ಕರ್ನಾಟಕ

karnataka

ETV Bharat / science-and-technology

ವೆರಿಫೈ ಆಗಿ, ಸಾವಿರಾರು ಡಾಲರ್ ರೊಕ್ಕ ಗಳಿಸಿ; Twitter ಬಳಕೆದಾರರಿಗೆ ಮಸ್ಕ್ ಕರೆ! - ಟ್ವಿಟರ್​ನ ಜಾಹೀರಾತು ಆದಾಯ

ಟ್ವಿಟರ್​ ಬ್ಲೂ ಸಬ್​ಸ್ಕ್ರಿಪ್ಷನ್ ಪಡೆಯುವ ಮೂಲಕ ಬಳಕೆದಾರರು ಆದಾಯ ಪಡೆಯಲು ಮುಂದಾಗಬೇಕೆಂದು ಎಲೋನ್ ಮಸ್ಕ್ ಹೇಳಿದ್ದಾರೆ.

Musk urges Twitter users to get verified
Musk urges Twitter users to get verified

By

Published : Jul 23, 2023, 12:31 PM IST

ಸ್ಯಾನ್ ಫ್ರಾನ್ಸಿಸ್ಕೊ : ಎಲ್ಲ ಬಳಕೆದಾರರು ತಮ್ಮ ಟ್ವಿಟರ್ ಖಾತೆಯನ್ನು ವೆರಿಫೈ ಮಾಡಿಸಿಕೊಂಡು, ಜಾಹೀರಾತು ಆದಾಯದಲ್ಲಿ ಪಾಲು ಪಡೆಯಲು ಪ್ರಯತ್ನಿಸಬೇಕೆಂದು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಶನಿವಾರ ಕರೆ ನೀಡಿದ್ದಾರೆ. ಟ್ವಿಟರ್ ಬ್ಲೂ ಪೇಡ್​ ಸಬ್​ಸ್ಕ್ರಿಪ್ಷನ್ ಪಡೆಯುವುದರಿಂದ ಮಾತ್ರವೇ ಅದು ಹೇಗೆ ಹಣ ಗಳಿಸಬಹುದು ಎಂಬ ಬಗ್ಗೆ ಮಾತ್ರ ಮಸ್ಕ್ ಸ್ಪಷ್ಟಪಡಿಸಿಲ್ಲ.

ಸದ್ಯದ ಟ್ವಿಟರ್ ನಿಯಮಗಳ ಪ್ರಕಾರ 10 ಲಕ್ಷ ಫಾಲೋವರ್​ಗಳನ್ನು ಹೊಂದಿದ್ದು, ಪ್ರತಿತಿಂಗಳು 5 ಮಿಲಿಯನ್ ಇಂಪ್ರೆಶನ್​​ ಹೊಂದಿದ ಬಳಕೆದಾರರು ಮಾತ್ರ ಆದಾಯ ಪಡೆಯಲು ಅರ್ಹರಾಗಿದ್ದಾರೆ. ಹೀಗಿರುವಾಗ ಕೇವಲ ವೆರಿಫೈಡ್​ ಸಬ್​ಸ್ಕ್ರಿಪ್ಷನ್ ಪಡೆದು ಹಣ ಗಳಿಸುವುದು ಹೇಗೆ ಎಂಬುದು ಗೊತ್ತಾಗಿಲ್ಲ.

"ಟ್ವಿಟರ್​ನಲ್ಲಿನ ಅನೇಕ ಅಕೌಂಟ್​ದಾರರು ವೆರಿಫೈಡ್​ ಚಂದಾದಾರರಾದರೆ ಅವರು ಜಾಹೀರಾತು ಆದಾಯ ಹಂಚಿಕೆಯಲ್ಲಿ ತಿಂಗಳಿಗೆ ಸಾವಿರಾರು ಡಾಲರ್‌ಗಳನ್ನು ಗಳಿಸಬಹುದು" ಎಂದು ಟ್ವಿಟರ್ ಪೋಸ್ಟ್ ಮಾಡಿದೆ. "ತಿಂಗಳಿಗೆ $7 ಪಾವತಿಸಿ (ವಾರ್ಷಿಕ ಯೋಜನೆ) ಚಂದಾದಾರರಾಗಲು ಕೇವಲ 2 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ" ಎಂದು ಅದು ಹೇಳಿದೆ.

ವೆರಿಫೈಡ್​ ಚಂದಾದಾರರಾಗಿ ಎಂಬ ಮಸ್ಕ್ ಕರೆಗೆ ಹಲವಾರು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ತಮ್ಮ ಖಾತೆಯನ್ನು ವೆರಿಫೈ ಮಾಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕಾಯುವಂತಾಗಿದೆ. ಅನೇಕರ ಬಳಕೆದಾರರು ಪ್ರತಿತಿಂಗಳು ಮಿಲಿಯನ್​ಗಟ್ಟಲೆ ಇಂಪ್ರೆಶನ್​ಗಳನ್ನು ಪಡೆಯುತ್ತಿದ್ದರೂ ಆವರಿಗೆ ಟ್ವಿಟರ್ ಯಾವುದೇ ಆದಾಯ ನೀಡುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

