ಕರ್ನಾಟಕ

karnataka

ETV Bharat / science-and-technology

ಸೈಬರ್​ ದಾಳಿಯ ಬಗ್ಗೆ ನಿಮಗೆ ಭಯವಿದೆಯೇ? ಹಾಗಾದರೆ​ ವಿಮಾ ಪಾಲಿಸಿ ಬಗ್ಗೆ ತಿಳಿಯಿರಿ - ವೈಯಕ್ತಿಕ ಸೈಬರ್ ವಿಮಾ ಪಾಲಿಸಿ ಎಂದರೇನು

ಅಂತರ್ಜಾಲ ಬದುಕಿನ ಭಾಗವಾಗಿರುವ ಇಂದಿನ ದಿನಮಾನದಲ್ಲಿ ಸೈಬರ್​ ಹ್ಯಾಕರ್ಸ್​ಗಳಿಂದ ಜನರು ಕಷ್ಟಪಟ್ಟು ಸಂಪಾದಿಸಿದ ಹಣ, ಸಾಮಾಜಿಕ ಗೌರವ ಮತ್ತು ಮಾನಸಿಕ ಆರೋಗ್ಯ ರಕ್ಷಿಸುವುದು ದೊಡ್ಡ ಸವಾಲಾಗಿದೆ. ಸೈಬರ್ ವಿಮಾ ಪಾಲಿಸಿಯು ಇವುಗಳಿಗೆ ಭದ್ರತೆ ನೀಡುತ್ತದೆ..

Worried over cyber attack? Know how to insure
ಸೈಬರ್​ ವಿಮಾ ಪಾಲಿಸಿ ಬಗ್ಗೆ ತಿಳಿಯಿರಿ..

By

Published : Jul 6, 2020, 2:42 PM IST

Updated : Feb 16, 2021, 7:51 PM IST

ಹೈದರಾಬಾದ್ :ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಜನರ ಜೀವನದೊಂದಿಗೆ ಆಳವಾಗಿ ಬೇರೂರಿರುವುದರಿಂದ ಸೂಕ್ಷ್ಮ ವೈಯಕ್ತಿಕ ಡೇಟಾ ಸಂರಕ್ಷಣೆ ಮಾಡುವುದು ಒಂದು ಸವಾಲಿನ ಕೆಲಸ. ಜನರು ಶಾಪಿಂಗ್, ಮನರಂಜನೆ, ಹಣಕಾಸಿನ ವಹಿವಾಟುಗಳು, ಡೇಟಾ ಸಂಗ್ರಹಣೆ, ಶಿಕ್ಷಣ ಮತ್ತು ಸಾಮಾಜಿಕ ಸಂವಹನಗಳಿಗಾಗಿ ವಿವಿಧ ಇಂಟರ್ನೆಟ್ ಆಧಾರಿತ ಡಿಜಿಟಲ್ ಪರಿಕರಗಳನ್ನು ಅವಲಂಬಿಸಿರುವಾಗ ಮತ್ತು ಹೊಸದಾಗಿ ಪ್ರಾರಂಭವಾಗಿರುವ ವರ್ಕ್​ ಫ್ರಂ ಹೋಂ ವ್ಯವಸ್ಥೆಯು ಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಸೈಬರ್ ಸುರಕ್ಷತೆಯು ಪ್ರಮುಖ ವಿಷಯವಾಗಿದೆ. ಹೀಗಾಗಿ ಸೈಬರ್ ಭದ್ರತಾ ವಿಮೆ ಅಗತ್ಯವಾಗಿದೆ.

