ಹೈದರಾಬಾದ್: ಸೂರ್ಯ ಕ್ಷೀರಪಥದ ಅತ್ಯಂತ ಸಣ್ಣ ನಕ್ಷತ್ರಗಳಲ್ಲಿ ಒಂದು. ಮಿಲ್ಕಿವೇನಲ್ಲಿ ಇರುವ ಹತ್ತಿರದ ನಕ್ಷತ್ರ. ಸೂರ್ಯನ ವಯಸ್ಸು ಅಂದಾಜು ಸುಮಾರು 4.5 ಶತಕೋಟಿ ವರ್ಷಗಳು ಎಂದು ಲೆಕ್ಕ ಹಾಕಲಾಗಿದೆ. ಇದು ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳಿಂದ ಕೂಡಿದ ಒಂದು ಬಿಸಿಯಾದ ಹಾಗೂ ಪ್ರಕಾಶಮಾನವಾದ ಚಂಡು ಅಂತಲೇ ಹೇಳಬಹುದು.
ಭೂಮಿಯಿಂದ ಸೂರ್ಯನಿಗೆ ಇರುವ ಅಂತರ ಸುಮಾರು 150 ಮಿಲಿಯನ್ ಕಿಲೋಮೀಟರ್. ನಮ್ಮ ಸೌರವ್ಯೂಹಕ್ಕೆ ಶಕ್ತಿಯ ಮೂಲ ಎಂದರೆ ಅದು ಸೂರ್ಯ. ಸೌರಶಕ್ತಿಯಿಲ್ಲದೇ ಭೂಮಿಯ ಮೇಲಿನ ಜೀವಿಗಳು ಬದುಕಲು ಸಾಧ್ಯವೇ ಇಲ್ಲ. ಸೂರ್ಯನ ಗುರುತ್ವಾಕರ್ಷಣೆ ಸೌರವ್ಯೂಹದ ಎಲ್ಲ ವಸ್ತುಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
'ಕೋರ್' ಎಂದು ಕರೆಯಲ್ಪಡುವ ಸೂರ್ಯನ ಕೇಂದ್ರ ಪ್ರದೇಶದಲ್ಲಿ, ತಾಪಮಾನವು 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ತಾಪಮಾನದಲ್ಲಿ, ಪರಮಾಣು ಸಮ್ಮಿಳನ ಎಂಬ ಪ್ರಕ್ರಿಯೆಯು ಸೂರ್ಯನಿಗೆ ಶಕ್ತಿ ನೀಡುವ ಕರೋನಾ ಎಂದು ಕರೆಯಲ್ಪಡುವ ಭಾಗದಲ್ಲಿ ನಡೆಯುತ್ತದೆ. ದ್ಯುತಿಗೋಳ ಎಂದು ಕರೆಯಲ್ಪಡುವ ಸೂರ್ಯನ ಗೋಚರ ಮೇಲ್ಮೈ ತುಲನಾತ್ಮಕವಾಗಿ ಸುಮಾರು 5,500 C ತಾಪಮಾನ ಹೊಂದಿರುತ್ತದೆ.
ಸೌರ ಅಧ್ಯಯನದ ಮಹತ್ವ ಏನು:ಸೂರ್ಯ ಮಂಡಲದ ಭಾಗವಾಗಿರುವ ನಾವು ಸೂರ್ಯನನ್ನು ವಿವರವಾಗಿ ಪರೀಕ್ಷಿಸುವ ವಿಫುಲವಾದ ಅವಕಾಶಗಳನ್ನು ಪಡೆದುಕೊಂಡಿದ್ದೇವೆ. ಕ್ಷೀರಪಥ ಮತ್ತು ದೂರದ ಗೆಲಕ್ಸಿಗಳಾದ್ಯಂತ ನಕ್ಷತ್ರಗಳನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಸೂರ್ಯನು ತನ್ನ ಗೋಚರ ಅಂಶವನ್ನು ಮೀರಿ ವಿಸ್ತರಿಸಿರುವ ಕ್ರಿಯಾತ್ಮಕ ಘಟಕವಾಗಿದೆ.
ಬಾಹ್ಯಾಕಾಶ ಹವಾಮಾನ ಮತ್ತು ಸೂರ್ಯನ ಪ್ರಭಾವ:
- ಸೂರ್ಯ ನಿರಂತರವಾಗಿ ವಿಕಿರಣ ಮತ್ತು ಕಾಂತೀಯ ಕ್ಷೇತ್ರಗಳ ಮೂಲಕ ಭೂಮಿಯ ಪರಿಸರವನ್ನು ರೂಪಿಸುತ್ತಾನೆ.
- ಸೌರ ಮಾರುತ, ಹೆಚ್ಚಿನ ಶಕ್ತಿಯ ಪ್ರೋಟಾನ್‌ಗಳ ಸ್ಟ್ರೀಮ್, ಸೂರ್ಯನ ಕಾಂತಕ್ಷೇತ್ರದ ಜೊತೆಗೆ ಸೌರವ್ಯೂಹದ ಮೇಲೆ ಪ್ರವಾಹ ಮಾಡುತ್ತದೆ.
- ಕರೋನಲ್ ಮಾಸ್ ಎಜೆಕ್ಷನ್ಸ್ (CME ಗಳು) ನಂತಹ ವಿಚ್ಛಿದ್ರಕಾರಿ ಸೌರ ಘಟನೆಗಳು, ಗ್ರಹಗಳ ಬಳಿ ಬಾಹ್ಯಾಕಾಶ ಪರಿಸರವನ್ನು ಮಾರ್ಪಡಿಸುತ್ತವೆ. ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸ್ವತ್ತುಗಳ ಕಾರ್ಯನಿರ್ವಹಣೆಯ ಮೇಲೆ ಇವು ಸಂಭಾವ್ಯ ಪರಿಣಾಮ ಬೀರುತ್ತವೆ.
- ಬಾಹ್ಯಾಕಾಶ-ಆಧಾರಿತ ತಂತ್ರಜ್ಞಾನದ ಮೇಲೆ ನಮ್ಮ ಅವಲಂಬನೆಯು ಬೆಳೆದಂತೆ ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಏನಿದು ಆದಿತ್ಯ-L1?: ಆದಿತ್ಯ L1 ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ. ಇದು ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿ ವಿಶಿಷ್ಟವಾದ ವಾಂಟೇಜ್ ಪಾಯಿಂಟ್ ಅನ್ನು ನೀಡುವ ಮೂಲಕ ಲಂಗ್ರೇಜ್ ಪಾಯಿಂಟ್ 1 (L1)ನ ಸುತ್ತ ಸುತ್ತಲು ಆದಿತ್ಯ ಎಲ್ 1 ಮಿಷನ್ ಸಜ್ಜಾಗಿದೆ.
- ಲಂಗ್ರೇಜ್ ಪಾಯಿಂಟ್ನಲ್ಲಿ ನೆಲೆಗೊಳ್ಳುವ ಆದಿತ್ಯ-ಎಲ್1 ಸೂರ್ಯನ ಚಟುವಟಿಕೆಗಳ ಬಗ್ಗೆ ಅಡೆತಡೆಗಳಿಲ್ಲದೇ ತನ್ನ ಅಧ್ಯಯನ ಮುಂದುವರಿಸಲಿದೆ.
- ಎಲೆಕ್ಟ್ರೋಮ್ಯಾಗ್ನೆಟಿಕ್ ಮತ್ತು ಪಾರ್ಟಿಕಲ್ ಡಿಟೆಕ್ಟರ್‌ಗಳನ್ನು ಒಳಗೊಂಡಂತೆ ಏಳು ಪೇಲೋಡ್‌ಗಳನ್ನು ಹೊಂದಿದ್ದು, ಇದು ಫೋಟೋಸ್ಪಿಯರ್, ಕ್ರೋಮೋಸ್ಪಿಯರ್ ಮತ್ತು ಕರೋನಾವನ್ನು ಅನ್ವೇಷಿಸುತ್ತದೆ.
- ಆದಿತ್ಯ-L1 ಪೇಲೋಡ್‌ಗಳು ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್‌ಗಳು (CMEಗಳು) ಮತ್ತು ಬಾಹ್ಯಾಕಾಶ ಹವಾಮಾನ, ಸೂರ್ಯನ ಶಕ್ತಿ ಮತ್ತು ಪರಿಕಲ್ಪನೆಗಳನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ.
ಮಿಷನ್ ಉದ್ದೇಶಗಳು:ಸೂರ್ಯನ ಕರೋನಾ ಭಾಗ ಮತ್ತು ಸೌರ ಮಾರುತಗಳ ವೇಗವರ್ಧನೆಯನ್ನು ಅರ್ಥಮಾಡಿಕೊಳ್ಳುವುದು.