ಸ್ಯಾನ್ ಫ್ರಾನ್ಸಿಸ್ಕೊ( ಅಮೆರಿಕ) : ಫೇಸ್ಬುಕ್ ಒಡೆತನ ಹೊಂದಿರುವ ಕಂಪನಿ ಮೆಟಾ ತನ್ನ ಮೊದಲ ಸ್ಮಾರ್ಟ್ ಗ್ಲಾಸ್‌ಗಳನ್ನು 2025ರ ವೇಳೆಗೆ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ ಗ್ಲಾಸ್‌ಗಳು ಡಿಸ್‌ಪ್ಲೇ ಹೊಂದಿರಲಿವೆ. ಸ್ಮಾರ್ಟ್ ಗ್ಲಾಸ್ ಕಂಟ್ರೋಲ್ ಮಾಡಲು ಇವುಗಳ ಜೊತೆಗೆ ನ್ಯೂರಲ್ ಇಂಟರ್ಫೇಸ್ ಸ್ಮಾರ್ಟ್ ವಾಚ್ ಸಹ ಇರಲಿದೆ ಎಂದು ವರದಿಗಳು ತಿಳಿಸಿವೆ. ಇದರ ಜೊತೆಗೆ ಕಂಪನಿಯು 2027 ರಲ್ಲಿ ತನ್ನ ಮೊದಲ ಜೋಡಿ ಪೂರ್ಣ ಪ್ರಮಾಣದ AR (ವರ್ಧಿತ ರಿಯಾಲಿಟಿ) ಗ್ಲಾಸ್‌ಗಳನ್ನು ಪರಿಚಯಿಸಲು ಯೋಜಿಸಿದೆ. ಮುಂದಿನ ದಿನಗಳಲ್ಲಿ AR ಗ್ಲಾಸ್‌ಗಳು ಮೊಬೈಲ್ ಫೋನ್‌ಗಳಿಗಿಂತ ಹೆಚ್ಚು ಜನಪ್ರಿಯವಾಗಲಿವೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಭವಿಷ್ಯ ನುಡಿದಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ತನ್ನ AR ಮತ್ತು VR ಪ್ರಯತ್ನಗಳ ಬಗ್ಗೆ ಮೆಟಾದ ರಿಯಾಲಿಟಿ ಲ್ಯಾಬ್ಸ್ ಡಿವಿಜನ್ ಉದ್ಯೋಗಿಗಳಿಗೆ ನೀಡಿದ ಪ್ರಸೆಂಟೇಶನ್ನಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ AR ವಿಭಾಗದ ಕಂಪನಿಯ ಉಪಾಧ್ಯಕ್ಷ ಅಲೆಕ್ಸ್ ಹಿಮೆಲ್, 2025 ರಲ್ಲಿ ಮೂರನೇ ತಲೆಮಾರಿನ ಸ್ಮಾರ್ಟ್ ಗ್ಲಾಸ್‌ಗಳು ರಿಯಲ್ ಟೈಮ್ನಲ್ಲಿ ಒಳಬರುವ ಟೆಕ್ಸ್ಟ್ ಮೆಸೇಜ್ಗಳನ್ನು ವೀಕ್ಷಿಸಲು, ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ಬೇರೆ ಭಾಷೆಯಿಂದ ಪಠ್ಯವನ್ನು ಭಾಷಾಂತರಿಸಲು ವ್ಯೂಫೈಂಡರ್ ಎಂದು ಕರೆಯಲಾಗುವ ಡಿಸ್‌ಪ್ಲೇ ಹೊಂದಿರುತ್ತವೆ ಎಂದು ಹೇಳಿದರು.