ಕೋವಿಡ್​ ಸಂಬಂಧಿಸಿದ ಯೋಜನೆಗಳ ಮೂಲಕ ಸರ್ಕಾರ ವಿತರಿಸುವ ಪರಿಹಾರ ಹಣದ ನೆಪದಲ್ಲಿ, ಕೆಲ ನಕಲಿ ವೆಬ್​ ಸೈಟ್​ಗಳ ಮೂಲಕ ಸುಮಾರು ಎರಡು ಮಿಲಿಯನ್ ಭಾರತೀಯರ ವಿರುದ್ಧ ದೊಡ್ಡ ಪ್ರಮಾಣದ ಫಿಶಿಂಗ್ ಅಭಿಯಾನವನ್ನು ಸೈಬರ್​ ಹ್ಯಾಕರ್ಸ್​ ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು, ಜೂನ್ 19 ರಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​​ಟಿ-ಇನ್) ಎಚ್ಚರಿಸಿದೆ. ಗಾಲ್ವಾನ್ ವ್ಯಾಲಿ ವಿವಾದ ಆರಂಭವಾದ ಬಳಿಕ ಚೀನಾದಿಂದ ಭಾರತದ ಕಡೆಗೆ ಸೈಬರ್‌ ದಾಳಿಗಳು ಶೇ.200ರಷ್ಟು ಹೆಚ್ಚಿದೆ ಎಂದು ಸೈಬರ್ ಬೆದರಿಕೆ ಗುಪ್ತಚರ ಸಂಸ್ಥೆ ಸೈಫಿರ್ಮಾ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಇಂತಹ ಸಮಯದಲ್ಲಿ ಜನರು ಕಷ್ಟಪಟ್ಟು ಸಂಪಾದಿಸಿದ ಹಣ, ಸಾಮಾಜಿಕ ಗೌರವ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವುದು ದೊಡ್ಡ ಹೊಣೆಗಾರಿಕೆಯಾಗಿದೆ. ಸೈಬರ್ ಭದ್ರತಾ ಹೊದಿಕೆಯು ಈ ಉದ್ದೇಶಗಳನ್ನು ಪೂರೈಸುತ್ತದೆ.

ವೈಯಕ್ತಿಕ ಸೈಬರ್ ವಿಮಾ ಪಾಲಿಸಿ ಎಂದರೇನು? :ಯಾವುದೇ ಸೈಬರ್​ ದಾಳಿಗಳು ನಡೆದ್ರೆ, ಇದರ ಮೂಲಕ ಆರ್ಥಿಕ ನಷ್ಟ ಉಂಟಾದರೆ, ಚೇತರಿಕೆಗೆ ಸಂಬಂಧಿಸಿದ ವೆಚ್ಚಗಳನ್ನು ಸರಿದೂಗಿಸುವ ಮೂಲಕ ಸೈಬರ್ ಅಪಾಯವನ್ನು ಕಡಿಮೆ ಮಾಡಲು ಜನರಿಗೆ ಸಹಾಯ ಮಾಡಲು ವೈಯಕ್ತಿಕ ಸೈಬರ್ ವಿಮಾ ಪಾಲಿಸಿ ವಿನ್ಯಾಸಗೊಳಿಸಲಾಗಿದೆ.

ವೈಯಕ್ತಿಕ ಸೈಬರ್ ವಿಮೆ ಯಾರು ಖರೀದಿಸಬೇಕು? :ಯಾವುದೇ ಡಿಜಿಟಲ್ ಪ್ಲಾಟ್​​ ಫಾರ್ಮ್​ (ಶಾಪಿಂಗ್, ಚಂದಾದಾರರು, ಬಿಲ್ ಪಾವತಿ, ಹಣ ವರ್ಗಾವಣೆ ಇತ್ಯಾದಿ) ಪಾವತಿ ಗೇಟ್‌ವೇಗಳ ಬಳಕೆ, ಕ್ಲೌಡ್​ ಸೇವೆಗಳ ಬಳಕೆ, ಮನೆ-ಸಹಾಯ ಅಥವಾ ಸಂಪರ್ಕಿತ ಸಾಧನಗಳಲ್ಲಿ ಯಾವುದೇ ರೀತಿಯ ಆನ್‌ಲೈನ್ ಪಾವತಿ ವಹಿವಾಟಿನಲ್ಲಿ ತೊಡಗಿರುವ ವ್ಯಕ್ತಿಗಳು ಸೈಬರ್ ವಿಮೆ ಖರೀದಿಸಬಹುದು.​

ವೈಯಕ್ತಿಕ ಸೈಬರ್ ವಿಮಾ ಪಾಲಿಸಿ ಒದಗಿಸುವವರು ಯಾರು?:ವೈಯಕ್ತಿಕ ಸೈಬರ್ ವಿಮೆ ಒದಗಿಸುವ ಭಾರತದ ಮೂರು ಪ್ರಮುಖ ಖಾಸಗಿ ವಿಮಾದಾರರಲ್ಲಿ ಹೆಚ್‌ಡಿಎಫ್‌ಸಿ ಇಆರ್‌ಜಿಒ, ಬಜಾಜ್ ಅಲಯನ್ಸ್​ ಜನರಲ್ ಇನ್ಶೂರೆನ್ಸ್ ಮತ್ತು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಸೇರಿವೆ.

