ಕರ್ನಾಟಕ

karnataka

ETV Bharat / science-and-technology

ಗೂಗಲ್‌ನ ಬಹು ನಿರೀಕ್ಷಿತ ಪಿಕ್ಸೆಲ್‌ 6ಎ ಫೋನ್‌, ವಾಚ್‌ಗಳ ಬಿಡುಗಡೆ ದಿನಾಂಕ ಮುಂದೂಡಿಕೆ ಸಾಧ್ಯತೆ - ಪಿಕ್ಸಲ್‌ 6ಎ ಮೊಬಲ್‌ ಫೋನ್‌

ಗೂಗಲ್ ತನ್ನ ಭಾರಿ ನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 6 ಎ ಮತ್ತು ಪಿಕ್ಸೆಲ್ ವಾಚ್ ಬಿಡುಗಡೆಯ ದಿನಾಂಕವನ್ನು ಜುಲೈಗೆ ಮುಂದೂಡುವ ಸಾಧ್ಯತೆ ಇದೆ ಎಂದು ಆಂಡ್ರಾಯ್ಡ್ ಸೆಂಟ್ರಲ್ ವರದಿ ಮಾಡಿದೆ.

Google Pixel 6a, Watch could launch later than expected
ಗೂಗಲ್‌ನ ಬಹು ನಿರೀಕ್ಷಿತ ಪಿಕ್ಸೆಲ್‌ 6ಎ, ವಾಚ್‌ಗಳ ಬಿಡುಗಡೆ ದಿನಾಂಕ ಮುಂದೂಡಿಕೆ

By

Published : Mar 7, 2022, 11:20 AM IST

ಸ್ಯಾನ್ ಫ್ರಾನ್ಸಿಸ್ಕೋ: ಟೆಕ್ ದೈತ್ಯ ಸಂಸ್ಥೆ ಗೂಗಲ್ ತನ್ನ ಭಾರಿ ನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 6 ಎ ಮತ್ತು ಪಿಕ್ಸೆಲ್ ವಾಚ್ ಬಿಡುಗಡೆಯನ್ನು ಅಮೆರಿಕದಲ್ಲಿ ಜುಲೈ ಅಂತ್ಯದವರೆಗೆ ಮುಂದೂಡಬಹುದು ಎನ್ನಲಾಗಿದೆ.

ಗೂಗಲ್‌ ಪಿಕ್ಸೆಲ್‌ 6 ಫೋನ್‌ ಹಾಗೂ ಪಿಕ್ಸೆಲ್‌ ವಾಚ್‌ಗಳ ಬಿಡಿ ಭಾಗಗಳ ದಾಸ್ತನು ಕೊರತೆ ಇದೆ ಎಂದು ಹೇಳಲಾಗುತ್ತಿರುವುದರಿಂದ ಗೂಗಲ್‌ ಈ ನಿರ್ಧಾರ ಕೈಗೊಂಡಿದೆ ಎಂದು ಆಂಡ್ರಾಯ್ಡ್ ಸೆಂಟ್ರಲ್ ವರದಿ ಮಾಡಿದೆ.

ಹೀಗಾಗಿಯೇ ಅತ್ಯುತ್ತಮ ಬಜೆಟ್‌ನ ಆಂಡ್ರಾಯ್ಡ್ ಫೋನ್‌ಗಳನ್ನು ಗೂಗಲ್‌ ಜುಲೈಗೆ ಮುಂದೂಡಿದೆ ಎಂದು ಹೇಳಿದೆ. 2022ರ ಮೇ 26ಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಈ ಮೊದಲು ಹೇಳಿತ್ತು. ಈ ಉತ್ಪನ್ನಗಳ ವಿಳಂಬದ ಹಿಂದೆ ಜಾಗತಿಕ ಚಿಪ್ ಕೊರತೆಯೂ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:2021ರಲ್ಲಿ ಭಾರತದ ಟಿವಿ ಮಾರುಕಟ್ಟೆ ದಾಖಲೆಯ ಏರಿಕೆ.. ಸ್ಮಾರ್ಟ್ ಟಿವಿಗಳದ್ದೇ ಮೇಲುಗೈ

ABOUT THE AUTHOR

...view details