ನವದೆಹಲಿ: ಟೆಲಿಕಾಮ್ ಸೇವಾ ಸಂಸ್ಥೆ ವೊಡಾಪೋನ್ ಕೊನೆಗೂ ಭಾರತದಲ್ಲಿ ಆ್ಯಪಲ್ ವಾಚ್‌ಗೆ ಇಸಿಮ್ (ಜಿಪಿಎಸ್ + ಸೆಲ್ಯೂಲರ್) ಸೇವೆಯನ್ನು ಆರಂಭಿಸಿದೆ. ಈವರೆಗೆ ಏರ್‌ಟೆಲ್ ಮತ್ತು ರಿಲಯನ್ಸ್‌ನ ಜಿಯೋ ನೆಟ್‌ವರ್ಕ್‌ಗಳು ಮಾತ್ರ ಇಸಿಮ್ ಸೌಲಭ್ಯವನ್ನು ದೇಶದ ಗ್ರಾಹಕರಿಗೆ ನೀಡುತ್ತಿದ್ದವು.
ETV Bharat / science-and-technology
ಆ್ಯಪಲ್ ವಾಚ್ ಹೊಂದಿರುವ ಗ್ರಾಹಕರಿಗೆ eಸಿಮ್ ಸೌಲಭ್ಯ ಕೊಟ್ಟ ವೊಡಾಫೋನ್ - ಇಸಿಮ್
ಇದೇ ಮೊದಲ ಬಾರಿ ವೊಡಾವೋನ್ ಸಂಸ್ಥೆ ಆ್ಯಪಲ್ ವಾಚ್ ಹೊಂದಿರುವ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಜಿಪಿಎಸ್ ಮತ್ತು ಸೆಲ್ಯೂಲರ್ ಸೇವೆಯನ್ನು ನೀಡಿದೆ. ಇದರಿಂದ ತಮ್ಮ ಬಳಿಕ ಮೊಬೈಲ್ ಇಲ್ಲದಿದ್ದರೂ ವಾಚ್ ಮೂಲಕವೇ ಕರೆಗಳನ್ನು ಸ್ವೀಕರಿಸುವ ಮತ್ತು ಡಾಟಾ ಬಳಸಿಕೊಳ್ಳಬಹುದಾಗಿದೆ.
![ಆ್ಯಪಲ್ ವಾಚ್ ಹೊಂದಿರುವ ಗ್ರಾಹಕರಿಗೆ eಸಿಮ್ ಸೌಲಭ್ಯ ಕೊಟ್ಟ ವೊಡಾಫೋನ್ vodafone-users-can-now-enjoy-apple-watch-cellular-in-india](https://etvbharatimages.akamaized.net/etvbharat/prod-images/768-512-7599301-thumbnail-3x2-vodafone.jpg)
ಈ ಸೇವೆಯಿಂದ ಗ್ರಾಹಕರು ವೊಡಾಪೋನ್ ಪೋಸ್ಟ್ ಪೇಯ್ಡ್ ಸೇವೆಗಳನ್ನು ಮೊಬೈಲ್ ಮೂಲಕ ಆ್ಯಪಲ್ ವ್ಯಾಚ್‌ನಲ್ಲೂ ಹಂಚಿಕೊಳ್ಳಬಹುದಾಗಿದೆ. ಅಂದರೆ ಕರೆಗಳನ್ನು ಸ್ವೀಕರಿಸುವುದು ಮತ್ತು ವೊಡಾಫೋನ್ ಡಾಟಾ ಬಳಸಿಕೊಳ್ಳಬಹುದಾಗಿದೆ. ಗ್ರಾಹಕ ಮೊಬೈಲ್‌ನಿಂದ ದೂರ ಇದ್ದರೂ ಇದೀಗ ಈ ಸೇವೆಯನ್ನು ವಾಚ್ ಮೂಲಕ ಬಳಸಿಕೊಳ್ಳಬಹುದು ಎಂದು ವೊಡಾಫೋನ್ ಸಂಸ್ಥೆ ತಿಳಿಸಿದೆ.
ಆಯ್ದ ರಾಜ್ಯ ಮತ್ತು ನಗರಗಳಿಗೆ ಮಾತ್ರ ಈ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಮುಂಬೈ, ದೆಹಲಿ, ಗುಜರಾತ್‌ನಲ್ಲಿ ಈ ಸೇವೆ ಲಭ್ಯವಾಗಲಿದೆ. ಕೇವಲ ಪೋಸ್ಟ್ ಪೇಯ್ಡ್ ಗ್ರಾಹಕರು ಮಾತ್ರ ಈ ಅನುಕೂಲವನ್ನು ಪಡೆಯಲಿದ್ದು, ಆ್ಯಪಲ್ ವಾಚ್ ಸೀರಿಸ್-3 ಅಥವಾ ಇದಕ್ಕೂ ಮೊದಲ ಮಾರುಕಟ್ಟೆಗೆ ಬಂದಿರುವ ವಾಚ್ ಒಎಸ್ 6.2 ಸೀರಿಸ್ ಮಾತ್ರ ಇಸಿಮ್ ಆ್ಯಕ್ಟೀವೇಷನ್ ಸಾಮರ್ಥ್ಯ ಹೊಂದಿದೆ ಎಂದು ವೊಡಾಫೋನ್ ಸಂಸ್ಥೆ ಸ್ಪಷ್ಟಪಡಿಸಿದೆ.