ನವದೆಹಲಿ: ತನ್ನ ಕ್ರೋಮ್ ಬ್ರೌಸರ್ನ ಹೊಸ ಸೆಕ್ಯೂರಿಟಿ ಅಪ್ಡೇಟ್ ಅನ್ನು ತಕ್ಷಣವೇ ಇನ್ಸ್ಟಾಲ್ ಮಾಡಿಕೊಳ್ಳಿ ಎಂದು ಗೂಗಲ್ ತನ್ನ ಬಳಕೆದಾರರಿಗೆ ಸೂಚಿಸಿದೆ. ಪ್ರಬಲ ಬಗ್ ಒಂದರ ಮೂಲಕ ಹ್ಯಾಕರ್ಗಳು ಹ್ಯಾಕಿಂಗ್ ಪ್ರಯತ್ನಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಗೂಗಲ್ ಈ ಎಚ್ಚರಿಕೆ ರವಾನಿಸಿದೆ.
'CVE-2022-3075' ಹೆಸರಿನ ಬಗ್ ಕಾಣದಂತೆ ಇದ್ದು, ಇದರಿಂದ ಅಪಾಯವಿದೆ ಮತ್ತು Insufficient data validation in Mojo ಎಂಬ ಸಂದೇಶವನ್ನು ಇದು ತೋರಿಸುತ್ತದೆ ಎಂದು ಹೆಸರು ಬಹಿರಂಗಪಡಿಸದ ಸೆಕ್ಯೂರಿಟಿ ರಿಸರ್ಚರ್ ಒಬ್ಬರು ಹೇಳಿದ್ದಾರೆ. ಗೂಗಲ್ ಕ್ರೋಮ್ ಬಳಸುವ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಬಳಕೆದಾರರಿಗಾಗಿ ಗೂಗಲ್ ಈ ಹೊಸ ಸೆಕ್ಯೂರಿಟಿ ಪ್ಯಾಚ್ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ಯಾಚ್ ಎಲ್ಲರಿಗೂ ಲಭ್ಯವಾಗಲಿದೆ.