ನವದೆಹಲಿ: ಏಸಸ್ ಈ ವರ್ಷ ತನ್ನ ಹೊಸ ಝೆನ್ಬೀಮ್ ಲ್ಯಾಟ್ ಹೊರತರುವುದಾಗಿ ಘೋಷಿಸಿದೆ. ಈ ಸಾಧನವು ಮೊಬೈಲ್ ಮೂವಿ ಪ್ರೊಜೆಕ್ಟರ್ ಆಗಿದ್ದು ಮಿನಿ-ರೋಬೋಟ್‌ನಂತೆ ವಿನ್ಯಾಸ ಹೊಂದಿದೆ.
ETV Bharat / science-and-technology
ಏಸಸ್ ಹೊರತರಲಿದೆ ಹೊಸ ಝೆನ್ಬೀಮ್ ಲ್ಯಾಟ್ ಮೊಬೈಲ್ ಮೂವಿ ಪ್ರೊಜೆಕ್ಟರ್ - movie projector by asus
ಏಸಸ್ ತನ್ನ ಹೊಸ ಝೆನ್ಬೀಮ್ ಲ್ಯಾಟ್ ಮೊಬೈಲ್ ಮೂವಿ ಪ್ರೊಜೆಕ್ಟರ್ ಹೊರತರುವುದಾಗಿ ಘೋಷಿಸಿದ್ದು, ಇದೇ ವರ್ಷ ಮಾರುಕಟ್ಟೆಗೆ ಬರಲಿದೆ.
asus
ಝೆನ್ಬೀಮ್ ಲ್ಯಾಟ್ 300 ಲ್ಯುಮೆನ್‌ಗಳವರೆಗೆ ಎಲ್ಇಡಿ ಬೆಳಕನ್ನು ಹೊರಹಾಕಲಿದ್ದು, 720p ಚಿತ್ರಣ ತೋರಿಸಲಿದೆ. 10W ಹರ್ಮನ್ ಕಾರ್ಡನ್-ಟ್ಯೂನ್ಡ್ ಸ್ಪೀಕರ್ ವ್ಯವಸ್ಥೆಯನ್ನು ಇದು ಹೊಂದಿದ್ದು, ಕಾಫಿ ಕಪ್ನಂತೆ ಕಾಣುತ್ತದೆ ಎಂದು ಏಸಸ್ ಹೇಳಿದೆ.
ಇದು 6,000mAh ಬ್ಯಾಟರಿ ಹೊಂದಿದ್ದು, ಯೋಗ್ಯ ಗಾತ್ರದ ಪರದೆಗೆ ಸರಿ ಹೊಂದುವಂತೆ ಸಾಕಷ್ಟು ಪ್ರಕಾಶಮಾನವಾಗಿರುತ್ತದೆ. 2021ರಲ್ಲೇ ಇದು ಮಾರುಕಟ್ಟೆಗೆ ಬರಲಿದ್ದು, ಬೆಲೆ ಎಷ್ಟಿರಬಹುದೆಂದು ತಿಳಿಸಿಲ್ಲ
Last Updated : Feb 16, 2021, 7:53 PM IST