ಸ್ಯಾನ್ ಫಾನ್ಸಿಸ್ಕೊ: ಗೂಗಲ್ ತನ್ನ ವಿಂಡೋಸ್ 8, ವಿಂಡೋಸ್ 8.1, ಸರ್ವರ್ 2012 ಮತ್ತು ವಿಂಡೋಸ್ನ 32 ಬಿಟ್ ವರ್ಷನ್ನ ಡ್ರೈವ್ ಫಾರ್ ಡೆಸ್ಕ್ಟಾಪ್ ಬೆಂಬಲವನ್ನು ಆಗಸ್ಟ್ನಲ್ಲಿ ನಿಲ್ಲಿಸುವುದಾಗಿ ಗೂಗಲ್ ಘೋಷಿಸಿದೆ. ಈ ಸೇವೆಯಲ್ಲಿನ ಎದುರಾಗುವ ತೊಂದರೆ ನಿರ್ಬಂಧಿಸಲು ವಿಂಡೋಸ್ ಬಳಕೆದಾರರು ವಿಂಡೋಸ್ 10 (64 ಬಿಟ್) ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಮೊರೆ ಹೋಗಬೇಕಿದೆ. ಆಗಸ್ಟ್ 2023ಕ್ಕಿಂತ ಮುಂಚೆಯೇ ಬಳಕೆದಾರರು ಹೆಚ್ಚಿನ ಆವೃತ್ತಿ ಸೇವೆಯಲ್ಲಿ ತೊಡಗುವಂತೆ ಗೂಗಲ್ ತಿಳಿಸಿದೆ.
ಇದೇ ವೇಳೆ ಸಂಸ್ಥೆ, 32 ಬಿಟ್ ಆವೃತ್ತಿ ವಿಂಡೋಸ್ ಅನ್ನು ಬಳಕೆದಾರರು ಬ್ರೌಸರ್ ಕೂಲಕ್ ಗೂಗಲ್ ಡ್ರೈವ್ ಲಭ್ಯತೆ ಪಡೆಯಬಹುದು ಎಂದಿದೆ. ಇದೇ ಏಪ್ರಿಲ್ನಲ್ಲಿ ಸಂಸ್ಥೆ, ಗೂಗಲ್ ಡ್ರೈವ್ನಲ್ಲಿ ಫೈಲ್ಸ್ಗಳ ಸಂಖ್ಯೆಯ ಮೇಲೆ ಮಿತಿ ವಿಧಿಸಿತು. ಇದೀಗ ಬಳಕೆದಾರರು 5 ಮಿಲಿಯನ್ಗಿಂತಲೂ ಹೆಚ್ಚಿನ ಗೂಗಲ್ ಡ್ರೈವ್ ಫೈಲ್ಸ್ ಸೃಷ್ಟಿಸಬಹುದಾಗಿದೆ ಎಂದು ಹೇಳಿದೆ.
ಗೂಗಲ್ ವಕ್ತಾರ ರೊಸ್ಸ್ ರಿಚೆಂಡ್ರಫೆರ್ ತಿಳಿಸುವಂತೆ, ಈ ಬದಲಾವಣೆ ಮುಖ್ಯ ಗುರಿ ಎಂದರೆ, ಬಲವಾದ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದಾಗಿದೆ. ಇದರಿಂದ ತಪ್ಪು ಬಳಕೆಯನ್ನು ತಪ್ಪಿಸಲು ಸಹಾಯ ಮಾಡಲಾಗುವುದು ಎಂದರು.
ಗೂಗಲ್ ಕೂಡ ತನ್ನ ಸರ್ಚ್ ಚಿಪ್ಸ್ ಅನ್ನು ಭವಿಷ್ಯದ ಡ್ರೈವ್ಗೆ ಪರಿಚಯಿಸಿದೆ. ಇದು ಕೂಡ ಕೆಲವು ಫೈಲ್ ಟೈಪ್, ಮಾಲೀಯಕರು ಮತ್ತು ಕಡೆಯದಾಗಿ ಮೋಡಿಫೈ ಆದ ಡೇಟ್ ಅನ್ನು ಫಿಲ್ಟರ್ ಮೂಲಕ ಬಳಕೆದಾರರು ಬಳಸಬಹುದಾಗಿದೆ. ವಿಂಡೋಸ್ 8 ಮತ್ತು 8. 1ಅನ್ನು ನಿಲ್ಲಿಸುವುದು ಎಂದು ಅರ್ಥ ಎಂದರೆ, ತಮ್ಮ ಬ್ರೌಸರ್‌ಗಳಲ್ಲಿ ಡ್ರೈವ್ ಅನ್ನು ಬಳಸಲಾಗುವುದಿಲ್ಲ ಎಂದರ್ಥವಲ್ಲ. ಇದರ ಬಳಸುವಾಗ ಆಪರೇಟಿಂಗ್ ಸಿಸ್ಟಮ್‌ಗಳು ಅವರು ಬಳಸುವ ಬ್ರೌಸರ್‌ನಿಂದ ಬೆಂಬಲಿತವಾಗಿರಬೇಕು.