ಸೈಬರ್ ವಿಮಾ ಪಾಲಿಸಿಯಲ್ಲಿ ಏನು ಒಳಗೊಂಡಿದೆ?:ಸೈಬರ್ ವಿಮಾ ಪಾಲಿಸಿ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಗುರುತಿನ ಕಳ್ಳತನ, ಸೈಬರ್-ಬೆದರಿಸುವಿಕೆ, ಸೈಬರ್ ಸುಲಿಗೆ, ಮಾಲ್ವೇರ್ ಒಳನುಗ್ಗುವಿಕೆ, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ಮತ್ತು ಮೊಬೈಲ್ ವ್ಯಾಲೆಟ್‌ಗಳ ಅನಧಿಕೃತ ಮತ್ತು ಮೋಸದ ಬಳಕೆಯಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರಕ್ಷಣೆ ಇರುತ್ತದೆ. ಪಾಲಿಸಿಯು ಯಾವುದೇ ಅಪಾಯದಿಂದ ಉಂಟಾಗುವ ಕಾನೂನು ವೆಚ್ಚಗಳನ್ನು ಸಹ ಒಳಗೊಂಡಿದೆ. ಅಂತರ್ಜಾಲದಿಂದ ಹಾನಿಕಾರಕ ಪ್ರಕಟಣೆ ತೆಗೆದುಹಾಕುವ ಮೂಲಕ ಡಿಜಿಟಲ್ ಗೌರವವನ್ನು ಪುನಃ ಸ್ಥಾಪಿಸಲು ಮಾಡಿದ ಎಲ್ಲ ವೆಚ್ಚಗಳನ್ನು ಸೈಬರ್​ ವಿಮಾ ಪಾಲಿಸಿಯಡಿ ಪಡೆಯಬಹುದು.

ಏನು ಒಳಗೊಂಡಿಲ್ಲ? :ಸೈಬರ್ ವಿಮಾ ಪಾಲಿಸಿಯ ಅಡಿ ಅಪ್ರಾಮಾಣಿಕ ಮತ್ತು ಅನುಚಿತ ನಡವಳಿಕೆ, ದೈಹಿಕ ಗಾಯ/ಆಸ್ತಿ ಹಾನಿ, ಅಪೇಕ್ಷಿಸದ ಸಂವಹನ, ಅನಧಿಕೃತ ದತ್ತಾಂಶ ಸಂಗ್ರಹ, ಅನೈತಿಕ/ಅಶ್ಲೀಲ ಸೇವೆಗಳು. ಪಾಲಿಸಿ ಪ್ರಾರಂಭಿಸುವ ಮೊದಲು ಇದ್ದ ಸಂಗತಿಗಳು ಅಥವಾ ಆಗಿರುವ ನಷ್ಟ ಅಥವಾ ಯಾವುದೇ ಸರ್ಕಾರದ ಆದೇಶದಿಂದ ಉಂಟಾದ ನಷ್ಟ ಇದರಲ್ಲಿ ಒಳಗೊಂಡಿರುವುದಿಲ್ಲ.