“ನಾನು ಟ್ವಿಟರ್ ಬ್ಲೂ ಮತ್ತು ಕನಿಷ್ಠ ಕಳೆದ ಆರು ತಿಂಗಳಿನಿಂದ ತಿಂಗಳಿಗೆ 20-30 ಮಿಲಿಯನ್ ಇಂಪ್ರೆಶನ್‌ಗಳನ್ನು ಹೊಂದಿದ್ದೇನೆ. ಜಾಹೀರಾತು ಹಣವನ್ನು ಪಡೆಯಲು ನಾನು ಏನು ಮಾಡಬೇಕು? ಧನ್ಯವಾದಗಳು,” ಎಂದು ಟ್ವಿಟರ್ ಬಳಕೆದಾರರು ಮಸ್ಕ್‌ಗೆ ಪ್ರತಿಕ್ರಿಯಿಸಿದ್ದಾರೆ. ಉದ್ದೇಶಪೂರ್ವಕ ಪಾವತಿಗಳು ಹೆಚ್ಚು ಸಂಕೀರ್ಣವಾಗಿವೆ. ಆದರೂ ಫೆಬ್ರವರಿಯಿಂದ ಜಾಹೀರಾತು ಆದಾಯದ ಪಾಲನ್ನು ಹಂಚಿಕೊಳ್ಳಲು ಆರಂಭಿಸಲಾಗುವುದು ಎಂದು ಮಸ್ಕ್ ಹೇಳಿದರು.

"ಇತರರು ನಿಮ್ಮ ಪ್ರೊಫೈಲ್ ಪುಟವನ್ನು ವೀಕ್ಷಿಸಿದಾಗ ಕಾಣಿಸಿಕೊಳ್ಳುವ ಜಾಹೀರಾತುಗಳಿಗಾಗಿ ನಿಮಗೆ ಶೀಘ್ರದಲ್ಲೇ ಪಾವತಿಸಲಾಗುವುದು. ಇಂಥ ಪಾವತಿಗಳು ಸುಮಾರು ದ್ವಿಗುಣಗೊಳ್ಳಲಿವೆ ಎಂದು ಮಸ್ಕ್ ಹೇಳಿದ್ದರು. ಟ್ವಿಟರ್​ನ ಜಾಹೀರಾತು ಆದಾಯದಲ್ಲಿ ಶೇಕಡಾ 50 ರಷ್ಟು ಕುಸಿತ ಮತ್ತು ಭಾರೀ ಸಾಲದ ಹೊರೆಯಿಂದಾಗಿ ಕಂಪನಿ ಇನ್ನೂ ನಷ್ಟದಲ್ಲಿ ನಡೆಯುತ್ತಿದೆ ಎಂದು ಮಸ್ಕ್ ಹೇಳಿಕೊಂಡಿದ್ದಾರೆ.

ಟ್ವಿಟರ್ ಇದೊಂದು ಉಚಿತ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಆಗಿದ್ದು, ಬಳಕೆದಾರರು ಟ್ವೀಟ್‌ಗಳೆಂದು ಕರೆಯಲ್ಪಡುವ ಕಿರು ಪೋಸ್ಟ್‌ಗಳನ್ನು ಇದರಲ್ಲಿ ಪೋಸ್ಟ್ ಮಾಡಬಹುದು. ಈ ಟ್ವೀಟ್‌ಗಳು ಪಠ್ಯ, ವೀಡಿಯೊಗಳು, ಫೋಟೋಗಳು ಅಥವಾ ಲಿಂಕ್‌ಗಳನ್ನು ಒಳಗೊಂಡಿರಬಹುದು. ಟ್ವಿಟರ್​ ಅನ್ನು ಬಳಸಲು ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಹಾಗು ಇದಕ್ಕಾಗಿ ಇಂಟರ್ನೆಟ್ ಸಂಪರ್ಕ ಅಥವಾ ಸ್ಮಾರ್ಟ್ ಫೋನ್ ಅಗತ್ಯವಿದೆ. ಯಾವುದೇ ಮಾಹಿತಿಯನ್ನು ತ್ವರಿತವಾಗಿ ಹಂಚಿಕೊಳ್ಳಲು ಟ್ವಿಟರ್ ಅನ್ನು ಬಳಸಲಾಗುತ್ತದೆ. ಏಕೆಂದರೆ ಟ್ವೀಟ್‌ಗಳನ್ನು ನೈಜ ಸಮಯದಲ್ಲಿ ಫಾಲೋವರ್​ಗಳಿಗೆ ತಲುಪಿಸಬಹುದು.

ಇದನ್ನೂ ಓದಿ : ಫಾಸ್ಟ್​ ಚಾರ್ಜಿಂಗ್​ ಸ್ಮಾರ್ಟ್​ಫೋನ್​ ಮಾರಾಟ ಹೆಚ್ಚಳ; ಚೀನಿ ಬ್ರ್ಯಾಂಡ್​ಗಳು ಮುಂಚೂಣಿಯಲ್ಲಿ

ABOUT THE AUTHOR

...view details