ದಿನಕ್ಕೊಂದು ನೂತನ ತಂತ್ರಜ್ಞಾನ ನಮಗೆ ಲಭ್ಯವಾಗುತ್ತಿದೆ. ಕೇವಲ ಒಂದು ಸೆಕೆಂಡ್ನಲ್ಲಿ ಕೆಲಸ ಮಗಿಯುವಷ್ಟರ ಮಟ್ಟಿಗೆ ವೇಗವಾಗಿ ಬೆಳೆಯುತ್ತಿದೆ. ದಿನಗಳು ಕಳೆದಂತೆ ಅದು ಮತ್ತಷ್ಟು ವೇಗ ಪಡೆಯುತ್ತಿದೆ. ಹೊಸತನ, ವಿಶೇಷಗಳೊಂದಿಗೆ ನಮ್ಮನ್ನು ಸೇರುತ್ತಿವೆ.
ಜೀ-ಮೇಲ್, ಗೂಗಲ್ ಡ್ರೈವ್, ಗೂಗಲ್ ಫಿಟ್, ಕ್ಯಾಲೆಂಡರ್, ಕ್ರೋಮ್ ಅದೇ ರೀತಿ ಬಳಕೆದಾರರಿಗೆ ಹೊಸತನ್ನು ಪ್ರದರ್ಶಿಸಲು ಮುಂದಾಗಿವೆ. ಅಂದಹಾಗೆ ಇವೆಲ್ಲವೂ ಐಫೋನ್ ಬಳಕೆದಾರರಿಗೆ ಮಾತ್ರ. ಮುಂದಿನ ಕೆಲವು ದಿನಗಳಲ್ಲಿ ಇತರೆ ಬಳಕೆದಾರರಿಗೂ ಬಿಡಗಡೆ ಮಾಡಲಾಗುತ್ತದೆ.
ಜಿ-ಮೇಲ್:ಇದು ಅಪ್ಡೇಟ್ ಮಾಡಿರುವಂತಹ ಅಂಶ ಏನೆಂದರೆ ಇನ್ಬಾಕ್ಸ್ ಸರ್ಚ್. ಈ ಮೊದಲು ಇಲ್ಲದ ನೂತನ ಅಂಶವನ್ನು ಪರಿಚಯಿಸಲಿದೆ. ಜಿ-ಮೇಲ್ನಲ್ಲಿ ಎಂದೋ ಓದದೇ ಬಿಟ್ಟಿರುವ ಮತ್ತು ಓದಿರುವ ಮೇಲ್ಗಳನ್ನು ಸರ್ಚ್ ಮಾಡಬಹುದು. ಇದಕ್ಕೂ ಮೊದಲು ಆಯಾ ವಿಭಾಗಗಳಿಗೆ ತೆರಳಿ ವೀಕ್ಷಿಸಬೇಕಾಗಿತ್ತು.
ಗೂಗಲ್ ಡ್ರೈವ್: ಹೊಸ ಡ್ರೈವ್ ವಿಜೆಟ್ನೊಂದಿಗೆ ನೀವು ಫೈಲ್‌ಗಳ ಪ್ರವೇಶ ಪಡೆಯಬಹುದು. ನಿಮಗೆ ಬೇಕಾದಷ್ಟು. ಅಷ್ಟೆ ಅಲ್ಲ, ಗೂಗಲ್ ಡ್ರೈವ್ ಅನ್ನು ಹೋಮ್ ಸ್ಕ್ರೀನ್ಗೂ ಬಳಸಿಕೊಳ್ಳುವ ಅಂಶ ಅಪ್ಡೇಟ್ ಆಗಿದೆ. ಈ ಮೂಲಕ ನೀವು ಯಾವುದೇ ಫೈಲ್ ಅನ್ನು ಹೋಮ್ ಸ್ಕ್ರೀನ್ ಮೂಲಕ ಸುಲಭವಾಗಿ ಹುಡುಕಬಹುದು.
ಗೂಗಲ್ ಫಿಟ್: ಇದು ನಿಮ್ಮ ಹೃದಯದ ಬಡಿತ ಪಾಯಿಂಟ್ಸ್ಗಳನ್ನು ನೋಡಲು ಸಹಾಯ ಮಾಡುತ್ತದೆ.
ಕ್ಯಾಲೆಂಡರ್ ವಿಜೆಟ್:ನಿಮ್ಮ ಮುಂದಿನ ಕಾರ್ಯಕ್ರಮಗಳ ಕುರಿತು ಸೇವ್ ಮಾಡಿಟ್ಟುಕೊಂಡು ಅವುಗಳನ್ನು ಹೋಮ್ ಸ್ಕ್ರೀನ್ಗೆ ಅಳವಡಿಸಿಕೊಳ್ಳಬಹುದು. ನಾವು ಸೇವ್ ಮಾಡಿಟ್ಟಿರುವ ಕಾರ್ಯಕ್ರಮವನ್ನು ಆಯಾ ದಿನ ನೆನಪಿಸುಲ್ಲಿ ಸಹಾಯ ಮಾಡುತ್ತದೆ. ನೆಟ್ವರ್ಕ್ ಸಮಸ್ಯೆ ಕಂಡು ಬಂದರೂ ಕ್ಯಾಲೆಂಡರ್ ತ್ವರಿತವಾಗಿ ಓಪನ್ ಆಗಲಿದೆ.
ಕ್ರೋಮ್ ಹೊಸ ವಿಜೆಟ್:ಹೊಸ ಟ್ಯಾಬ್, ಧ್ವನಿ ಹುಡುಕಾಟ ಮತ್ತಷ್ಟು ವೇಗ ಪಡೆದುಕೊಂಡಿವೆ. ಟೈಪ್ ಮಾಡುವ ಮೂಲಕ ಏನಾದರೂ ಸರ್ಚ್ ಮಾಡುವ ಬದಲಿಗೆ ವಾಯ್ಸ್ ಮೂಲಕ ಸರ್ಚ್ ಮಾಡಬಹುದು. ಅದೂ ಕೂಡ ಮತ್ತಷ್ಟು ವಿಭಿನ್ನವಾಗಿ ಅಪ್ಡೇಟ್ ಮಾಡಲಾಗುತ್ತಿದೆ. ಮತ್ತು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಅನ್ನು ಹೊಸದಾಗಿ ಸೇರಿಸಲಾಗುತ್ತಿದೆ. ಈ ಮೂಲಕ ಸರ್ಚ್ಗೆ ಮತ್ತಷ್ಟು ವೇಗ ಸಿಗಲಿದೆ.