ವೈಯಕ್ತಿಕ ಸೈಬರ್ ವಿಮೆಯ ಬೆಲೆ ಏನು?:ವೈಯಕ್ತಿಕ ಸೈಬರ್ ವಿಮೆಯ ಪ್ರೀಮಿಯಂ ದರಗಳು 1 ಲಕ್ಷ ರೂ.ಗೆ ಸುಮಾರು 600 ರೂ. ನಿಂದ ಪ್ರಾರಂಭವಾಗುತ್ತದೆ. ಹೆಚ್‌ಡಿಎಫ್‌ಸಿ ಇಆರ್‌ಜಿಒ ಇ@ ಸೆಕ್ಯೂರ್ ವರ್ಷಕ್ಕೆ 1,500 ರೂ.ಗಳಿಂದ ಪ್ರಾರಂಭವಾಗುವ ಪ್ರೀಮಿಯಂಗಳಿಗೆ 50 ಸಾವಿರದಿಂದ 1 ಕೋಟಿ ರೂ.ವರೆಗೆ ವಿಮೆ ನೀಡುತ್ತದೆ. ಸೈಬರ್ ಸೇಫ್ ಬೈ ಬಜಾಜ್ ಅಲಯನ್ಸ್​​ ಜನರಲ್ ಇನ್ಶೂರೆನ್ಸ್‌ ವರ್ಷಕ್ಕೆ 700 ರೂ.ಗಳಿಂದ ಸುಮಾರು 9 ಸಾವಿರ ರೂ.ವರೆಗೆ ಪ್ರೀಮಿಯಂಗಳನ್ನು ಒಳಗೊಂಡಿದೆ. 1 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೂ ವಿಮೆ ನೀಡುತ್ತದೆ. ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್‌ನ ಚಿಲ್ಲರೆ ಸೈಬರ್ ಹೊಣೆಗಾರಿಕೆ ವಿಮಾ ಪಾಲಿಸಿಯು 50 ಸಾವಿರ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ವಿಮೆ ನೀಡುತ್ತದೆ. ಇದರ ಪ್ರೀಮಿಯಂ ಮೊತ್ತ ದಿನಕ್ಕೆ 6.5 ರಿಂದ 65 ರೂ.

ಪಾಲಿಸಿ ಖರೀದಿಸುವಾಗ ನೆನಪಿಡಬೇಕಾದ ಅಂಶಳೇನು? :ವೈಯಕ್ತಿಯ ಅಗತ್ಯತೆಗಳು ಪಾಲಿಸಿ ವ್ಯಾಪ್ತಿಗೆ ಹೊಂದಿಕೆಯಾಗಬೇಕು ಮತ್ತು ಪಾಲಿಸಿಯಿಂದ ತಮ್ಮ ಅಗತ್ಯಗಳನ್ನು ಪೂರೈಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ವಿಮಾ ಪಾಲಿಸಿಯಲ್ಲಿ ಒಳಗೊಳ್ಳುವ ಮತ್ತು ಒಳಗೊಳ್ಳದ ಅಂಶಗಳನ್ನು ಸ್ಪಷ್ಟವಾಗಿ ಪರಿಶೀಲಿಸಬೇಕು. ಫ್ಯಾಮಿಲಿ ಫ್ಲೋಟರ್ ಆಯ್ಕೆಗಳನ್ನು ಪರಿಶೀಲಿಸಬೇಕು. ಇದರಲ್ಲಿ ವಿಮೆ ಮಾಡುವ ವ್ಯಕ್ತಿಯ ಪತ್ನಿ ಮತ್ತು ಮಕ್ಕಳು ಯಾವುದೇ ವಯಸ್ಸಿನ ಮಿತಿಯಲ್ಲದೆ ಒಳಗೊಳ್ಳುತ್ತಾರೆ.

ಹೇಗೆ ಖರೀದಿಸುವುದು? :ಹೆಚ್ಚಿನ ವಿಮೆಗಳು ವಿಮಾದಾರರ ಅಧಿಕೃತ ವೆಬ್​ಸೈಟ್​ಗಳ ಮೂಲಕ ಖರೀದಿಸಬಹುದು. ಪಾಲಿಸಿ ಪ್ರಸ್ತಾವನೆಯನ್ನು ತುಂಬಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗ್ಗತ್ತಿಸಿ ನೋಂದಾಯಿತ ಇ-ಮೈಲ್ ಐಡಿ ಮೂಲಕ ಕಳಿಸಬಹುದು. ಇದಲ್ಲದಿದ್ದರೆ, ನೇರವಾಗಿ ವಿಮಾ ಕಂಪನಿಗೆ ಭೇಟಿ ನೀಡಿ ವಿಮೆ ಮಾಡಿಸಬಹುದು.

Last Updated : Feb 16, 2021, 7:51 PM IST

ABOUT THE AUTHOR

...view details