ಎಲಾನ್ ಮಸ್ಕ್ 2007ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ್ದಾರೆ. ಹಿಸ್ಟರಿ ಡಿಫೈನ್ಡ್ ಎಂಬ ಟ್ವಿಟರ್ ಹ್ಯಾಂಡಲ್‌ನಲ್ಲಿ ಒಬ್ಬರು ತಾಜ್ ಮಹಲ್‌ನ ಆಕರ್ಷಕ ಫೋಟೋ ಹರಿಬಿಟ್ಟಿದ್ದು, ಇದಕ್ಕೆ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.
'ನಾನು 2007ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾಜ್‌ಮಹಲ್ ನೋಡಿದ್ದೆ. ಇದು ನಿಜವಾಗಿಯೂ ವಿಶ್ವದ ಅದ್ಭುತವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ. ಎಲಾನ್ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ ಮಗನ ಟ್ವೀಟ್‌ಗೆ ಉತ್ತರಿಸಿದ್ದು, '1954ರಲ್ಲಿ ನಿಮ್ಮ ಅಜ್ಜ-ಅಜ್ಜಿ ದಕ್ಷಿಣ ಆಫ್ರಿಕಾದಿಂದ ಆಸ್ಟ್ರೇಲಿಯಾಕ್ಕೆ ಹೋಗುವ ದಾರಿಯಲ್ಲಿ ತಾಜ್‌ಮಹಲ್ ನೋಡಲು ಹೋಗಿದ್ದರು' ಎಂದು ನೆನಪಿಸಿದ್ದಾರೆ.
ಇದನ್ನೂ ಓದಿ:ಸಾವಿನ ಬಗ್ಗೆ ಕುತೂಹಲಕಾರಿ ಟ್ವೀಟ್ ಮಾಡಿದ ಟೆಸ್ಲಾ ಸಿಇಒ ಎಲೋನ್ ಮಸ್ಕ್
'ಒಂದು ವೇಳೆ ನಾನು ನಿಗೂಢವಾಗಿ ಸತ್ತರೆ, ಅದನ್ನು ತಿಳಿಯಲು ಚೆನ್ನಾಗಿರುತ್ತದೆ' ಎಂಬ ಮಸ್ಕ್ ಟ್ವೀಟ್‌ಗೆ ತಾಯಿ ಮಾಯೆ ಮಸ್ಕ್ 'ಇದು ತಮಾಷೆಯಲ್ಲ' ಎಂದೂ ಪ್ರತಿಕ್ರಿಯಿಸಿದ್ದಾರೆ. ಎಲಾನ್ ಮಸ್ಕ್ ಅವರ ಟ್ವೀಟ್ ಅನ್ನು ಸಾವಿರಾರು ಜನ ರಿಟ್ವೀಟ್ ಮಾಡಿದ್ದು, 'ನೀವು ಸಾಯುವುದಿಲ್ಲ, ಪ್ರಪಂಚದ ಸುಧಾರಣೆಗಾಗಿ ನಿಮ್ಮ ಅವಶ್ಯಕತೆ ಇದೆ' ಎಂದಿದ್ದರು.
ಫೋರ್ಬ್ಸ್ ಪ್ರಕಾರ, ಮಸ್ಕ್ $273.6 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಳೆದ ತಿಂಗಳು, ಬಹುಶತಕೋಟಿ ಡಾಲರ್ ಮೂಲಕ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಖರೀದಿಸಿದ್ದರು.