ಕರ್ನಾಟಕ

karnataka

ETV Bharat / science-and-technology

ಅಮೆರಿಕದ ಚಂದ್ರಯಾನ ನೌಕೆಯಲ್ಲಿ ಇಂಧನ ಸೋರಿಕೆ: ಫೆಬ್ರವರಿ 23 ರ ಲ್ಯಾಂಡಿಂಗ್ ಅನುಮಾನ - Astrobotic Technology

ಅಮೆರಿಕದ ಖಾಸಗಿ ಕಂಪನಿಯು ಚಂದ್ರನ ಮೇಲೆ ಇಳಿಸಲು ಉದ್ದೇಶಿಸಿ ಉಡಾಯಿಸಿದ್ದ ನೌಕೆಯು ಇಂಧನ ಸೋರಿಕೆಯಿಂದಾಗಿ ವೈಫಲ್ಯ ಕಾಣುವ ಸಾಧ್ಯತೆ ಇದೆ.

ಅಮೆರಿಕದ ಚಂದ್ರಯಾನ ನೌಕೆ
ಅಮೆರಿಕದ ಚಂದ್ರಯಾನ ನೌಕೆ

By ETV Bharat Karnataka Team

Published : Jan 10, 2024, 12:45 PM IST

ನ್ಯೂಯಾರ್ಕ್ :ಅಮೆರಿಕ ಮೂಲದ ಖಾಸಗಿ ಕಂಪನಿ ಆಸ್ಟ್ರೋಬೋಟಿಕ್ ಟೆಕ್ನಾಲಜಿ ಚಂದ್ರನ ಅಧ್ಯಯನಕ್ಕಾಗಿ ತಯಾರಿಸಿ ಉಡಾಯಿಸಲಾದ ಪೆರೆಗ್ರಿನ್ ಲೂನಾರ್ ಬಾಹ್ಯಾಕಾಶ ನೌಕೆ ಇಂಧನ ಸೋರಿಕೆಯಿಂದಾಗಿ ಲ್ಯಾಂಡ್​ ಆಗುವ ಸಾಧ್ಯತೆಯೇ ಕ್ಷೀಣಿಸಿದೆ.

ಜನವರಿ 8 ರಂದು ಪೆರೆಗ್ರಿನ್ ಲೂನಾರ್ ಲ್ಯಾಂಡರ್ ಯುನೈಟೆಡ್ ಲಾಂಚ್ ಅಲೈಯನ್ಸ್​ನ ಹೊಚ್ಚ ಹೊಸ ರಾಕೆಟ್ ವಲ್ಕನ್ ಸೆಂಟೌರ್​ ಮೂಲಕ ನಸುಕಿನ ಜಾವ 2:18 ಕ್ಕೆ (7:18 ಜಿಎಂಟಿ) ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ ಉಡಾವಣೆ ಮಾಡಲಾಗಿದೆ. ಇದಾದ ಕೆಲ ಹೊತ್ತಿನಲ್ಲಿ ನೌಕೆಯಲ್ಲಿನ ಇಂಧನ ಸೋರಿಕೆಯಾಗಿದೆ. ಇದರಿಂದ ನೌಕೆಯು ಹಿಡಿತ ಕಳೆದುಕೊಂಡಿದೆ.

ಇಂಧನ ಟ್ಯಾಂಕರ್​ ಒಡೆದಿರುವ ಸಾಧ್ಯತೆ ಇದೆ. ನೌಕೆಯಲ್ಲಿನ ಸೌರ ಫಲಕವು ಸೂರ್ಯನಿಂದ ಸೌರ ಶಕ್ತಿಯನ್ನು ಉತ್ಪಾದಿಸಲು ಕೂಡ ಸಾಧ್ಯವಾಗುತ್ತಿಲ್ಲ. ಫ್ಲೈಟ್ ಕಂಟ್ರೋಲರ್‌ಗಳು ಸಂಪರ್ಕ ಕಳೆದುಕೊಂಡಿವೆ. ನೌಕೆ ಲ್ಯಾಂಡ್​ ಆಗುವ ಅವಕಾಶವಿಲ್ಲ ಎಂದು ಆಸ್ಟ್ರೋಬಾಟಿಕ್ ತಿಳಿಸಿದೆ.

ಹೀಲಿಯಂನ ಹೆಚ್ಚಿನ ಒತ್ತಡದಿಂದಾಗಿ ಇಂಧನ ಟ್ಯಾಂಕ್​ ಒಡೆದಿರಬಹುದು. ಇದರಿಂದಾಗಿ ಹಾರಾಟದ ಕೆಲವೇ ಗಂಟೆಗಳಲ್ಲಿ ಅದು ನಿಯಂತ್ರಣ ಕಳೆದುಕೊಂಡಿದೆ. ಇದರ ನಿಖರ ಕಾರಣವನ್ನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ನೌಕೆಯನ್ನು ಉಡಾವಣೆ ಮಾಡಲು ಬಳಸಲಾದ ವಲ್ಕನ್ ಸೆಂಟೌರ್ ರಾಕೆಟ್​ನಲ್ಲಿ ಯಾವುದೇ ದೋಷವಿಲ್ಲ ಎಂದು ಕಂಪನಿ ಹೇಳಿದೆ. ಚಂದ್ರನ ಮೇಲೆ ತನ್ನ ಪ್ರಯೋಗಗಳನ್ನು ನಡೆಸಲು ನಾಸಾ ಜೊತೆಗೂಡಿ ತಯಾರಿಸಿದ ಈ ನೌಕೆಗೆ ಆಸ್ಟ್ರೋಬೋಟಿಕ್ 108 ಮಿಲಿಯನ್ ಡಾಲರ್​ ವೆಚ್ಚ ಮಾಡಿದೆ.

ವೈಫಲ್ಯದತ್ತ ಮೊದಲ ಖಾಸಗಿ ನೌಕೆ:ಚಂದ್ರನತ್ತ ಸಾಗುವ ಮಾರ್ಗಮಧ್ಯೆ ಇಂಧನ ನಷ್ಟಕ್ಕೀಡಾಗಿ, ಲ್ಯಾಂಡ್​ ಆಗುವ ಅನುಮಾನದಲ್ಲಿರುವ ಪೆರೆಗ್ರಿನ್ ಲೂನಾರ್ ಲ್ಯಾಂಡರ್ ಚಂದಮಾಮನ ಅಧ್ಯಯನಕ್ಕೆ ಹಾರಿಬಿಡಲಾದ ಮೊದಲ ಖಾಸಗಿ ನೌಕೆಯಾಗಿದೆ. 1972 ರಲ್ಲಿ ಅಪೊಲೊ 17 ರ ನಂತರ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಚಂದ್ರಯಾನದ ಯಾವುದೇ ಯೋಜನೆಗಳನ್ನು ಕೈಗೊಂಡಿಲ್ಲ. 50 ವರ್ಷಗಳ ಬಳಿಕ ಮೊದಲ ಬಾರಿಗೆ ಕೈಗೊಂಡ ಯಾನವೇ ವೈಫಲ್ಯ ಕಾಣುವ ಸಾಧ್ಯತೆ ಹೆಚ್ಚಿದೆ. ಫೆಬ್ರವರಿ 23 ರಂದು ಲ್ಯಾಂಡರ್​ ಅನ್ನು ಚಂದ್ರನ ಮೇಲೆ ಇಳಿಸುವ ಯೋಜನೆ ಇತ್ತು.

ಬಾಹ್ಯಾಕಾಶದಲ್ಲಿ ಪೆರೆಗ್ರಿನ್ ಸೆರೆಹಿಡಿದ ಮೊದಲ ಚಿತ್ರದಲ್ಲಿಯೇ ನೌಕೆಯಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ಪೇಲೋಡ್ ಡೆಕ್ ಮೇಲೆ ಅಳವಡಿಸಲಾದ ಕ್ಯಾಮೆರಾದಿಂದ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಮುಂಭಾಗದಲ್ಲಿ ಮಲ್ಟಿ-ಲೇಯರ್ ಇನ್ಸುಲೇಷನ್ (ಎಂಎಲ್ಐ) ಅನ್ನು ಇದು ತೋರಿಸುತ್ತದೆ.

ಇದನ್ನೂ ಓದಿ:ಲ್ಯಾಂಡರ್​ನಲ್ಲಿ ಇಂಧನ ನಷ್ಟ: ಅಮೆರಿಕದ ಚಂದ್ರಯಾನ ಯೋಜನೆಗೆ ಹಿನ್ನಡೆ

ABOUT THE AUTHOR

...view details