ಅಲ್ಲದೇ ಈ ಗ್ಲಾಸ್ ನ್ಯೂರಲ್ ಇಂಟರ್ಫೇಸ್ ಬ್ಯಾಂಡ್ ಹೊಂದಿರುತ್ತದೆ. ಇದು ಕಾಲ್ಪನಿಕ ಡಿ - ಪ್ಯಾಡ್‌ನಲ್ಲಿ ಬೆರಳುಗಳನ್ನು ಸ್ವೈಪ್ ಮಾಡುವಂಥ ಕೈ ಚಲನೆಯನ್ನು ಬಳಸಿಕೊಂಡು ಅವುಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಅಂತಿಮವಾಗಿ, ಬ್ಯಾಂಡ್ ಧರಿಸಿದವರಿಗೆ ವರ್ಚುಯಲ್ ಕೀಬೋರ್ಡ್ ಬಳಸಲು ಮತ್ತು ಮೊಬೈಲ್ ಫೋನ್‌ಗಳಂತೆಯೇ ಟೈಪ್ ಮಾಡಲು ಸಾಧ್ಯವಾಗಲಿದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಏತನ್ಮಧ್ಯೆ, ಮಾರ್ಕ್ ಜುಕರ್‌ಬರ್ಗ್ ಕಂಪನಿಯು ಹೊಸ ಉನ್ನತ ಮಟ್ಟದ ಉತ್ಪನ್ನ ತಂಡ ರಚಿಸುತ್ತಿದೆ ಎಂದು ಘೋಷಿಸಿದರು. ಈ ತಂಡವು ಉತ್ಪಾದಕ ಕೃತಕ ಬುದ್ಧಿಮತ್ತೆ (AI)ಯ ಮೇಲೆ ಗಮನ ಕೇಂದ್ರೀಕರಿಸಿ ಕೆಲಸ ಮಾಡಲಿದೆ.
ಖಾಸಗಿ ಕ್ಷಣಗಳ ಚಿತ್ರಗಳ ಶೇರಿಂಗ್ ತಡೆಗೆ ಹೊಸ ಪ್ಲಾಟ್ಫಾರ್ಮ್ ರಚಿಸಿದ ಮೆಟಾ: ಯುವ ಸಮೂಹ ಮತ್ತು ಅಪ್ರಾಪ್ತ ವಯಸ್ಕರ ಖಾಸಗಿ ಕ್ಷಣದ ಚಿತ್ರಗಳು ಆನ್‌ಲೈನ್‌ನಲ್ಲಿ ಹರಡುವುದನ್ನು ತಡೆಯಲು ಮೆಟಾ ಹೊಸ ಪ್ಲಾಟ್ಪಾರ್ಮ್ ಒಂದನ್ನು ತಯಾರಿಸಿದೆ. 'ಟೇಕ್ ಇಟ್ ಡೌನ್' ಹೆಸರಿನ ಈ ಪ್ಲಾಟ್ ಫಾರ್ಮ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರವನ್ನು (NCMEC) ಆರ್ಥಿಕವಾಗಿ ಬೆಂಬಲಿಸಲಾಗಿದೆ ಎಂದು ಮೆಟಾ ಹೇಳಿದೆ. ಇದು ವಯಸ್ಕರು ತಮ್ಮ ಖಾಸಗಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹರಡುವುದನ್ನು ತಡೆಯಲು ಸಹಾಯ ಮಾಡುವ ವೇದಿಕೆಯಾಗಿದೆ. ನಾವು ಕೆಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದೇವೆ. ಇದು ಅನುಮಾನಾಸ್ಪದ ವಯಸ್ಕರು Instagram ನಲ್ಲಿ ಹದಿಹರೆಯದವರೊಂದಿಗೆ ಸಂವಹನ ನಡೆಸುವುದನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂದು ಮೆಟಾದಲ್ಲಿನ ಸುರಕ್ಷತೆಯ ಜಾಗತಿಕ ಮುಖ್ಯಸ್ಥ ಆಂಟಿಗೊನ್ ಡೇವಿಸ್ ಹೇಳಿದರು.
ಇದನ್ನೂ ಓದಿ : ಫೇಸ್ಬುಕ್ ಮೆಸೆಂಜರ್ನಲ್ಲಿ 'ರೋಲ್ ಕಾಲ್': ಬರಲಿದೆ ಹೊಸ ಫೀಚರ್