ನವದೆಹಲಿ : ಗೂಗಲ್ ಪ್ಲೇ ಮೂವೀಸ್ ಮತ್ತು ಟಿವಿ (Google Play Movies & TV) ಆ್ಯಪ್ ಅನ್ನು ಗೂಗಲ್ ಸ್ಥಗಿತಗೊಳಿಸಲಿದೆ. ಹಾಗಾಗಿ ಇನ್ನು ಮುಂದೆ ಗೂಗಲ್ ಪ್ಲೇ ಮೂವೀಸ್ ಮತ್ತು ಟಿವಿ ಆ್ಯಪ್ ಆಂಡ್ರಾಯ್ಡ್ ಟಿವಿ ಅಥವಾ ಗೂಗಲ್ ಪ್ಲೇ ವೆಬ್ ಸೈಟ್ ಗಳಲ್ಲಿ ಲಭ್ಯವಾಗುವುದಿಲ್ಲ.
ಆದಾಗ್ಯೂ ಆಂಡ್ರಾಯ್ಡ್ ಟಿವಿಗಳು, ಗೂಗಲ್ ಟಿವಿ, ಗೂಗಲ್ ಟಿವಿ ಮೊಬೈಲ್ ಅಪ್ಲಿಕೇಶನ್ (ಆಂಡ್ರಾಯ್ಡ್ ಮತ್ತು ಐಒಎಸ್) ಮತ್ತು ಯೂಟ್ಯೂಬ್ನಲ್ಲಿ ಜನರು ಈ ಹಿಂದೆ ಖರೀದಿಸಿದ ಕಂಟೆಂಟ್ ಅನ್ನು (ಸಕ್ರಿಯ ಬಾಡಿಗೆಗಳು ಸೇರಿದಂತೆ) ಮುಂದೆಯೂ ವೀಕ್ಷಿಸಬಹುದು ಎಂದು ಕಂಪನಿ ಇತ್ತೀಚಿನ ಅಪ್ಡೇಟ್ನಲ್ಲಿ ತಿಳಿಸಿದೆ.
ಗೂಗಲ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರನ್ನು ಗೂಗಲ್ ಟಿವಿ ಅಪ್ಲಿಕೇಶನ್ಗೆ ತಂದಿದೆ. "ನೀವು ಹೊಸ ಚಲನಚಿತ್ರಗಳನ್ನು ಹೇಗೆ ಖರೀದಿಸುತ್ತೀರಿ ಅಥವಾ ಗೂಗಲ್ ಮೂಲಕ ನೀವು ಖರೀದಿಸಿದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಹೇಗೆ ವೀಕ್ಷಿಸುತ್ತೀರಿ ಎಂಬುದನ್ನು ಸರಳೀಕರಿಸಲು ನಾವು ಕೆಲ ಬದಲಾವಣೆ ಮಾಡುತ್ತಿದ್ದೇವೆ" ಎಂದು ಕಂಪನಿ ಹೇಳಿದೆ.
ಗೂಗಲ್ ಈಗ ಕೆಲ ಸಮಯದಿಂದ ಬಳಕೆದಾರರನ್ನು ಗೂಗಲ್ ಪ್ಲೇ ಮೂವೀಸ್ ಮತ್ತು ಟಿವಿಯಿಂದ ದೂರ ಇಡುತ್ತಿದೆ. ಜನವರಿ 17, 2024 ರಿಂದ ಶಾಪ್ ಟ್ಯಾಬ್ನಲ್ಲಿ ನೀವು ಈ ಹಿಂದೆ ಖರೀದಿಸಿದ ಟೈಟಲ್ಗಳನ್ನು ವೀಕ್ಷಿಸಬಹುದು ಅಥವಾ ಆಂಡ್ರಾಯ್ಡ್ ಟಿವಿಯಲ್ಲಿ ಹೊಸ ಚಲನಚಿತ್ರಗಳನ್ನು ಖರೀದಿಸಬಹುದು ಮತ್ತು ಹೊಸ ಟೈಟಲ್ಗಳನ್ನು ಬಾಡಿಗೆ ಪಡೆಯಬಹುದು.
"ಶಾಪ್ ಟ್ಯಾಬ್ನಲ್ಲಿ ನಿಮ್ಮ ಲೈಬ್ರರಿ ಮೆನುವಿನಲ್ಲಿ ಸಕ್ರಿಯ ರೆಂಟಲ್ಸ್ ಸೇರಿದಂತೆ ಖರೀದಿಸಿದ ಟೈಟಲ್ಗಳನ್ನು ನೀವು ಕಾಣಬಹುದು" ಎಂದು ಗೂಗಲ್ ಹೇಳಿದೆ. ವೆಬ್ ಬ್ರೌಸರ್ನಲ್ಲಿ ಈ ಹಿಂದೆ ಖರೀದಿಸಿದ ಟೈಟಲ್ಗಳನ್ನು ನೀವು ಇನ್ನು ಮುಂದೆ ಯೂಟ್ಯೂಬ್ನಲ್ಲಿ ವೀಕ್ಷಿಸಬಹುದು.
ಗೂಗಲ್ ಪ್ಲೇ ಮೂವೀಸ್ ಮತ್ತು ಟಿವಿ ಆ್ಯಪ್ ಅನ್ನು ಗೂಗಲ್ 2011ರಲ್ಲಿ ಆರಂಭಿಸಿತ್ತು. ಇದು ಸಿನಿಮಾ ಮತ್ತು ಟಿವಿ ನೋಡಲು ಮತ್ತು ಸಿನಿಮಾಗಳನ್ನು ಬಾಡಿಗೆ ಪಡೆದು ವೀಕ್ಷಿಸುವ ಜನಪ್ರಿಯ ಆ್ಯಪ್ ಆಗಿತ್ತು. ದಶಕದ ನಂತರ ಗೂಗಲ್ ಈಗ ಈ ಆ್ಯಪ್ ಅನ್ನು ಸ್ಥಗಿತಗೊಳಿಸುತ್ತಿದೆ. ವೀಡಿಯೊ ಕಂಟೆಂಟ್ ಎಲ್ಲವನ್ನೂ ಯೂಟ್ಯೂಬ್ನೊಂದಿಗೆ ಸಂಯೋಜಿಸುವ ಯೋಜನೆಯ ಭಾಗವಾಗಿ ಗೂಗಲ್ ಈ ಕ್ರಮ ಕೈಗೊಂಡಿದೆ.
ಇದನ್ನೂ ಓದಿ : 2023ರಲ್ಲಿ ಭಾರತೀಯರು ಅತಿಹೆಚ್ಚು Google Search ಮಾಡಿದ ವಿಷಯಗಳೇನು? ಇಲ್ಲಿದೆ ಮಾಹಿತಿ