ನವದೆಹಲಿ: ಹೊಸ ಐಟಿ ಕಾಯ್ದೆ 2021ರ ಅಡಿ, ಈ ಜುಲೈನಲ್ಲಿ ಭಾರತದಲ್ಲಿ ಬಳಕೆದಾರರಿಂದ ಗೂಗಲ್ಗೆ ದಾಖಲೆಯ 1,37,657 ದೂರುಗಳು ಬಂದಿದ್ದು, 6,89,457 ತಪ್ಪು ಮಾಹಿತಿ ನೀಡುವ ತುಣುಕುಗಳನ್ನು ಅದೇ ತಿಂಗಳು ಗೂಗಲ್ ತೆಗೆದುಹಾಕಿದೆ. ಭಾರತೀಯ ಬಳಕೆದಾರರಿಂದ ಸ್ವೀಕರಿಸಿದ ಹೆಚ್ಚಿನ ದೂರುಗಳು ಹಕ್ಕುಸ್ವಾಮ್ಯ ಉಲ್ಲಂಘನೆಗಳಿಗೆ (135,341) ಸಂಬಂಧಿಸಿವೆ. ಇತರ ವರ್ಗಗಳಲ್ಲಿ ಟ್ರೇಡ್‌ಮಾರ್ಕ್, ನ್ಯಾಯಾಲಯದ ಆದೇಶ, ಗ್ರಾಫಿಕ್ ಲೈಂಗಿಕ ವಿಷಯ, ವಂಚನೆ ಮತ್ತು ಇತರೆ ವಿಷಯಗಳು ಸೇರಿವೆ.
ವಿವಿಧ ಗೂಗಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಥಳೀಯ ಕಾನೂನುಗಳು ಅಥವಾ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನಂಬಲಾದ ಮೂರನೇ ವ್ಯಕ್ತಿಯ ವಿಷಯಕ್ಕೆ ಸಂಬಂಧಿಸಿದಂತೆ, ಅದೇ ಅವಧಿಯಲ್ಲಿ ದೇಶದಲ್ಲಿ ಗೊತ್ತುಪಡಿಸಿದ ಕಾರ್ಯವಿಧಾನಗಳ ಮೂಲಕ ಗೂಗಲ್ ಕಂಪನಿಯು ವೈಯಕ್ತಿಕ ಬಳಕೆದಾರರಿಂದ 37,173 ದೂರುಗಳನ್ನು ಸ್ವೀಕರಿಸಿದೆ. ಜೂನ್‌ನಲ್ಲಿ, ಬಳಕೆದಾರರ ದೂರುಗಳ ಆಧಾರದ ಮೇಲೆ ಗೂಗಲ್ 1,11,493 ತಪ್ಪು ಮಾಹಿತಿಗಳನ್ನು ತೆಗೆದುಹಾಕಿದೆ.
ದೂರುಗಳು ವಿವಿಧ ವರ್ಗಗಳನ್ನು ಒಳಗೊಂಡಿರುತ್ತವೆ. ಕೆಲವು ವಿನಂತಿಗಳು ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ್ದವಾಗಿರಬಹುದು. ಇನ್ನು ಕೆಲವರು ಮಾನನಷ್ಟದಂತಹ ಆಧಾರದ ಮೇಲೆ, ವಿಷಯದ ಪ್ರಕಾರಗಳನ್ನು ನಿಷೇಧಿಸುವ ಸ್ಥಳೀಯ ಕಾನೂನುಗಳ ಉಲ್ಲಂಘನೆಯನ್ನು ಪ್ರತಿಪಾದಿಸಬಹುದು ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ.