ಕರ್ನಾಟಕ

karnataka

ETV Bharat / science-and-technology

'cage fight': ತಮಾಷೆ ಮಾಡಿದ್ದನ್ನು ಒಪ್ಪಿಕೊಂಡ ಎಲೋನ್ ಮಸ್ಕ್ - ಎಲೋನ್ ಮಸ್ಕ್

ಮಸ್ಕ್ ಅವರು ಅಂತಿಮವಾಗಿ ಕೇಜ್ ಫೈಟ್ ಬಗ್ಗೆ ಗಂಭೀರವಾಗಿಲ್ಲ ಎಂದು ಒಪ್ಪಿಕೊಂಡರು. ಆದರೆ ಅದರ ಬಗ್ಗೆ ತಮಾಷೆ ಮಾಡಿದ್ದಾರೆ. ಮೆಟಾ ಸಂಸ್ಥಾಪಕ ಜುಕ್ ಹೋರಾಟದಿಂದ ಓಡಿಹೋಗಿದ್ದಾರೆ ಎಂದು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

Mark Zuckerberg , Elon Musk
ಮಾರ್ಕ್ ಜುಕರ್‌ಬರ್ಗ್ , ಎಲೋನ್ ಮಸ್ಕ್

By

Published : Aug 16, 2023, 8:51 AM IST

ಹೈದರಾಬಾದ್: ಪ್ರಸ್ತಾವಿತ 'ಕೇಜ್ ಫೈಟ್' ಬಗ್ಗೆ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಗಂಭೀರವಾಗಿಲ್ಲ ಎಂದು ಹಲವು ಬಾರಿ ಹೇಳಿಕೆ ನೀಡಿದ ನಂತರ, ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಬುಧವಾರ ಆ ಬಗ್ಗೆ ತಮಾಷೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಆದರೂ, ಮಸ್ಕ್‌ ತನ್ನ ಇತ್ತೀಚಿನ ಪೋಸ್ಟ್ ತನ್ನ ಜುಕ್​ ಹೋರಾಟದಿಂದ ಓಡಿ ಹೋಗುತ್ತಿದ್ದಾರೆ ಎಂದು ಮಸ್ಕ್ ಆರೋಪಿಸಿದರು. ಪೋಸ್ಟ್​ನಲ್ಲಿ ಹಲವರು ಮಸ್ಕ್‌ಗೆ ಚಂದಾದಾರರಾಗಿದ್ದರು ಮತ್ತು ಜುಕ್ ಹಿಂದೆ ಸರಿದಿದ್ದಾರೆ ಎಂದು ತೋರಿಸುವ ವಿಷಯವನ್ನು ಪೋಸ್ಟ್ ಮಾಡುತ್ತಿದ್ದರು. ಮಸ್ಕ್ ತಮ್ಮ ಎಕ್ಸ್​ ಅಪ್ಲಿಕೇಶನ್‌ನಲ್ಲಿ ಹೀಗೆ ಬರೆದಿದ್ದಾರೆ.. 'ಫೈಟ್ ರೀಕ್ಯಾಪ್. ನಾನು ಜುಕ್​ ವಿರುದ್ಧ ಹೋರಾಡುವ ಬಗ್ಗೆ ಎಕ್ಸ್‌ನಲ್ಲಿ ತಮಾಷೆ ಮಾಡಿದ್ದೆ. ನಂತರ ಪಂದ್ಯದ ಸ್ಥಳವನ್ನು ಹೆಸರಿಸು ಎಂದಿದ್ದೆ. ಅವರು ಇಟಲಿಯ ಕೊಲೊಸಿಯಮ್ ಎಂದು ಹೇಳಿದ್ದರು. ನಾನು ಅವರ ಮನೆಯೇ ಈ ಫೈಟ್​​ಗೆ ಸುರಕ್ಷಿತ ಸ್ಥಳ ಎಂದು ಸೂಚಿಸಿದ್ದೆ. ಅವರು ಎಲ್ಲಿಯಾದರೂ ಹೋರಾಡುತ್ತಾರೆಯೇ? (sic)'' ಎಂದು ಅವರು ಡೈಲಿ ಮೇಲ್ ಲೇಖನಕ್ಕೆ ಲಿಂಕ್ ಟ್ಯಾಗ್ ಮಾಡಿ, ಸ್ಪಷ್ಟನೆ ಕೊಟ್ಟಿದ್ದಾರೆ.

ಕೇಜ್​ ಫೈಟ್​ ಕುರಿತ ಅನುಮಾನಕ್ಕೆ ತೆರೆ ಎಳೆದಿದ್ದ ಜುಕರ್​ಬರ್ಗ್​: ಟೆಕ್​ ದೈತ್ಯರಾಗಿರುವ ಮೆಟಾ ಮಾಲೀಕ ಜುಗರ್​ ಬರ್ಗ್​​ ಮತ್ತು ಮೈಕ್ರೋಬ್ಲಾಗಿಂಗ್ ಎಕ್ಸ್​ ಮಾಲೀಕ ಎಲೋನ್​ ಮಸ್ಕ್​ ಒಬ್ಬರಿಗೆ ಒಬ್ಬರು ಪಂಥಾಹ್ವಾನ ನೀಡಿದ್ದ ಕೇಜ್​ ಫೈಟ್​​​ ಯಾವಾಗ ನಡೆಯಲಿದೆ ಎಂಬ ಕುತೂಹಲ ಜಗತ್ತಿನ ಅನೇಕರಲ್ಲಿ ಹಾಗೇ ಉಳಿದಿತ್ತು. ಆದರೆ, ಈ ಕುರಿತು ಮೆಟಾ ಸಂಸ್ಥಾಪಕ ಅಂತಿಮ ಪರದೆ ಎಳೆದಿದ್ದರು.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಥ್ರೇಡ್​ನಲ್ಲಿ ತಿಳಿಸಿರುವ ಅವರು, ಎಲೋನ್​ ಈ ಕೇಜ್​ ಫೈಟ್​ ಬಗ್ಗೆ ಗಂಭೀರವಾಗಿಲ್ಲ ಎಂಬುದನ್ನು ನಾವೆಲ್ಲಾ ಒಪ್ಪುತ್ತೇವೆ. ಇದೀಗ ಇದನ್ನು ಬಿಟ್ಟು ಮುಂದೆ ಸಾಗುವ ಸಮಯ ಬಂದಿದೆ ಎಂದಿರುವ ಅವರು, ತಮ್ಮಿಬ್ಬರ ನಡುವೆ ಯಾವುದೇ ಕೇಜ್​ ಫೈಟ್​ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇನ್ನು ಮುಂದುವರಿದು ತಿಳಿಸಿರುವ ಅವರು, ನಾನು ಸರಿಯಾದ ಸಮಯ ಹಾಗೂ ದಿನ ನೀಡುತ್ತೇನೆ. ಚಾರಿಟಿಗಾಗಿ ಈ ಕೇಜ್​ ಫೈಟ್​ ಅಸಲಿ ಮ್ಯಾಚ್​​ ಮಾಡಲು ಮುಂದಾಗಿದ್ದರೂ ಎಲೋನ್​ ದಿನಾಂಕವನ್ನು ನಿಗದಿ ಮಾಡಲಿಲ್ಲ. ಬಳಿಕ ಅವರಿಗೆ ಸರ್ಜರಿ ಆಗಬೇಕಿದೆ. ಇದೀಗ ನನ್ನನ್ನು ಹಿಂಬದಿ ಪ್ರಯೋಗಕ್ಕೆ ಕರೆದಿದ್ದಾರೆ. ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವವರ ಜೊತೆಗೆ ಮಾತ್ರವೇ ನಾನು ಸ್ಪರ್ಧೆಯ ಕುರಿತು ಹೆಚ್ಚಿನ ಗಮನ ನೀಡುವುದಾಗಿ ತಿರುಗೇಟು ನೀಡಿದ್ದರು.

ಆರಂಭಿಕ ಹಂತದಲ್ಲಿ ಮೆಟಾ ಯಶಸ್ಸು ಕಂಡಾಗ ಜುಕರ್​ಬರ್ಗ್​​ ಮತ್ತು ಟೆಸ್ಲಾ ಸಿಇಒ ಮಸ್ಕ್​ ನಡುವೆ ಈ ಸ್ಪರ್ಧೆ ಏರ್ಪಟ್ಟಿತು. ಎಕ್ಸ್​ ಮೈಕ್ರೋಬ್ಲಾಗಿಂಗ್​ಗೆ ಸಮವಾದ ಥ್ರೇಡ್​ ಅನ್ನು ಬಿಡುಗಡೆ ಮಾಡುವ ಮೂಲಕ ಇಬ್ಬರ ನಡುವಿನ ಸಮರ ಬಹಿರಂಗವಾಗಿತ್ತು. ಎಕ್ಸ್​ಗೆ ಸಮವಾಗಿ ಅದೇ ರೀತಿಯಲ್ಲೇ ಬಿಡುಗಡೆ ಮಾಡಿದ ಥ್ರೇಡ್​​ ಆರಂಭದಲ್ಲಿ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿ ಕೂಡಾ ಆಗಿತ್ತು. ಆದರೆ ಇತ್ತೀಚೆಗೆ ಅದರ ಜನಪ್ರಿಯತೆ ಕುಸಿಯುತ್ತಿದೆ ಎಂದು ಅಂಕಿ- ಅಂಶಗಳು ತೋರಿಸುತ್ತಿವೆ.

ಇದನ್ನೂ ಓದಿ:Zuckerberg - Elon Musk: ಮಸ್ಕ್​ ಜೊತೆಗಿನ ಕೇಜ್​ ಫೈಟ್​ ಕುರಿತ ಅನುಮಾನಕ್ಕೆ ತೆರೆ ಎಳೆದ ಜುಕರ್​ಬರ್ಗ್​​

ABOUT THE AUTHOR

...view details