ನವದೆಹಲಿ: ಈ ವರ್ಷದ ಮೊದಲ ಸೂರ್ಯಗ್ರಹಣ 2021 ಜೂನ್ 10 ರಂದು ಸಂಭವಿಸಲಿದೆ. ಇದರ ಪ್ರಭಾವವು ಉತ್ತರ ದಿಕ್ಕಿನಲ್ಲಿ ಹೆಚ್ಚು ಕಂಡು ಬರಲಿದ್ದು, ಭಾರತದಲ್ಲಿ ಅರುಣಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ಕೆಲವು ಭಾಗಗಳಲ್ಲಿ ಮಾತ್ರ ಸ್ವಲ್ಪ ಸಮಯದವರೆಗೆ ಗೋಚರವಾಗಲಿದೆ. ಅಮೆರಿಕ, ಯುರೋಪ್, ರಷ್ಯಾ ಮತ್ತು ಕೆನಡಾದಂತಹ ದೇಶಗಳಲ್ಲಿ ಗ್ರಹಣದ ಪರಿಣಾಮವು ಹೆಚ್ಚಾಗಿರಲಿದ್ದು, ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿವೆ.
ದೆಹಲಿ ಮೂಲದ ಜ್ಯೋತಿಷಿ ಪಂಕಜ್ ಖನ್ನಾ ಅವರ ಪ್ರಕಾರ 2021 ರ ಜೂನ್ 10 ರಂದು ಸೂರ್ಯಗ್ರಹಣ ಆರ್ಥಿಕ ಕುಸಿತವನ್ನು ತರಲಿದೆ. ಈ ಗ್ರಹಣದ ಪರಿಣಾಮವು ಆಗಸ್ಟ್ 2022 ರವರೆಗೆ ಇರಲಿದೆ. ಆಗಸ್ಟ್ 2022 ರಿಂದ, ಗ್ರಹಣದ ಋಣಾತ್ಮಕ ಪ್ರಭಾವವು ನಿಧಾನವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದು ಡಿಸೆಂಬರ್ 2022 ರವರೆಗೆ ಮುಂದುವರಿಯುತ್ತದೆ.