ಕರ್ನಾಟಕ

karnataka

ETV Bharat / science-and-technology

ಆಂಡ್ರಾಯ್ಡ್​, ಕ್ರೋಮ್​ಗಾಗಿ ಪಾಸ್​ಕೀಗಳನ್ನು ಹೊರತರುತ್ತಿರುವ ಗೂಗಲ್​​ - ಆಂಡ್ರಾಯ್ಡ್​

ಉತ್ತಮ ಸುರಕ್ಷತೆಗಾಗಿ ಆಂಡ್ರಾಯ್ಡ್ ಮತ್ತು ಕ್ರೋಮ್ ಎರಡಕ್ಕೂ ಪಾಸ್‌ಕೀ ಬಿಡುಗಡೆಗೊಳಿಸುವುದಾಗಿ ಗೂಗಲ್​ ಘೋಷಿಸಿದೆ. ಪಾಸ್‌ಕೀಗಳು ಪಾಸ್‌ವರ್ಡ್‌ಗಳು ಮತ್ತು ಇತರ ಫಿಶ್ ಮಾಡಬಹುದಾದ ದೃಢೀಕರಣ ರೂಪಗಳಿಗೆ ಸುರಕ್ಷತೆಯನ್ನು ನೀಡುತ್ತವೆ.

Google rolls out Passkeys for Android and Chrome
ಟೆಕ್ ದೈತ್ಯ ಗೂಗಲ್

By

Published : Oct 13, 2022, 5:52 PM IST

ಸ್ಯಾನ್ ಫ್ರಾನ್ಸಿಸ್ಕೋ:ಟೆಕ್ ದೈತ್ಯ ಗೂಗಲ್ ಉತ್ತಮ ಸುರಕ್ಷತೆಗಾಗಿ ಆಂಡ್ರಾಯ್ಡ್ ಮತ್ತು ಕ್ರೋಮ್ ಎರಡಕ್ಕೂ ಪಾಸ್‌ಕೀಯನ್ನು ನೀಡುವುದಾಗಿ ಘೋಷಿಸಿದೆ. ಪಾಸ್‌ಕೀಗಳು ಪಾಸ್‌ವರ್ಡ್‌ಗೆ ಪರ್ಯಾಯವಾಗಿವೆ. ಅವುಗಳನ್ನು ಬೇರೆಯವರು ಬಳಸಲು ಸಾಧ್ಯವಾಗುವುದಿಲ್ಲ ಜೊತೆಗೆ ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಇಡುತ್ತದೆ. ಅಷ್ಟೇ ಅಲ್ಲದೇ ಫಿಶಿಂಗ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸುತ್ತದೆ ಎಂದು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಪಾಸ್​​ಕೀಗಳನ್ನು ಉದ್ಯಮದ ಮಾನದಂಡಗಳ ಮೇಲೆ ನಿರ್ಮಿಸಲಾಗಿದೆ. ಇದು ಎಲ್ಲಾ ಕಡೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ವೆಬ್‌ಸೈಟ್‌ಗಳಿಗೆ ಮತ್ತು ಅಪ್ಲಿಕೇಶನ್‌ಗಳಿಗೆ ಬಳಸಬಹುದಾಗಿದೆ. ಪಾಸ್‌ಕೀಗಳು ಬಳಕೆದಾರರ ಅನುಭವ (UX) ಮಾದರಿಯನ್ನು ಅನುಸರಿಸುತ್ತದೆ. ಒಂದು ವೇಳೆ ಪಾಸ್​ಕೀಯನ್ನು ಮರೆತಾಗ ಬಳಕೆದಾರರು ಫೋನ್‌ ಮತ್ತು PC ನಲ್ಲಿ ಕ್ಲೌಡ್ ಮೂಲಕ ಇದನ್ನು ಪಡೆಯಬಹುದಾಗಿದೆ.

ಆಂಡ್ರಾಯ್ಡ್​, ಕ್ರೋಮ್​ಗಾಗಿ ಪಾಸ್​ಕೀಗಳನ್ನು ಹೊರತರುತ್ತಿರುವ ಗೂಗಲ್​​

ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಸಂಗ್ರಹವಾಗಿರುವ ಪಾಸ್‌ಕೀಗಳನ್ನು ಬಳಸಿಕೊಂಡು ಹತ್ತಿರದ ಇತರ ಸಾಧನಗಳಲ್ಲಿ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಲಾಗಿನ್ ಮಾಡಬಹುದು. ಕೀಲಿಯು ಎರಡು ಪ್ರಮುಖ ಸಾಮರ್ಥ್ಯಗಳನ್ನು ಸಕ್ರಿಯಗೊಳಿಸುತ್ತದೆ - ಆಂಡ್ರಾಯ್ಡ್​ ಸಾಧನಗಳಲ್ಲಿ, ಬಳಕೆದಾರರು ಸುರಕ್ಷಿತವಾಗಿ ಸಿಂಕ್ರೊನೈಸ್ ಮಾಡಲಾದ ಪಾಸ್‌ಕೀಗಳನ್ನು ರಚಿಸಬಹುದು ಮತ್ತು ಬಳಸಿಕೊಳ್ಳಬಹುದು. 'WebAuthn API' ಮೂಲಕ, ಡೆವಲಪರ್‌ಗಳು ಕ್ರೋಮ್​​, ಆ್ಯಂಡ್ರಾಯ್ಡ್ ಮತ್ತು ಇತರ ಬೆಂಬಲಿತ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಬಳಕೆದಾರರಿಗಾಗಿ ತಮ್ಮ ವೆಬ್‌ಸೈಟ್‌ಗಳಿಗೆ ಪಾಸ್‌ಕೀಗಳನ್ನು ಇಟ್ಟುಕೊಳ್ಳಬಹುದಾಗಿದೆ.

ಇದನ್ನೂ ಓದಿ:ಕಡಿಮೆ ಬಳಕೆ ಕಾರಣ ಚೀನಾದಲ್ಲಿ ಗೂಗಲ್​ ಅನುವಾದ ಸೇವೆ ಬಂದ್​

ಡೆವಲಪರ್‌ಗಳು Chrome Canary ಅನ್ನು ಬಳಸಬಹುದು ಮತ್ತು ಇದೀಗ ಇದನ್ನು ಪರೀಕ್ಷಿಸಲು Google Play ಸೇವೆಗಳ ಬೀಟಾಗೆ ಸೈನ್ ಅಪ್ ಮಾಡಬಹುದು. ಈ ವರ್ಷದ ನಂತರ, ಎರಡೂ ವೈಶಿಷ್ಟ್ಯಗಳನ್ನು ಸ್ಟೇಬ್ಲೆ ಚಾನಲ್‌ಗಳ ಮೂಲಕ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. ಪಾಸ್‌ಕೀಗಳು ವಿಂಡೋಸ್, ಮ್ಯಾಕೋಸ್ ಮತ್ತು ಐಒಎಸ್, ಕ್ರೋಮ್, ಓಎಸ್ ಸೇರಿದಂತೆ ಹಲವಾರು ಸಿಸ್ಟಮ್‌ಗಳು ಮತ್ತು ಬ್ರೌಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ ಅವು ಉದ್ಯಮದ ಮಾನದಂಡಗಳನ್ನು ಆಧರಿಸಿವೆ ಎಂದು ಕಂಪನಿ ಹೇಳಿದೆ.

ABOUT THE AUTHOR

...view details