ಲಂಡನ್:ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು ಇಂಗಾಲದ ಹೊರಸೂಸುವಿಕೆಯನ್ನು ಶೇಕಡಾ 80 ರಷ್ಟು ಕಡಿಮೆ ಮಾಡಬಹುದು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಈ ಮೂಲಕ ಇಂಗಾಲದ ಹೊರಸೂಸುವಿಕೆಯಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ ಉತ್ಪಾದನೆಯ ಸಮಯದಲ್ಲಿ ಬಿಡುಗಡೆಯಾಗುತ್ತದೆ, ಉಳಿದ ಹೊರಸೂಸುವಿಕೆಯು ಗೊಬ್ಬರವನ್ನು ಹೊಲಗಳಲ್ಲಿ ಹರಡಿದ ನಂತರ ಬಿಡುಗಡೆಯಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮತ್ತು ರಾಸಾಯನಿಕ ಗೊಬ್ಬರಗಳು ಪೆಟ್ರೋಕೆಮಿಕಲ್ ಉದ್ಯಮದ ಉತ್ಪನ್ನಗಳಲ್ಲಿ 74ರಷ್ಟು ಪಾಲನ್ನು ಹೊಂದಿವೆ. ವಿಶ್ವದ ಜನಸಂಖ್ಯೆಯ ಶೇಕಡಾ 48 ರಷ್ಟು ಆಹಾರದ ಅಗತ್ಯಗಳನ್ನು ರಾಸಾಯನಿಕ ಗೊಬ್ಬರಗಳ ಮೂಲಕ ಬೆಳೆದ ಬೆಳೆಗಳಿಂದ ಪೂರೈಸಲಾಗುತ್ತದೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆ ಶೇ.20ರಷ್ಟು ಹೆಚ್ಚಾಗುವುದರಿಂದ ರಾಸಾಯನಿಕ ಗೊಬ್ಬರಗಳ ಬಳಕೆಯೂ ಹೆಚ್ಚಲಿದೆ. ಸಾರಜನಕ ಆಧಾರಿತ ರಸಗೊಬ್ಬರಗಳು ಎಲ್ಲಕ್ಕಿಂತ ಹೆಚ್ಚು ಇಂಗಾಲವನ್ನು ಹೊರಸೂಸುತ್ತವೆ.
2.6 ಗಿಗಾಟನ್ ಇಂಗಾಲವನ್ನು ಹೊರಸೂಸುತ್ತಿರುವ ಗೊಬ್ಬರ:ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು ಒಟ್ಟಾಗಿ ವರ್ಷಕ್ಕೆ 2.6 ಗಿಗಾಟನ್ ಇಂಗಾಲವನ್ನು ಹೊರಸೂಸುತ್ತವೆ. ಇದು ವಾಯುಯಾನ ಮತ್ತು ಹಡಗು ಕ್ಷೇತ್ರಗಳಲ್ಲಿ ಇಂಗಾಲದ ಹೊರಸೂಸುವಿಕೆಗಿಂತ ಹೆಚ್ಚು. ರಾಸಾಯನಿಕ ಗೊಬ್ಬರ ಉತ್ಪಾದನಾ ಪ್ರಕ್ರಿಯೆಯಲ್ಲಿ ಅಮೋನಿಯಾ ಸಂಶ್ಲೇಷಣೆ ಇಂಗಾಲದ ಹೊರಸೂಸುವಿಕೆಯ ಪ್ರಮುಖ ಮೂಲವಾಗಿದೆ. ಈ ಉದ್ಯಮದಿಂದ ಹೈಡ್ರೋಜನ್ ಉತ್ಪಾದನೆಗಳು ಹಾಗೂ ಕಲ್ಲಿದ್ದಲು ಮತ್ತು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿಮೆ ಮಾಡಿದಾಗ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತದೆ.