ಕರ್ನಾಟಕ

karnataka

ETV Bharat / science-and-technology

ಹೊಸ AI ಸ್ಟಾರ್ಟ್​ಅಪ್​​ ಸ್ಥಾಪನೆಗೆ ಮುಂದಾದ ಟ್ವಿಟರ್​ ಮಾಜಿ ಸಿಇಒ ಪರಾಗ್​ ಅಗರ್​ವಾಲ್​

ಟ್ವಿಟರ್​ ತೊರೆದ ಬಳಿಕ ಇದೀಗ ಎಐ ಸ್ಟಾರ್ಟ್​ಅಪ್​ ಸ್ಥಾಪನೆಗೆ ಮುಂದಾಗಿರುವ ಭಾರತೀಯ ಮೂಲದ ಪರಾಗ್​ ಅಗರ್​ವಾಲ್,​ ಇದಕ್ಕಾಗಿ 30 ಮಿಲಿಯನ್​ ಡಾಲರ್​​ ಹಣ ಸಂಗ್ರಹಿಸಿದ್ದಾರೆ.

By ETV Bharat Karnataka Team

Published : Jan 10, 2024, 11:35 AM IST

ex-twitter-ceo-parag-agrawal-raises-30-dollars-million-for-new-ai-startup
ex-twitter-ceo-parag-agrawal-raises-30-dollars-million-for-new-ai-startup

ಹೈದರಾಬಾದ್​: ಟ್ವಿಟರ್​ ಸಿಇಒ ಆಗಿದ್ದ ಭಾರತೀಯ ಮೂಲದ ಪರಾಗ್​ ಅಗರ್​ವಾಲ್​, ಮಸ್ಕ್ ಟ್ವಿಟರ್​ (ಈಗಿನ ಎಕ್ಸ್​) ಖರೀದಿ ಬಳಿಕ ಸಂಸ್ಥೆಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಯಾವುದೇ ಸಂಸ್ಥೆಗೆ ಸೇರದ ಅಗರ್​ವಾಲ್​ ಸುದ್ದಿಯಲ್ಲಿರಲಿಲ್ಲ. ಇದೀಗ ಕೃತಕ ಬುದ್ಧಿಮತ್ತೆ (ಎಐ) ಜಗತ್ತಿಗೆ ಪ್ರವೇಶಿಸಿರುವ ಅವರು, ತಮ್ಮದೇ ಆದ ಸ್ಟಾರ್ಟ್​ಅಪ್​ವೊಂದನ್ನು ಆರಂಭಿಸಲು ಮುಂದಾಗಿದ್ದು, ಇದಕ್ಕಾಗಿ 30 ಮಿಲಿಯನ್​ ಡಾಲರ್​ನ್ನು ಹಣವನ್ನು ಸಂಗ್ರಹಿಸಿದ್ದಾರೆ.

ದಿ ಇನ್ಫಾರ್ಮೇಶನ್​ ವರದಿ ಪ್ರಕಾರ, 2022ರಲ್ಲಿ ಮಸ್ಕ್​ ಟ್ವಿಟರ್​ ಪ್ರವೇಶದ ಬಳಿಕ ಸಂಸ್ಥೆಯಿಂದ ಹೊರ ನಡೆದಿದ್ದ ಅಗರ್​ವಾಲ್​ ಚಾಟ್​​ಜಿಪಿಟಿಯ ರೀತಿಯ ಎಐ ಸ್ಟಾರ್ಟ್​​ಅಪ್​ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು 30 ಮಿಲಿಯನ್​ ಡಾಲರ್​ ಹಣವನ್ನು ಸಂಗ್ರಹಿಸಿದ್ದಾರೆ.

