎರಡು ವರ್ಷ ಬಳಕೆಯಾಗದ ಖಾತೆಗಳಿಗೆ ಇದು ಅನ್ವಯ. ಈ ಮೂಲಕ ಸೈಬರ್ ವಂಚನೆ ತಡೆಯಲು ಕ್ರಮ ಕೈಗೊಳ್ಳುತ್ತಿದೆ.
ಶನಿವಾರ ತನ್ನ ಬಳಕೆದಾರರಿಗೆ ಗೂಗಲ್ ಇ-ಮೇಲ್ ಕಳುಹಿಸಿದೆ. ಕಂಪನಿಯು ತನ್ನ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಗೂಗಲ್ ಖಾತೆಯ ನಿಷ್ಕ್ರಿಯತೆಯ ಅವಧಿಯನ್ನು ಎರಡು ವರ್ಷಗಳವರೆಗೆ ನವೀಕರಿಸುತ್ತದೆ ಎಂದು ತಿಳಿಸಿದೆ. ಈ ಬದಲಾವಣೆಯು ನಿಷ್ಕ್ರಿಯವಾಗಿರುವ ಯಾವುದೇ ಗೂಗಲ್ ಖಾತೆಗೆ ಅನ್ವಯಿಸುತ್ತದೆ. "ಇದನ್ನು ಸೈನ್ ಇನ್ ಮಾಡಲಾಗಿಲ್ಲ/ ಎರಡು ವರ್ಷಗಳ ಅವಧಿಯಲ್ಲಿ ಬಳಸಲಾಗಿಲ್ಲ". ನಿಷ್ಕ್ರಿಯ ಖಾತೆ ಮತ್ತು ಅದರಲ್ಲಿರುವ ಯಾವುದೇ ವಿಷಯ ಡಿಸೆಂಬರ್ 1, 2023ರಿಂದ ಅಳಿಸಲು ಅರ್ಹವಾಗಿರುತ್ತದೆ ಎಂದು ಕಂಪನಿ ಹೇಳಿದೆ.
ನೀವು ಎರಡು ವರ್ಷಗಳಿಂದ ಗೂಗಲ್ ಖಾತೆಯಲ್ಲಿ ನಿಷ್ಕ್ರಿಯವಾಗಿದ್ದರೆ/ ಎರಡು ವರ್ಷಗಳಿಂದ ಯಾವುದೇ ಗೂಗಲ್ ಸೇವೆಗೆ ಸೈನ್ ಇನ್ ಮಾಡಲು ನಿಮ್ಮ ಖಾತೆಯನ್ನು ಬಳಸದ ಹೊರತು ಈ ಬದಲಾವಣೆ ನಿಮ್ಮ ಮೇಲೆ ಪರಿಣಾಮ ಬೀರದು. "ಈ ಬದಲಾವಣೆ ಇಂದು ಜಾರಿಗೆ ಬಂದರೂ, ನಾವು ಯಾವುದೇ ಖಾತೆಯನ್ನು ಅಳಿಸುವುದು ಡಿಸೆಂಬರ್‌ನಲ್ಲೇ ಆಗಿರುತ್ತದೆ" ಎಂದು ತಿಳಿಸಿದೆ.
ಇದನ್ನೂ ಓದಿ:ಗೂಗಲ್ AI ಚಾಟ್ಬಾಟ್ Bard ಈಗ 9 ಭಾರತೀಯ ಭಾಷೆಗಳಲ್ಲಿ ಲಭ್ಯ.. ನೀವೂ ಒಮ್ಮೆ ಟ್ರೈ ಮಾಡಿ!
"ಖಾತೆಯನ್ನು ನಿಷ್ಕ್ರಿಯವೆಂದು ಪರಿಗಣಿಸಿದರೆ, ಕಂಪನಿಯು ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು/ ಯಾವುದೇ ಖಾತೆಯ ವಿಷಯವನ್ನು ಅಳಿಸುವ ಮೊದಲು ಗೂಗಲ್ ಬಳಕೆದಾರರಿಗೆ ಮತ್ತು ಅವರ ಮರುಪ್ರಾಪ್ತಿ ಇ-ಮೇಲ್‌ಗಳಿಗೆ (ಯಾವುದಾದರೂ ಒದಗಿಸಿದ್ದರೆ) ಹಲವಾರು ಜ್ಞಾಪನೆ ಇ-ಮೇಲ್‌ಗಳನ್ನು ಕಳುಹಿಸುತ್ತದೆ. ನಿಮ್ಮ ಖಾತೆಯಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು ಈ ಜ್ಞಾಪನೆ ಇ-ಮೇಲ್‌ಗಳು ಕನಿಷ್ಠ 8 ತಿಂಗಳ ಮೊದಲು ಬರುತ್ತವೆ. ಗೂಗಲ್ ಖಾತೆಯನ್ನು ಅಳಿಸಿದ ನಂತರ, ಹೊಸ ಗೂಗಲ್ ಖಾತೆಯನ್ನು ರಚಿಸುವಾಗ ಅಳಿಸಲಾದ ಖಾತೆಯ 'Gmail' ವಿಳಾಸವನ್ನು ಮತ್ತೆ ಬಳಸಲಾಗುವುದಿಲ್ಲ" ಎಂದು ಕಂಪನಿ ವಿವರಣೆ ಕೊಟ್ಟಿದೆ.
ಗೂಗಲ್ ಖಾತೆಯನ್ನು ಸಕ್ರಿಯವಾಗಿರಿಸಲು ಸರಳವಾದ ಮಾರ್ಗವೆಂದರೆ ಕನಿಷ್ಠ ಎರಡು ವರ್ಷಗಳಿಗೊಮ್ಮೆ ಖಾತೆಗೆ ಸೈನ್ ಇನ್ ಮಾಡುವುದು. ಕಳೆದ ಎರಡು ವರ್ಷಗಳಲ್ಲಿ ನೀವು ಇತ್ತೀಚೆಗೆ ನಿಮ್ಮ ಗೂಗಲ್ ಖಾತೆಗೆ ಸೈನ್ ಇನ್ ಮಾಡಿದ್ದರೆ, ನಿಮ್ಮ ಖಾತೆಯನ್ನು ಸಕ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಅಳಿಸಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.
ನಷ್ಟವೇನು?:ಜಿ ಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್, ಯೂಟ್ಯೂಬ್, ಗೂಗಲ್ ಫೋಟೋಸ್ ಸೇರಿದಂತೆ ನಿಮ್ಮ ಗೂಗಲ್ ಖಾತೆ ಸಕ್ರಿಯ ಆಗದೇ ಇದ್ದರೆ ಇವುಗಳನ್ನು ಕಳೆದುಕೊಳ್ಳಲಿದ್ದೀರಿ.
ಇದನ್ನೂ ಓದಿ:ಗೂಗಲ್ನ ಹೊಸ ವೈಶಿಷ್ಟ್ಯ Grammar Check; ಬಳಸುವುದು ಹೇಗೆ?... ನೀವೂ ಒಮ್ಮೆ ಟ್ರೈ ಮಾಡಿ!!