ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಟೆಕ್ ದೈತ್ಯ ಗೂಗಲ್ ಹಲವಾರು ಹೊಸ ಫೀಚರ್ಗಳನ್ನು ಪರಿಚಯಿಸಲು ಮುಂದಾಗಿದೆ. ನಿಯರ್ಬೈ ಶೇರ್ (Nearby Share) ಸೇರಿದಂತೆ ಬಳಕೆದಾರರು ಪ್ರೀತಿಪಾತ್ರರ ಜೊತೆಗೆ ಸಂವಹನ ನಡೆಸಲು ಸಹಾಯ ಮಾಡುವ ಫೀಚರ್ಗಳನ್ನು ಕಲ್ಪಿಸುತ್ತಿದೆ.
ನಿಯರ್ಬೈ ಶೇರ್ನಿಂದ ಆಂಡ್ರಾಯ್ಡ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕ್ರೋಮ್‌ಬುಕ್‌ಗಳ ನಡುವೆ ಫೈಲ್‌ಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಹಂಚಿಕೊಳ್ಳಲು ಬಳಕೆದಾರರಿಗೆ ಅನುಮತಿಸಲಾಗುತ್ತದೆ. ಅಲ್ಲದೇ, ಫೋಟೋಗಳು ಅಥವಾ ವಿಡಿಯೋಗಳು ಅಥವಾ ಸಂಪೂರ್ಣ ಫೋಲ್ಡರ್‌ಗಳಾಗಿದ್ದರೂ ಸಹ ನಿಯರ್ಬೈ ಶೇರ್ನಿಂದ ಶೇರ್ ಮಾಡಿಕೊಳ್ಳಬಹುದಾಗಿದೆ.
ಮುಂದಿನ ಕೆಲವು ವಾರಗಳಲ್ಲಿ ನಿಮ್ಮ ಸ್ವಂತ ಫೈಲ್‌ಗಳನ್ನು ಸಲೀಸಾಗಿ ವರ್ಗಾಯಿಸಲು ನೀವು ನಿಯರ್ಬೈ ಶೇರ್ ಬಳಸಲು ಸಾಧ್ಯವಾಗುತ್ತದೆ ಎಂದು ಆಂಡ್ರಾಯ್ಡ್‌ನ ಉತ್ಪನ್ನ ನಿರ್ವಹಣೆಯ ಹಿರಿಯ ನಿರ್ದೇಶಕ ಸ್ಕಾಟ್ ಬ್ಲಾಂಕ್‌ಸ್ಟೀನ್ ತಿಳಿಸಿದ್ದಾರೆ.
ಮೆನುವಿನಿಂದ ನಿಮ್ಮ ಗೂಗಲ್ ಖಾತೆಗೆ ಲಾಗ್ ಇನ್ ಆಗಿರುವ ಆಂಡ್ರಾಯ್ಡ್ ಸಾಧನಗಳನ್ನು ಆಯ್ಕೆ ಮಾಡಿ, ಅವುಗಳ ನಡುವೆ ಫೈಲ್‌ಗಳನ್ನು ತ್ವರಿತವಾಗಿ ಹಂಚಿಕೊಳ್ಳಲು ಮತ್ತು ಒಮ್ಮೆ ನೀವು ಆಯ್ಕೆಮಾಡಿದ ನಂತರ ನಿಮ್ಮ ಪರದೆಯು (ಸ್ಕ್ರೀನ್) ಆಫ್ ಆಗಿದ್ದರೂ ಸಹ ನಿಮ್ಮ ಫೈಲ್ಸ್ಗಳ ವರ್ಗಾವಣೆ ಸ್ವಯಂಚಾಲಿತವಾಗಿ ನಡೆಯುತ್ತದೆ ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ಕಂಪನಿಯು ಇತ್ತೀಚೆಗೆ ಹೊಸ ನೋಟ ಪರಿಚಯಿಸಿದೆ. ದೊಡ್ಡ ಸ್ಕ್ರೀನ್ಗಳಿಗಾಗಿ ಗೂಗಲ್ ವರ್ಕ್ಸ್ಪೇಸ್ ಅಪ್ಲಿಕೇಶನ್‌ಗಳನ್ನು ನವೀಕರಿಸಿದೆ. ಇದರಿಂದ ಟ್ಯಾಬ್ಲೆಟ್‌ಗಳಲ್ಲಿ ಬಳಕೆದಾರರ ಮೆಚ್ಚಿನ ಗೂಗಲ್ ಅಪ್ಲಿಕೇಶನ್‌ಗಳನ್ನು ಆಪ್ಟಿಮೈಜ್ ಮಾಡುವುದನ್ನು ಮುಂದುವರಿಸುತ್ತಿದೆ. ಇದು ಗೂಗಲ್ ಡ್ರೈವ್ ಮತ್ತು ಕೀಪ್‌ಗಾಗಿ ಮರು ವಿನ್ಯಾಸಗೊಳಿಸಲಾದ ವಿಜೆಟ್‌ಗಳಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿ ಹೇಳಿದೆ.
ನವೀಕರಿಸಿದ ಗೂಗಲ್ ಡ್ರೈವ್ ವಿಜೆಟ್‌ನೊಂದಿಗೆ ಮೂರು ಹೋಮ್ ಸ್ಕ್ರೀನ್ ಬಟನ್‌ಗಳು ಈಗ ನಿಮ್ಮ ಗೂಗಲ್ ಡಾಕ್ಸ್, ಗೂಗಲ್ ಸ್ಲೈಡ್‌ಗಳು ಮತ್ತು ಗೂಗಲ್ ಶೀಟ್‌ಗಳ ಫೈಲ್‌ಗಳಿಗೆ ಒಂದೇ ಸ್ಪರ್ಶ ಸಾಕುತ್ತದೆ. ಎಂದು ತಿಳಿಸಲಾಗಿದೆ. ಜೊತೆಗೆ ಕಂಪನಿಯು ಅನೇಕ ಹೊಸ ಎಮೋಜಿ ಕಿಚನ್ ಮ್ಯಾಶಪ್‌ಗಳನ್ನೂ ಪರಿಚಯಿಸಲಾಗುತ್ತಿದೆ. ಇವುಗಳು ಗೂಗಲ್ ಮೀಟ್‌ನಲ್ಲಿ ಬಳಕೆ ಲಭ್ಯ ಇರುತ್ತವೆ. ಲೈವ್ ಹಂಚಿಕೆ ವೈಶಿಷ್ಟ್ಯಗಳೊಂದಿಗೆ ನೀವು ಯೂಟ್ಯೂಬ್ ವಿಡಿಯೊಗಳನ್ನು ಸಹ - ವೀಕ್ಷಿಸಬಹುದು. ಮತ್ತು ಏಕಕಾಲದಲ್ಲಿ 100 ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಕ್ಲಾಸಿಕ್ ಆಟಗಳನ್ನು ಆಡಬಹುದು ಎಂದು ವಿವರಿಸಲಾಗಿದೆ.
ಇದನ್ನೂ ಓದಿ:ನಿಮ್ಮ ಧ್ವನಿ ಕೇಳಿ ಕೋವಿಡ್ ಪತ್ತೆ ಮಾಡುತ್ತೆ ಈ ಆ್ಯಪ್ !