ಕರ್ನಾಟಕ

karnataka

ETV Bharat / science-and-technology

ದಶಕದ ಯೋಜನೆ ರೂಪಿಸಿದ ಇಸ್ರೋ.. ಪ್ರಗತಿ ಸಾಧಿಸುವ ವಿಶ್ವಾಸದಲ್ಲಿ ಕೆ. ಶಿವನ್ - ಇಸ್ರೋ ಅಧ್ಯಕ್ಷ ಕೆ ಶಿವನ್

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಇಸ್ರೋ ಅಧ್ಯಕ್ಷ ಕೆ. ಶಿವನ್, ಇಸ್ರೋದ ಎಲ್ಲ ಕೇಂದ್ರಗಳು / ಘಟಕಗಳು ಈ ದಶಕದ ಯೋಜನೆಯನ್ನು ರೂಪಿಸುವಲ್ಲಿ ಸಕ್ರಿಯವಾಗಿ ತಮ್ಮ ಪಾತ್ರ ವಹಿಸಿ ಕೊಡುಗೆ ನೀಡಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಪ್ರಗತಿ ಸಾಧಿಸಲಿದ್ದೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

Reusable rockets, satellite constellation for broadband in ISRO's 10-year plan
ದಶಕದ ಯೋಜನೆಯ ರೂಪಿಸಿದ ಇಸ್ರೋ....ಪ್ರಗತಿ ಸಾಧಿಸುವ ವಿಶ್ವಾಸದಲ್ಲಿ ಕೆ. ಶಿವನ್

By

Published : Jan 2, 2021, 8:59 AM IST

Updated : Feb 16, 2021, 7:53 PM IST

ಚೆನ್ನೈ: 2021ಕ್ಕೆ ಕಾಲಿಟ್ಟಿದ್ದು, ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ದಶಕದ ಯೋಜನೆಯನ್ನು ರೂಪಿಸಿದೆ.

ಈ ಯೋಜನೆಯಲ್ಲಿ ಹೆವಿ ಲಿಫ್ಟ್ ರಾಕೆಟ್​​ ಅಭಿವೃದ್ಧಿ, ಮರು ಬಳಕೆ ಮಾಡಬಹುದಾದ ಉಪಗ್ರಹ ಉಡಾವಣಾ ವಾಹನ, ಸೆಮಿ ಕ್ರೈಯೋಜೆನಿಕ್ ಎಂಜಿನ್ ಸೇರಿದಂತೆ ಇತರ ಅಭಿವೃದ್ಧಿ ಯೋಜನೆಗಳು ಸೇರಿವೆ ಎಂದು ಇಸ್ರೋ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಚೀನಾದಲ್ಲಿ ವಿಶಿಷ್ಟ ಸಂಗೀತ ಕಾರ್ಯಕ್ರಮದ ಮೂಲಕ ಹೊಸ ವರ್ಷಾಚರಣೆ.. ವಿಡಿಯೋ

ಗಗನಯಾನ ಕಾರ್ಯಕ್ರಮದಡಿ ಮಾನವರಹಿತ ವಿಮಾನ ಹಾರಾಟ ಯೋಜನೆ ಈ ವರ್ಷ ಸಾಧಿಸಬೇಕಾದ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದು ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಕೆ. ಶಿವನ್ ಹೇಳಿದ್ದಾರೆ. ಜೊತೆಗೆ ಕೆ. ಶಿವನ್ ಅವರ ಹೊಸ ವರ್ಷದ ಸಂದೇಶದಲ್ಲಿ, ಇಸ್ರೋದ ಎಲ್ಲಾ ಕೇಂದ್ರಗಳು / ಘಟಕಗಳು ಈ ದಶಕದ ಯೋಜನೆಯನ್ನು ರೂಪಿಸುವಲ್ಲಿ ಸಕ್ರಿಯವಾಗಿ ತಮ್ಮ ಪಾತ್ರ ವಹಿಸಿ ಕೊಡುಗೆ ನೀಡಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಪ್ರಗತಿ ಸಾಧಿಸಲಿದ್ದೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Feb 16, 2021, 7:53 PM IST

ABOUT THE AUTHOR

...view details