ನವದೆಹಲಿ:ಮೊಬೈಲ್, ಇ-ಮೇಲ್, ಡಿಜಿಟಲ್ ಲಾಕರ್, ಸಾಮಾಜಿಕ ಮಾಧ್ಯಮಗಳಿಗೆ ನೀಡಿದ ಮಾಹಿತಿಯಿಂದ ಇಂದು ಯಾವುದೂ ವೈಯಕ್ತಿಕವಾಗಿ ಉಳಿದುಕೊಂಡಿಲ್ಲ. ಇದು ನಮ್ಮ ಭದ್ರತೆಯ ಬಗ್ಗೆ ಅನುಮಾನ ಮೂಡಿಸಿದೆ. ಇದನ್ನು ಹೋಗಲಾಡಿಸಲು ಗೂಗಲ್ ವೈಯಕ್ತಿಕ ಮಾಹಿತಿಯನ್ನು ಶಾಶ್ವತವಾಗಿ ಅಳಿಸಿ ಹಾಕುವ ಆಯ್ಕೆಯನ್ನು ನೀಡಿದೆ.
ಗೂಗಲ್ನಲ್ಲಿ ಸೋರಿಕೆಯಾದ ಮಾಹಿತಿಯನ್ನು ಸ್ವತಃ ನಾವೇ ಅದನ್ನು ಅಳಿಸಿ ಹಾಕಬಹುದು. ಇಲ್ಲವೇ ಇಂತಹದ್ದನ್ನು ಡಿಲಿಟ್ ಮಾಡಿ ಎಂದು ಕೋರಿಕೆ ಸಲ್ಲಿಸಬಹುದು. ರಿಸಲ್ಟ್ ಅಬೌಟ್ ಯು ಎಂಬ ಆಯ್ಕೆಯನ್ನು ನೀಡುವುದಾಗಿ ಗೂಗಲ್ ತನ್ನ ವಾರ್ಷಿಕ ಡೆವಲಪರ್ ಸಮ್ಮೇಳನದಲ್ಲಿ ಈ ಹಿಂದೆ ಘೋಷಿಸಿತ್ತು.
ಈ ವರ್ಷಾರಂಭದಲ್ಲಿ ಘೋಷಿಸಲಾದ ನಿಮ್ಮ ಬಗೆಗಿನ ಮಾಹಿತಿ ಆಯ್ಕೆಯನ್ನು ಬಳಕೆದಾರರಿಗೆ ನೀಡಲಿದೆ. ಈ ಹೊಸ ಆಯ್ಕೆಯಿಂದ ವೈಯಕ್ತಿಕ ಮಾಹಿತಿಯಾದ ಮನೆ ವಿಳಾಸ, ಇಮೇಲ್ ವಿಳಾಸ, ಫೋನ್ ಸಂಖ್ಯೆ ಅಥವಾ ಗೂಗಲ್ನಲ್ಲಿ ನಮ್ಮ ಬಗ್ಗೆ ಹುಡುಕಾಟಕ್ಕಿರುವ ಯಾವುದೇ ಇತರ ಮಾಹಿತಿಯನ್ನು ಅಲ್ಲಿಂದ ಅಳಿಸಿ ಹಾಕಬಹುದು.
ಮಾಹಿತಿ ಅಳಿಸುವುದು ಹೇಗೆ?:ಗೂಗಲ್ನಲ್ಲಿ ನಮ್ಮ ಬಗ್ಗೆ ಯಾವುದೇ ಮಾಹಿತಿ ಕಂಡು ಬಂದಲ್ಲಿ ಆ ಪರದೆಯ ಮೂಲೆಯಲ್ಲಿರುವ ಮೂರು ಡಾಟ್ ಇರುವ ಓವರ್ಫ್ಲೋ ಮೆನುವನ್ನು ಕ್ಲಿಕ್ ಮಾಡಬೇಕು. ಆಗ ಅಲ್ಲಿ ಅಬೌಟ್ ದಿಸ್ ರಿಸಲ್ಟ್ ಎಂಬ ಆಯ್ಕೆ ಬರುತ್ತದೆ. ಅದರಲ್ಲಿ "ರಿಮೂವ್ ರಿಸಲ್ಟ್" ಇರುತ್ತದೆ. ಅದನ್ನು ಒತ್ತಬೇಕು.