ಈ ಮೊದಲು ಓಪನ್​ಎಐಗೆ ಬೆನ್ನೆಲುಬಾಗಿದ್ದ ಖೋಸ್ಲಾ ವೆಂಚರ್ಸ್‌ ಇದೀಗ ಅಗರ್​ವಾಲ್​ ಸ್ಟಾರ್ಟ್​ ಅಪ್​​ಗೆ ಬಂಡವಾಳ ಹೂಡಿದೆ. ಇದರ ಜೊತೆಗೆ ಪ್ರಸಿದ್ಧ ಬಂಡಾವಳ ಘಟಕವಾಗಿರುವ ಇಂಡೆಕ್ಸ್​ ವೆಂಚರ್ಸ್​ ಮತ್ತು ಫಸ್ಟ್​ ರೌಂಡ್​ ಕ್ಯಾಪಿಟಲ್​ ಕೂಡ ಇದಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಇನ್ನು ಅಗರ್​ವಾಲ್​ ಉದ್ಯಮದ ಹೆಸರೇನು? ಉತ್ಪಾದನೆಯ ಮಾಹಿತಿ ಕುರಿತ ಯಾವುದೇ ವಿಚಾರ ಬಹಿರಂಗವಾಗಿಲ್ಲ. ಆದರೆ, ಅವರ ಬಲ್ಲ ಮೂಲಗಳು ತಿಳಿಸುವಂತೆ ಇದು ಓಪನ್​ಎಐನ ಚಾಟ್​ಬಾಟ್​ ಚಾಟ್​ಜಿಪಿಟಿಯಂತೆ ದೊಡ್ಡ ಭಾಷಾ ಮಾದರಿಯ (language models) ಸಾಫ್ಟ್​​ವೇರ್​ ಅಭಿವೃದ್ಧಿ ನಿರ್ಮಾಣದ ಸಂಸ್ಥೆಯಾಗಿದೆ.

ಕಳೆದ ವರ್ಷ, ಮಸ್ಕ್​ರ ಎಕ್ಸ್​​ ಕಾರ್ಪೋರೇಷನ್​ನಿಂದ ಪರಾಗ್​ ಅಗರ್​ವಾಲ್​ ಮತ್ತು ಮಾಜಿ ನೀತಿ ಮುಖ್ಯಸ್ಥರಾಗಿದ್ದ ವಿಜಯ್​ ಗದ್ದೆ ಕಾನೂನು ಶುಲ್ಕವಾಗಿ 1.1 ಮಿಲಿಯನ್​ ಹಣವನ್ನು ಗೆದ್ದಿದ್ದರು. ಮಸ್ಕ್ 44 ಬಿಲಿಯನ್​ ಡಾಲರ್​ ನೀಡಿ​ ಸಂಸ್ಥೆ ಒಡೆತನ ಪಡೆದ ಮೇಲೆ ಅಗರ್​ವಾಲ್​, ಗದ್ದೆ ಮತ್ತು ಟ್ವಿಟರ್​​ ಮಾಜಿ ಹಣಕಾಸು ಅಧಿಕಾರಿ ಮುಖ್ಯಸ್ಥ ನೆಡ್​ ಸೆಗಲ್​ಗೆ ತಮ್ಮ ಸಂಸ್ಥೆಯಿಂದ ವಜಾಗೊಳಿಸಿದ್ದಾಗಿ ತಿಳಿಸಿದ್ದರು.

ವರದಿಗಳ ಅನುಸಾರ, ಈ ಮೂವರು ಪ್ರಮುಖ ನಾಯಕರನ್ನು ಸಂಸ್ಥೆಯಿಂದ ಹೊರಗೆ ಕಳುಹಿಸಿದ್ದ ಟ್ವಿಟರ್​​ 90-100 ಮಿಲಿಯನ್​ ಡಾಲರ್​ ಎಕ್ಸಿಟ್​ ಪ್ಯಾಕೇಜ್​ ನೀಡಿತ್ತು. ಅಗರ್​ವಾಲ್​ 40 ಮಿಲಿಯನ್​ ಡಾಲರ್​​ ಪಡೆದರು. ಐಐಟಿ ಬಾಂಬೆ ಮತ್ತು ಸ್ಟಾಂಡ್​ಫೋರ್ಡ್​​ ವಿದ್ಯಾರ್ಥಿ ಅಗರ್​ವಾಲ್​ 2011ರಲ್ಲಿ ಟ್ವಿಟರ್​ ಸೇರಿದ್ದರು. ಬಳಿಕ 2021ರಲ್ಲಿ ಟ್ವಿಟರ್​ ಸಿಇಒ ಆಗಿ ನೇಮಕಗೊಂಡಿದ್ದರು.

ಇದನ್ನೂ ಓದಿ: ಇನ್​​ಸ್ಟಾ, ಫೇಸ್​ಬುಕ್​ನಲ್ಲಿ ಆತ್ಮಹತ್ಯೆ, ಅನಾರೋಗ್ಯಕರ ಮಾಹಿತಿ ಸಿಗದಂತೆ ನಿರ್ಬಂಧ: ಮೆಟಾ

ABOUT THE AUTHOR

...view details